)
ಕನ್ನಡಪ್ರಭ ವಾರ್ತೆ ಕೋಲಾರ
ನಿನ್ನೆ ಮೊನ್ನೆಯವರಿಗೂ ಮೈತ್ರಿ ಕೂಟದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಲೆಕ್ಕಾಚಾರ ಇತ್ತಾದರೂ ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ ಸ್ಥಾನ ಉಳಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್‌ನ ಭದ್ರಕೋಟೆಕೋಲಾರ ಮೀಸಲು ಲೋಕಸಭಾ ಕ್ಷೇತ್ರ ಅರಂಭದಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತ ಬಂದಿರುವ ಕ್ಷೇತ್ರ ಎರಡು ಬಾರಿ ಹೊರತುಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ನಿರಂತರವಾಗಿ ಚುನಾವಣೆ ಗೆದ್ದಿರುತ್ತಾರೆ. ಹಾಗಾಗಿ ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನಬಹುದು. ಆಗೊಮ್ಮೆ ೧೯೮೪ರಲ್ಲಿ ನೇಗಿಲು ಹೊತ್ತ ಗುರುತಿನ ಜನತಾ ಪಕ್ಷದ ಅಭ್ಯರ್ಥಿ ವಿ.ವೆಂಕಟೇಶ್ ಹಾಗೂ ಹೀಗೊಮ್ಮೆ ೨೦೧೯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಗೆದ್ದಿದ್ದು ಹೊರತುಪಡಿಸಿದರೆ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಗೆದ್ದಿರುವುದು ಇಲ್ಲಿ ಇತಿಹಾಸವಾಗಿದೆ.
ಸೋಲಿಲ್ಲದ ಸರದಾನಿಗೆ ಸೋಲು
ನಂತರ ೧೯೮೯ ಕಾಂಗ್ರೆಸ್ ಅನೇಕಲ್‌ನ ವೈ.ರಾಮಕೃಷ್ಣ ಗೆಲುವು ಸಾಧಿಸಿದ್ದರೆ ೧೯೯೧ ರಿಂದ ೧೯೯೬, ೧೯೯೮, ೧೯೯೯, ೨೦೦೪, ೨೦೦೯, ೨೦೧೪ ಡಬಲ್ ಹ್ಯಾಟ್ರಿಕ್ ಬಾರಿಸಿ ಏಳು ಬಾರಿ ಕೋಲಾರದ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದ ಕೆ.ಎಚ್.ಮುನಿಯಪ್ಪ ೨೦೧೯ ಚುನಾವಣೆಯಲ್ಲಿ ಸ್ವಪಕ್ಷೀಯರ ಪ್ರಬಲ ವಿರೋಧದಿಂದ ಬಾರಿ ಅಂತರದಲ್ಲಿ ಸೋಲುಂಡರು.ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಸ್ಥಳೀಯ ರಾಜಕೀಯ ಪಂಡಿತರು ಹೇಳುವುದೇನೆಂದರೆ ಹಿಂದೆಲ್ಲಾ ಕೂಡಿ ಕಳೆಯುವ ಅಂಕ ಗಣಿತದ ಸಿಂಪಲ್ ರಾಜಕೀಯ ಸ್ಥಳೀಯತೆ, ವ್ಯಕ್ತಿ ಪ್ರಾಬಲ್ಯತೆ, ಇವುಗಳನ್ನಿಟ್ಟುಕೊಂಡು ರಾಜಕೀಯ ಅಭ್ಯರ್ಥಿ ಆಯ್ಕೆ ಮಾಡಬಹುದಿತ್ತು, ಕಾಲ ಬದಲಾಗಿದೆ ಹಿಂದಿನ ಅಂಕ ಗಣಿತದಂತೆ ಅಭ್ಯರ್ಥಿ ಅಯ್ಕೆ ಮಾಡುವುದು ಕಷ್ಟ ವಾಗುತ್ತದೆ, ಹೀಗೆನಿದ್ದರು ಜಾತಿ-ಒಳಜಾತಿಗಳ ಜೊತೆಗೆ ಸ್ವಪಕ್ಷೀಯರ ಒಳ ಏಟುಗಳ ಲೆಕ್ಕಾಚಾರದಲ್ಲಿ ಎಲ್ಲರೂ ಒಪ್ಪುವಂತ ಅಭ್ಯರ್ಥಿಯನ್ನು ಗುಣಾಕಾರದ ಲೆಕ್ಕದಲ್ಲಿ ಆಯ್ಕೆ ಮಾಡಿದರಷ್ಟೇ ರಾಜಕೀಯ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ.
ಕಾದು ನೋಡುವ ತಂತ್ರಹೀಗಾಗಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಮಾಡುವವರಿಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಫೈನಲ್ ಮಾಡುವ ಹಾಗೆ ಕಾಣುತ್ತಿಲ್ಲ. ಇದರ ಮಧ್ಯೆ ಬದಲಾಗದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಯಾರೇ ಅಧಿಕಾರದಲ್ಲಿ ಇರಲಿ ಬಿಡಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವುದು ಬಿಜೆಪಿ ಮಂತ್ರ.