ರೋಹಿಣಿ ಸಿಂಧೂರಿ ವಿರುದ್ಧದ ಅಕ್ರಮಗಳ ತನಿಖೆ ದಿಕ್ಕು ತಪ್ಪಿಸಲಾಗಿದೆ: ಸಾ.ರಾ. ಮಹೇಶ್

KannadaprabhaNewsNetwork |  
Published : Dec 01, 2024, 01:34 AM ISTUpdated : Dec 01, 2024, 05:18 AM IST
13 | Kannada Prabha

ಸಾರಾಂಶ

ರೋಹಿಣಿ ಸಿಂಧೂರಿ ಅವರ ವಿರುದ್ಧ ನಾನು ಮಾಡಿರುವ ಆರೋಪ ಸಾಬೀತು ಆಗಬೇಕು‌. ನಿಷ್ಪಕ್ಷಪಾತ ತನಿಖೆ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡೋದಿಲ್ಲ, ಪ್ರಾಮಾಣಿಕ ಅಧಿಕಾರಿಗಳಿಗೆ ಸಹಕಾರ ಕೊಡುತ್ತಾರೆ ಎಂದುಕೊಂಡಿದ್ದೆ.

 ಮೈಸೂರು : ಮೈಸೂರು ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ವಿರುದ್ಧದ ಅಕ್ರಮಗಳ ಕುರಿತ ತನಿಖೆಯ ದಿಕ್ಕನ್ನು ತಪ್ಪಿಸಲಾಗಿದೆ ಎಂದು ಮಾಜಿ ಸಚಿವ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನಿಖೆಯ ದಿಕ್ಕು ತಪ್ಪಿಸಿರುವವರ ವಿರುದ್ಧ ನ್ಯಾಯಾಲಯದ‌ಮೊರೆ ಹೋಗುತ್ತೇನೆ. ಯಾರು ಇದ್ದಾರೆ ಇದರ ಹಿಂದೆ? ಈ ಬೆಳವಣಿಗೆಯಿಂದ ಬಹಳಷ್ಟು ನೋವಾಗುತ್ತಿದೆ.

ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ. ನಾನು ಸುಮ್ಮನಿರುವುದೇ ದೌರ್ಬಲ್ಯವಲ್ಲ. ರೋಹಿಣಿ ಸಿಂಧೂರಿ‌ವಿರುದ್ಧ ನಡೆಯುತ್ತಿದ್ದ ತನಿಖೆಯ ಸತ್ಯಾಸತ್ಯತೆ ಹೊರಬರಬೇಕು ಎಂದು ಆಗ್ರಹಿಸಿದರು.

ರೋಹಿಣಿ ಸಿಂಧೂರಿ ಅವರ ವಿರುದ್ಧ ನಾನು ಮಾಡಿರುವ ಆರೋಪ ಸಾಬೀತು ಆಗಬೇಕು‌. ನಿಷ್ಪಕ್ಷಪಾತ ತನಿಖೆ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡೋದಿಲ್ಲ, ಪ್ರಾಮಾಣಿಕ ಅಧಿಕಾರಿಗಳಿಗೆ ಸಹಕಾರ ಕೊಡುತ್ತಾರೆ ಎಂದುಕೊಂಡಿದ್ದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರೋಹಿಣಿ ಸಿಂಧೂರಿ ವಿರುದ್ಧ ನಾನು ಮಾಡಿದ್ದ ಆರೋಪಗಳ ಬಗ್ಗೆ ತನಿಖೆ ಮಾಡಲು 17-5-2022 ರಲ್ಲಿ ಸರ್ಕಾರ ಕಮಿಟಿ ಮಾಡಿತ್ತು. ತನಿಖೆಗೆ ಜಯರಾಮ್ ಅವರನ್ನು ನೇಮಿಸಿದ್ದರು. 1-6-2022 ರಲ್ಲಿ ಮುಖ್ಯ ಕಾರ್ಯದರ್ಶಿ ನಿವೃತ್ತಿ ಆಗುವ ಒಂದು ದಿನ ಮುಂಚೆ ವಸತಿ ಇಲಾಖೆಯ ರವಿಶಂಕರ್ ಅವರನ್ನು ನೇಮಕ ಮಾಡಿದರು. ನನ್ನ ಆರೋಪ ಸುಳ್ಳಾಗಿದ್ದರೇ ಜಯರಾಮ್ ಅವರನ್ನು ಏಕೆ ಬದಲಾಯಿಸಿದ್ದೀರಿ ಎಂದು ಅವರು ಪ್ರಶ್ನಿಸಿದರು.

9-5-2021 ರಲ್ಲಿ ಅಂದಿನ ಸಿಎಂಗೆ ಪತ್ರ ಬರೆದಿದ್ದೆ. ರೋಹಿಣಿ ಸಿಂಧೂರಿ ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯ ಮಾಡಿದ್ದೆ. ರೋಹಿಣಿ ಸಿಂಧೂರಿ 4ಜಿ ಎಕ್ಷಮ್ಷನ್ ನಡಿ 10 ಕೋಟಿ ರು. ಅನ್ನು ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಟ್ಯಾಬ್ಲೆಟ್ ಕೊಟ್ಟಿದ್ದರೂ ಹಣ ಬಿಡುಗೆ ಮಾಡಿರಲಿಲ್ಲ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 32 ಜನ ಇವರಿಂದಲೇ ಸತ್ತರು ಎಂದು ಗೊತ್ತಿದೆ. ಜಿಲ್ಲಾಧಿಕಾರಿ ನಿವಾಸದ ನವೀಕರಣ, ಈಜುಕೊಳ ನಿರ್ಮಾಣವನ್ನು ಕಾನೂನು ಬಾಹಿರವಾಗಿ ಮಾಡಿದರು. ಇವರು ಇದ್ದ ಎರಡು ವರ್ಷಕ್ಕೆ 16.35 ಲಕ್ಷ ರು. ಖರ್ಚು ಮಾಡಿದ್ದರು ಎಂದು ಅವರು ಆರೋಪಿಸಿದರು.

6 ರುಪಾಯಿ ಬಟ್ಟೆ ಬ್ಯಾಗ್ ಗೆ 48 ರು. ಕೊಟ್ಟಿದ್ದರು. ಜಿಲ್ಲಾಧಿಕಾರಿಗಳು ಕಾರ್ಯಾದೇಶ ಮಾಡಲು 2.5 ಕೋಟಿ ಅಷ್ಟೇ ಅವಕಾಶ ಇತ್ತು. ಆದರೆ, ಇವರು 8.5 ಕೋಟಿ ಕಾರ್ಯಾದೇಶ ಕೊಟ್ಟಿದ್ದರು. ಈ ಎಲ್ಲಾ ವಿಚಾರಗಳನ್ನು ವಿಧಾನಸೌಧದಲ್ಲಿ ಚರ್ಚೆ ಮಾಡಿದ್ದೆ. ಹೀಗಾಗಿ, ರೋಹಿಣಿ ಸಿಂಧೂರಿ ವಿರುದ್ಧದ ತನಿಖೆಯ ಸತ್ಯಾಸತ್ಯತೆ ಹೊರಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಮೇಯರ್ ಆರ್. ಲಿಂಗಪ್ಪ, ಪಾಲಿಕೆ ಮಾಜಿ ಸದಸ್ಯರಾದ ಎಸ್.ಬಿ.ಎಂ. ಮಂಜು, ಕೆ.ವಿ. ಶ್ರೀಧರ್, ಭಾಗ್ಯ ಮಾದೇಶ್, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಜೆಡಿಎಸ್ ವಕ್ತಾರ ರವಿಚಂದ್ರೇಗೌಡ ಮೊದಲಾದವರು ಇದ್ದರು.

PREV

Recommended Stories

ರಸ್ತೆ ಗುಂಡಿ ಮುಚ್ಚಲು, ಸ್ವಚ್ಛತೆಗೆ ಅಧಿಕಾರಿಗಳು ಟೊಂಕಕಟ್ಟಿ ನಿಲ್ಲಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''