ಕನ್ನಡಪ್ರಭ ವಾರ್ತೆ ಮಾಲೂರು
ರಾಜಕೀಯ ನೀತಿಯಿಂದ ಸೋಲು
ಕಾರ್ಗಿಲ್ ಯುದ್ದಕ್ಕೆ ಕಾರಣ, ಯುದ್ದ ಗೆದ್ದ ಬಗ್ಗೆ, ಹೋರಾಟ ಮಾಡಿ ವೀರಮರಣ ಅಪ್ಪಿದ ಯೋಧರ ಮಾಹಿತಿ, ಯುದ್ದ ದಲ್ಲಿ ಸೈನಿಕರ ಪಟ್ಟ ಪಾಡು ಗಳನ್ನು ಟಿ.ವಿ.ಪರದೆ ಮೇಲೆ ಪ್ರಾತ್ಯಾಕ್ಷತೆ ಮೂಲಕ ಅವರು ವಿವರಿಸಿದರು. ೧೯೬೨ ೧೯೬೫,೧೯೭೧ ಯುದ್ದಗಳಲ್ಲಿ ಆಧುನಿಕ ಶಾಸ್ತ್ರಾಶ್ತ್ರ ಇಲ್ಲದಿದ್ದರೂ ಹೋರಾಟ ನಡೆಸಿ ಗೆಲವಿನ ಅಂಚಿಗೆ ಬಂದಾಗ ನಮ್ಮ ದೇಶದ ರಾಜಕಾರಣಿಗಳು ಪ್ರಭಾವಿ ರಾಷ್ಟ್ರಗಳ ಒತ್ತಡಕ್ಕೆ ಮಣಿಯುವ ಮೂಲಕ ಯುದ್ದದ ಗೆಲುವನ್ನು ನಮ್ಮಿಂದ ದೂರ ಮಾಡಿದರು. ಆದರೆ ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೈನಿಕರ ಪಾಕಿಸ್ತಾನ ವಿರುದ್ಧದ ಸಾಧಿಸಿದ ಗೆಲವು ಮರೆಯಲು ಸಾಧ್ಯವಿಲ್ಲ ಎಂದರು.ನಮ್ಮ ದೇಶಕ್ಕೆ ಮೂರು ಕಡೆ ಸಮುದ್ರ,ಇನ್ನೊಂದಡೆ ಹಿಮಾಲಯ ಮೂಲಕ ಪ್ರಕೃತಿಯೇ ರಕ್ಷಣೆ ನೀಡುತ್ತಿದೆ. ಆದರೆ ಉಳಿದಿರುವ ಇನ್ನೊಂದು ದಿಕ್ಕಿನಲ್ಲಿರುವ ಪಕ್ಕದ ರಾಷ್ಟ್ರಗಳು ನಮ್ಮ ವಿರೋಧಿಗಳಾಗಿ ಸದಾ ತೊಂದರೆ ನೀಡುತ್ತಿದ್ದಾರೆ. ಇದರಿಂದ ನಮ್ಮ ದೇಶದ ಗಡಿಭಾಗವಾದ ೧೪ ಸಾವಿರ ಕಿ.ಮೀ.ಉದ್ದಕ್ಕೂ ನಮ್ಮ ಸೈನಿಕರು ಗಡಿಕಾಯಬೇಕಾಗಿದೆ ಎಂದರು.