;Resize=(412,232))
ಬೀದರ್ : ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದು ಅನೇಕ ಜನ ಪರ ಮತ್ತು ಜೀವ ಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಪಾಲಿನ ದೇವರಾಗಿ, ಲೋಕನಾಯಕನಾಗಿ ಪ್ರಖ್ಯಾತವಾಗಿದ್ದ ಜಾತ್ಯತೀತ ವ್ಯಕ್ತಿತ್ವದ ಭಾಲ್ಕಿ ಕ್ಷೇತ್ರದ ಹಿರಿಯ ಜೀವಿ, ಶತಾಯುಷಿಯಾಗಿದ್ದ ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಇಹಲೋಕ ತ್ಯಜಿಸಿದ್ದಾರೆ.
ಹಲವು ದಿನಗಳ ಹಿಂದೆ ಬೀದರ್‌ನ ಗುದಗೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದ ಡಾ। ಭೀಮಣ್ಣ ಖಂಡ್ರೆ ಅವರನ್ನು ಅವರ ಕೊನೆಯ ಆಸೆಯಂತೆ ಮನೆಯಲ್ಲಿಯೇ ಕೊನೆ ಉಸಿರೆಳೆಯುವ ಸಂಕಲ್ಪದಂತೆ ಕುಟುಂಬಸ್ಥರು ಅವರನ್ನು ಕೆಲ ದಿನಗಳ ಹಿಂದೆ ಭಾಲ್ಕಿಯ ಮನೆಗೆ ಕರೆತಂದು ಅಲ್ಲಿಯೂ ತಜ್ಞ ವೈದ್ಯಕೀಯ ತಂಡದ ನಿಗಾದಲ್ಲಿ ಚಿಕಿತ್ಸೆ ಕಲ್ಪಿಸಲಾಗಿತ್ತಾದರೂ ಶನಿವಾರ ನಸುಕಿನ ಜಾನ ಕೊನೆಯುಸಿರೆಳೆದಿದ್ದಾರೆ.
ಶತಾಯುಷಿ ಡಾ। ಭೀಮಣ್ಣ ಖಂಡ್ರೆ ಅವರು ಭಾಲ್ಕಿಯ ತಮ್ಮ ನಿವಾಸದಲ್ಲಿ ಶುಕ್ರವಾರ ಜ.16ರ ರಾತ್ರಿ 11.05ರ ಹೊತ್ತಿಗೆ ಕೊನೆ ಉಸಿರೆಳೆದಿದ್ದಾರೆ, ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಪುತ್ರ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಪ್ರಕಟಿಸಿದರು.1925ರ ಜ.8ರಂದು ಜನ್ಮ ತಾಳಿದ ಭೀಮಣ್ಣ ಖಂಡ್ರೆ ಅವರು ಐವರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ.