ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ರಾತ್ರಿ ನಡೆದ ‘ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದ ಜತೆಗೆ 4ನೇ ಅಂಗ ಪತ್ರಿಕೋದ್ಯಮ ಮಹತ್ವದ ಪಾತ್ರ ಪಡೆದಿದೆ. ಹಿಂದೆಂದಿಗಿಂತಲೂ ಇಂದು ಪತ್ರಕರ್ತರ ಪಾತ್ರ ಮಹತ್ವ ಪಡೆದಿದೆ. ರಾಜಕಾರಣಿಗಳಿಂದ ಹಲವು ವೇಳೆ ಕೆಲ ಕೆಲಸಗಳು, ಬದಲಾವಣೆ ಅಸಾಧ್ಯ, ಪಕ್ಷದ ರಾಜಕೀಯ ಸೇರಿ ಹಲವು ವಿಚಾರಗಳು ಅಂದುಕೊಂಡಿದ್ದನ್ನು ಮಾಡಲು ಬಿಡುವುದಿಲ್ಲ. ಹೀಗಾಗಿ ಶಾಸಕಾಂಗದ ಬಳಿ ಸುಧಾರಣೆ ಸಾಧ್ಯವಿದೆಯೊ ಇಲ್ಲವೊ ಗೊತ್ತಿಲ್ಲ. ಆದರೆ, ಪತ್ರಿಕಾ ರಂಗ ರಾಜ್ಯವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಪತ್ರಕರ್ತರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡುವ ಗುಣವನ್ನು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ಬೇಕಾದ ಎಲ್ಲ ಬೆಂಬಲವನ್ನು ನಾವು ನೀಡುತ್ತೇವೆ. ಈ ಹಿಂದೆ ವಿಧಾನಸಭೆಯಲ್ಲಿ ಮಾಧ್ಯಮವನ್ನು ನಿಷೇಧಿಸಿದಾಗ ವಿಧಾನಪರಿಷತ್‌ನಲ್ಲಿ ನಾನು ಅದಕ್ಕೆ ಅವಕಾಶ ಕೊಟ್ಟೆ. ಮಾಧ್ಯಮದವರು ಇದ್ದರೆ ನಾವು ಎಚ್ಚರವಾಗಿ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದೆ ಎಂದು ಹೇಳಿದರು.ತಿಪಟೂರು ಶಾಸಕ ಕೆ, ಷಡಕ್ಷರಿ ಇದ್ದರು.
ಪ್ರಭಾಕರ್‌ಗೆ ಪ್ರಶಸ್ತಿ ಪ್ರದಾನ:ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೆ ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜತೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಆನಂದ ಬೈದನಮನೆ, ಇತರ ಸಂಸ್ಥೆಗಳ ಸುಭಾಶ್‌ಚಂದ್ರ ಎನ್.ಎಸ್., ಲೋಚನೇಶ್ ಹೂಗಾರ್, ಮಲ್ಲಿಕಾ ಚರಣವಾಡಿ ಕೆ., ನಾಗರಾಜ ಎಂ., ಅತ್ತಿಗುಪ್ಪೆ ರವಿಕುಮಾರ್, ಶಿಲ್ಪಾ ಫಡ್ನಿಸ್ ಸೇರಿದಂತೆ ಸಾಧಕ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.