ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಕದ ಬಿಜೆಪಿ ಮುಖಂಡ ಮಾ. ನಾಗರಾಜ, ಬಿಜೆಪಿ ನಾಯಕ ತರುಣ್ ಚುಗ್ ಸೇರಿ 8 ನೂತನ ಚುನಾಯಿತ ಸಂಸದರು ಸೋಮವಾರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದರು.
ರಾಜ್ಯಸಭೆ ಅಧ್ಯಕ್ಷ ಸಿ.ಪಿ.ರಾಧಾಕೃಷ್ಣನ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಖರ್ಗೆ ಪ್ರತ್ಯೇಕವಾಗಿ ರಾಧಾಕೃಷ್ಣನ್ ಅವರ ಕಚೇರಿಯಲ್ಲಿ ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದರು. ಈ ವೇಳೆ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಜರಿದ್ದರು.ಉಳಿದ 7 ಮಂದಿ ರಾಜಸಭೆ ಸಭಾಂಗಣದಲ್ಲಿ ಶಪಥಗೈದರು. ಅವವರಲ್ಲಿ ತರುಣ್ ಚುಗ್, ಜಿತೇಂದ್ರ ಮೇಘಜಿಭಾಯ್ ಕಂಜಾರಿಯಾ, ಮಾನ್ಸಿಂಗ್ ಪರ್ಮಾರ್ (ಗುಜರಾತ್), ಮಾ. ನಾಗರಾಜ (ಕರ್ನಾಟಕ), ರಾಜೇಂದ್ರ ಹೀರಾಲಾಲ್ ಜೈನ್ (ಮಹಾರಾಷ್ಟ್ರ), ಅಧಿಕಾರಿ ಮಯೂಮ್ ಶಾರದಾ ದೇವಿ (ಮಣಿಪುರ) ಮತ್ತು ಅಲ್ಕಾ ಸಿಂಗ್ (ರಾಜಸ್ಥಾನ) ಇದ್ದಾರೆ.