;Resize=(412,232))
ಬೆಂಗಳೂರು : ಕನ್ನಡಪ್ರಭ ತರೀಕೆರೆ ವರದಿಗಾರ ಅನಂತ ನಾಡಿಗ್, ಪತ್ರಕರ್ತ ಪ್ರಭುಸ್ವಾಮಿ ನಟೇಕರ್ ಸೇರಿ 30 ಮಂದಿ ಪತ್ರಕರ್ತರಿಗೆ 2025ನೇ ಸಾಲಿನ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದೆ.
ಉಳಿದಂತೆ ಹಿರಿಯ ಪತ್ರಕರ್ತರಾದ ಡಿ.ಕುಮಾರಸ್ವಾಮಿ, ಬನಶಂಕರ ಆರಾಧ್ಯ, ವೈ.ಎಲ್.ಮಂಜುನಾಥ್, ಅನಂತ ನಾಡಿಗ, ಗುರುರಾಜ್ ವಾಮನರಾವ್ ಜಮಖಂಡಿ, ಮಲ್ಲಿಕಾಚರಣ ವಾಡಿ, ಎಂ.ಎಂ.ಪಾಟೀಲ್, ಎಲ್.ವಿವೇಕಾನಂದ, ಆರ್.ಪಿ.ಭರತ್‌ರಾಜ್ ಸಿಂಗ್, ಪ್ರೊ.ಪೂರ್ಣಾನಂದ, ಮೊಹಮ್ಮದ್ ಅಸದ್, ತುಂಗರೇಣುಕಾ, ಮೊಹಿಯುದ್ದೀನ್ ಪಾಷಾ, ರುದ್ರಪ್ಪ ಅಸಂಗಿ, ಸತೀಶ್ ಆಚಾರ್ಯ, ಸೋಮಶೇಖರ್ ಪಡುಕೆರೆ, ಗುಲ್ನಾರ್ ಮಿರ್ಝಾ, ಗಣೇಶ ಹೆಗಡೆ ಇಟಗಿ, ಎಚ್.ಎಸ್.ಆರತಿ, ಕೆ.ಲಕ್ಷ್ಮಣ, ಉಮಾ ಅನಂತ್, ಮಂಜುನಾಥ ಮಹಾಲಿಂಗಪುರ, ಟಿ.ಮಂಜುನಾಥ, ಪ್ರತಿಮಾ ನಂದಕುಮಾರ್, ಎನ್.ಸಿದ್ದೇಗೌಡ, ಸಂಜೀವ ಕಾಂಬ್ಳೆ, ಹೇಮಾ ವೆಂಕಟ್, ಕೆ.ಆರ್.ನೀಲಕಂಠ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟಿಸಿರುವುದಾಗಿ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಎಂ.ಸಹನಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಂದೋಲನ ದತ್ತಿ ಪ್ರಶಸ್ತಿ: ಸುವರ್ಣಗಿರಿ ಪತ್ರಿಕೆ, ಅಭಿಮಾನಿ ದತ್ತಿ ಪ್ರಶಸ್ತಿ: ಶಿವು ಹುಣಸೂರು,ಮೈಸೂರು ದಿಗಂತ ದತ್ತಿ ಪ್ರಶಸ್ತಿ: ಸಂತೋಷ ಈ.ಚಿನಗುಡಿ, ಅಭಿಮನ್ಯು ದತ್ತಿ ಪ್ರಶಸ್ತಿ: ಚಂದ್ರಶೇಖರ ಬೆನ್ನೂರು, ಪ್ರಜಾಸಂದೇಶ ದತ್ತಿ ಪ್ರಶಸ್ತಿ: ನಾಗರಾಜು ವೈ, ಡಾ.ಅಂಬೇಡ್ಕರ್ ಮೂಕನಾಯಕ ದತ್ತಿ ಪ್ರಶಸ್ತಿ: ಡಾ.ಎ.ನಾರಾಯಣ, ಅರಗಿಣಿ ದತ್ತಿ ಪ್ರಶಸ್ತಿ: ಚೇತನ್ ನಾಡಿಗೇರ್, ಬಸವರಾಜ ದೊಡ್ಡಮನಿ ಕೃಷಿ ಪತ್ರಿಕೋದ್ಯಮ ಪ್ರಶಸ್ತಿ: ಸಿದ್ದೇಶ ತ್ಯಾಗಟೂರು, ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ: ಪ್ರಹ್ಲಾದ್ ಕುಳಲಿ,
ಕೆ.ಯು.ಡಬ್ಲ್ಯೂ.ಜೆ. ದತ್ತಿ ಪ್ರಶಸ್ತಿ: ಕೆ.ಆನಂದ ಶೆಟ್ಟಿ.