ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಜೆಡಿಎಸ್‌ - ಬಿಜೆಪಿ ಶಾಸಕರಿಗೆ ಸ್ವಾಗತವಿದೆ : ಚಲುವರಾಯಸ್ವಾಮಿ

Published : Jan 21, 2025, 01:03 PM IST
N. Chaluvarayaswamy

ಸಾರಾಂಶ

ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಜೆಡಿಎಸ್‌-ಬಿಜೆಪಿ ಶಾಸಕರಿಗೆ ಸ್ವಾಗತವಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.  

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವ ಜೆಡಿಎಸ್‌-ಬಿಜೆಪಿ ಶಾಸಕರಿಗೆ ಸ್ವಾಗತವಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸೇರ್ಪಡೆಯಾಗಲು ಇಚ್ಛಿಸುವ ಜೆಡಿಎಸ್‌ ಮತ್ತು ಬಿಜೆಪಿಯ ಯಾವ ಶಾಸಕರೂ ನನ್ನ ಜೊತೆ ಸಂಪರ್ಕದಲ್ಲಿಲ್ಲ. 

ನಾನು ಜೆಡಿಎಸ್‌ನಿಂದ ಹೊರಬಂದವನು. ಹಾಗಾಗಿ ನನ್ನ ಜೊತೆ ಮಾತನಾಡಲು ಜೆಡಿಎಸ್‌ ಶಾಸಕರಿಗೆ ಮುಜುಗರ ಇರಬಹುದು. ಪಕ್ಷ ಸೇರ್ಪಡೆ ಸಂಬಂಧ ಹಿರಿಯ ನಾಯಕರ ಜೊತೆ ಮಾತನಾಡಿರಬಹುದು. ಕಾಂಗ್ರೆಸ್‌ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ ಎಂದು ತಿಳಿಸಿದರು.

ಶಾಸಕರಿಗೆ ಅಸಮಾಧಾನವಿಲ್ಲ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಅಹಿತಕರ ಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ಬದ್ಧತೆ ಇದೆ. ಅನುದಾನಕ್ಕೆ ಸಂಬಂಧಿಸಿ ನಮ್ಮ ಯಾವ ಶಾಸಕರೂ ಅಸಮಾಧಾನಗೊಂಡಿಲ್ಲ. ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರು. ಅನುದಾನ ನೀಡಲಾಗಿದೆ ಎಂದು ತಿಳಿಸಿದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!