ಎಸ್‌ಐಆರ್‌ ಚರ್ಚೆಗೆ ಅಧಿವೇಶನ ಕರೆದ್ರೆ ಚರ್ಚೆಗೆ ಬರ್ತೀರಾ?: ಶಾ

Published : Nov 03, 2026, 01:21 PM IST
Amit Shah

ಸಾರಾಂಶ

ಎಸ್‌ಐಆರ್ ವಿರುದ್ಧದ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ’ಚಲೋ ದೆಹಲಿ’ಗೆ ಸಡ್ಡು ಹೊಡೆದಿರುವ ಬಿಜೆಪಿ ಸಂವಿಧಾನ ಉಳಿಸಿ ಪಾದಯಾತ್ರೆ ಕೈಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್ ಭಾಗಿ

ಕೋಲ್ಕತಾ/ಭಾಗಲ್ಪುರ/ ಹೈದರಾಬಾದ್‌ : ಎಸ್‌ಐಆರ್ ವಿರುದ್ಧದ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟದ ’ಚಲೋ ದೆಹಲಿ’ಗೆ ಸಡ್ಡು ಹೊಡೆದಿರುವ ಬಿಜೆಪಿ ಸಂವಿಧಾನ ಉಳಿಸಿ ಪಾದಯಾತ್ರೆ ಕೈಗೊಂಡಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್ ಭಾಗಿಯಾಗಿದ್ದು, ಈ ವೇಳೆ ಎಸ್‌ಐಆರ್‌ ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸಿದ್ಧ. ರಾಹುಲ್‌ ಚರ್ಚೆಗೆ ಬರಲಿ’ ಎಂದು ಶಾ ಸವಾಲೆಸಿದ್ದಾರೆ.

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಹೆಸರಿನಲ್ಲಿ ಪ್ರತ್ಯೇಕ ಪಾದಯಾತ್ರೆ

ಉಭಯ ನಾಯಕರು ಭಾಗಲ್ಪುರ, ಕೋಲ್ಕತಾ ಮತ್ತು ಹೈದರಾಬಾದ್‌ನಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಹೆಸರಿನಲ್ಲಿ ಪ್ರತ್ಯೇಕ ಪಾದಯಾತ್ರೆ ನಡೆಸಿದರು. ಈ ವೇಳೆ ಹೈದರಾಬಾದ್‌ನಲ್ಲಿ ಮಾತನಾಡಿದ ಶಾ ವಿಪಕ್ಷಗಳ ಎಸ್‌ಐಆರ್‌ ಅಕ್ರಮ ಆರೋಪಗಳನ್ನು ತಳ್ಳಿ ಹಾಕಿದರು. ‘ರಾಹುಲ್‌ ಕೈಯಲ್ಲಿ ಸಂವಿಧಾನವನ್ನು ಹಿಡಿಯುತ್ತಾರೆ. ಆದರೆ ಅದಕ್ಕೆ ಅವರು ಬೆಲೆ ಕೊಡುವುದಿಲ್ಲ. ಇವಿಎಂ ಆಗಿರಲಿ, ಎಸ್‌ಐಆರ್ ಆಗಿರಲಿ ಅಥವಾ ಒಳನುಸುಳುಕೋರರ ವಿಷಯವೇ ಆಗಿರಲಿ. ನಾವು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸಿದ್ಧರಿದ್ದೇವೆ. ಚರ್ಚೆಗೆ ಬನ್ನಿ’ ಎಂದು ಸವಾಲು ಹಾಕಿದರು.

‘ಸಂಸತ್ತಿನ ಅಧಿವೇಶನ ನಡೆದರೆ, ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅನ್ನು ತುಂಡು ತುಂಡು ಮಾಡುತ್ತಾರೆ’ ಎಂದು ಗುಡುಗಿದರು.

ರಾಹುಲ್ ವಿದೇಶಿ ಟೂಲ್‌ ಕಿಟ್ - ನವೀನ್‌:

ಬಿಹಾರದ ಭಾಗಲ್ಪುರ ಹಾಗೂ ಬಂಗಾಳದ ಕೋಲ್ಕತಾದಲ್ಲಿ ಪಾದಯಾತ್ರೆ ನಡೆಸಿದ ನಿತಿನ್‌ ,‘ ಬಾರತದಲ್ಲಿ ಅಸ್ಥಿರತೆ ಸೃಷ್ಟಿಸಲು ರಾಹುಲ್‌ ಗಾಂಧಿಯನ್ನು ವಿದೇಶಿ ಬೆಂಬಲಿತ ಟೂಲ್‌ಕಿಟ್‌ ಬಳಸುತ್ತಿವೆ, ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಅವರು ವಿದೇಶಿ ಶಕ್ತಿಗಳ ಆಜ್ಞೆಯ ಮೇರೆಗೆ ವರ್ತಿಸುತ್ತಿದ್ದಾರೆ. ನಮ್ಮ ದೇಶವು ಸಂವಿಧಾನದಿಂದ ಆಳಲ್ಪಡುತ್ತದೆ ಎಂಬುದನ್ನು ಅವರು ನೆನಪಿನಲ್ಲಿಡಬೇಕು’ ಎಂದು ಕಿಡಿಕಾರಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನೇನು ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕಲು ಹೇಳಿದ್ನಾ: ಕುಮಾರಸ್ವಾಮಿ
ಪ್ರಜ್ವಲ್‌ ಕೇಸಲ್ಲಿ ಸಿಕ್ಕಂತೆ ಸ್ಟಿಂಗ್‌ ತನಿಖೆಗೂ ಪ್ರಶಸ್ತಿ ಸಿಗುತ್ತೆ: ಖರ್ಗೆ