ಕೆಆರ್‌ಎಸ್ ತುಂಬಿರುವುದರಿಂದ ಬಹಳ ಜನರಿಗೆ ನಿದ್ದೆ ಬರಲ್ಲ : ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Jun 28, 2025, 12:18 AM ISTUpdated : Jun 28, 2025, 06:43 AM IST
n chaluvarayaswamy

ಸಾರಾಂಶ

ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸರಿಯಾಗಿ ಮಳೆ ಬರಲ್ಲ. ಕೆಆರ್‌ಎಸ್ ತುಂಬಲ್ಲ ಎನ್ನುತ್ತಿದ್ದರು. ಈಗ ಜನರಿಗೆ ಪಾಪ ನೋವಾಗುತ್ತಿದೆ. ಜೊತೆಗೆ ನಿದ್ದೆಯೂ ಬರುತ್ತಿಲ್ಲ.

  ಮಂಡ್ಯ :  ರಾಜ್ಯದಲ್ಲಿ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಕೃಷ್ಣರಾಜಸಾಗರ ಜಲಾಶಯ ತುಂಬಿರುವುದರಿಂದ ಬಹಳ ಜನರಿಗೆ ನಿದ್ದೆ ಬರುತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. 

ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸರಿಯಾಗಿ ಮಳೆ ಬರಲ್ಲ. ಕೆಆರ್‌ಎಸ್ ತುಂಬಲ್ಲ ಎನ್ನುತ್ತಿದ್ದರು. ಈಗ ಜನರಿಗೆ ಪಾಪ ನೋವಾಗುತ್ತಿದೆ. ಜೊತೆಗೆ ನಿದ್ದೆಯೂ ಬರುತ್ತಿಲ್ಲ ಎಂದರು.

ಉತ್ತಮ ಮಳೆಯಿಂದಾಗಿ ರಾಜ್ಯದ ಎಲ್ಲ ಕೆರೆ ಕಟ್ಟೆಗಳು ತುಂಬಿವೆ. ರೈತರು, ಜನತೆ ಖುಷಿಯಾಗಿದ್ದಾರೆ. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಇದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಕೋರ್ಟ್ ತೀರ್ಪಿಗೆ ತಲೆಬಾಗುತ್ತೇವೆ:

ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಯೋಜನೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿ ಕೋರ್ಟ್ ತೀರ್ಪಿಗೆ ತಲೆಬಾಗುತ್ತೇವೆ. ನ್ಯಾಯಾಲಯದ ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು. ನಾವು ಸಹ ಬದ್ಧರಾಗಿದ್ದೇವೆ ಎಂದರು.

ನ್ಯಾಯಾಲಯಕ್ಕೆ ಏನು ಸಮಜಾಯಿಷಿ ಕೊಡಬೇಕೋ ನಮ್ಮ ಸರ್ಕಾರ ಕೊಡುತ್ತೆದೆ. ತಡೆಯಾಜ್ಞೆ ತೆರವುಗೊಳಿಸಿ ಮುಂದುವರಿದರೆ ಇವರ ಜೊತೆ ಮಾತನಾಡುತ್ತೇವೆ. ತಡೆಯಾಜ್ಞೆ ಇದ್ದರೆ ನಾವು ಕೆಲಸ ಮಾಡುವುದಕ್ಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಕಾದು ನೋಡೋಣ:

ಕೋರ್ಟ್ ತೀರ್ಮಾನ ಬಿಟ್ಟು ಏನು ಮಾಡಲ್ಲ. ಇಂತಹ ಹೋರಾಟಗಳು ಸಹಜ. ಕುಮಾರಸ್ವಾಮಿ ಬ್ರಿಡ್ಜ್ ಮಾಡಲೊರಟಾಗಲೂ ಸ್ಟೇ ತಂದಿದ್ದರು. ಸರ್ಕಾರದ ಹಿನ್ನಡೆ ಅನ್ನೋದಕ್ಕೆ ಆಗುತ್ತಾ. ಸಾಮಾನ್ಯ ಜನ ಹೋರಾಟ ಮಾಡಬಹುದು. ಡ್ಯಾಂ ತೊಂದರೆ, ಜನರ ಸಮಸ್ಯೆ ಇದರ ಬಗ್ಗೆ ವರದಿ ಕೇಳುತ್ತದೆ. ಕೊಡುತ್ತಾರೆ, ಸುನಂದಾ ಜಯರಾಮ್ ಅವರು ಹೋರಾಟಗಾರರು ಒಳ್ಳೆಯದಾಗಲಿ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ವರ್ಷ ಮಳೆ ಬರಲಿಲ್ಲ ಎಂಬ ಕಾರಣಕ್ಕೆ ಇದೊಂದು ಶಾಪಗ್ರಸ್ತ ಸರ್ಕಾರ ಎಂದು ವಿರೋಧ ಪಕ್ಷದವರು ಹೀಯಾಳಿಸಿದರು. ಆದರೆ, ಕಳೆದ ಹಾಗೂ ಈ ವರ್ಷದಿಂದ ಸಮೃದ್ಧ ಮಳೆಯಾಗಿ ಕಾವೇರಿ ಜಲಾನಯನ ಪ್ರದೇಶದ ಎಲ್ಲ ಅಣೆಕಟ್ಟೆಗಳು, ಕೆರೆ-ಕಟ್ಟೆಗಳು ಭರ್ತಿಯಾಗಿವೆ. ಈಗ ವಿರೋಧ ಪಕ್ಷವದರು ಏನಂತಾರೆ.

-ಪಿ.ರವಿಕುಮಾರ್‌ ಶಾಸಕರು, ಮಂಡ್ಯ ವಿಧಾನಸಭಾ ಕ್ಷೇತ್ರ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

17ಕ್ಕೆ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ