ಸುಪ್ರಿಯಾ ಮೇಲೆ ಕಾನೂನು ಕ್ರಮಕ್ಕೆ ಕಂಗನಾ ಚಿಂತನೆ

KannadaprabhaNewsNetwork | Updated : Mar 27 2024, 07:56 AM IST

ಸಾರಾಂಶ

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್‌ ಅವರು, ತಮ್ಮ ಕುರಿತು ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಅವರ ಮೇಲೆ ಕಾನೂನು ಕ್ರಮಕ್ಕೆ ಚಿಂತನೆ.

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್‌ ಅವರು, ತಮ್ಮ ಕುರಿತು ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಕುರಿತು ಚಿಂತಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ‘ಸುಪ್ರಿಯಾ ತಮ್ಮ ಆಕ್ಷೇಪಾರ್ಹ ಪೋಸ್ಟ್‌ ಮೂಲಕ ಛೋಟಾ ಕಾಶಿ ಎಂದೇ ಕರೆಯಲಾಗುವ ಮಂಡಿ ಕ್ಷೇತ್ರದ ಜನತೆಯನ್ನು ಅವಮಾನಿಸಿದ್ದಾರೆ. 

ಆಕೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸುತ್ತಿದ್ದೇನೆ’ ಎಂದು ತಿಳಿಸಿದರು. ಇದೇ ವೇಳೆ ಮಂಗಳವಾರ ರಾತ್ರಿ ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೂ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿದರು.

ಸುಪ್ರಿಯಾ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಕಂಗನಾಗೆ, ‘ಮಂಡಿಯಲ್ಲಿ ನಿನ್ನ ರೇಟ್ ಎಷ್ಟು?’ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್‌ ಕಿಡಿ: ಈ ನಡುವೆ ಕಾಂಗ್ರೆಸ್‌ ಪಕ್ಷ ಈ ಬಗ್ಗೆ ಪ್ರತಿಕ್ರಿಯಿಸಿ, ‘ರಾಜಕೀಯದಲ್ಲಿ ಕೀಳು ಮಾತುಗಳನ್ನು ಕಾಂಗ್ರೆಸ್ ಅನುಮೋದಿಸುವುದಿಲ್ಲ. ಸುಪ್ರಿಯಾ ಅವರು ಯಾರಿಂದ ಈ ಸಂದೇಶ ರವಾನೆ ಆಗಿದೆ ಎಂದು ಪರಿಶೀಲಿಸುವ ಭರವಸೆ ನೀಡಿದ್ದಾರೆ’ ಎಂದಿದೆ.

Share this article