ವಾಷಿಂಗ್ಟನ್: ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆಯನ್ನು ಅಮೆರಿಕದಲ್ಲಿ ಭಾರತದ ರಾಷ್ಟ್ರಗೀತೆ ಹಾಡಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾಲಿಗೆರಗಿ ಜನಪ್ರಿಯರಾಗಿದ್ದ ಖ್ಯಾತ ಗಾಯಕಿ ಮೇರಿ ಮಿಲಿಬೆನ್ ಖಂಡಿಸಿದ್ದಾರೆ. ಜೊತೆಗೆ ನಿತೀಶ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಮೇರಿ,‘ನಿತೀಶ್ ಕುಮಾರ್ ಹೇಳಿಕೆಯಿಂದಾಗಿ ಅವಮಾನವಾಗಿದೆ. ಈ ಕೂಡಲೇ ನಿತೀಶ್ ಕುಮಾರ್ ರಾಜೀನಾಮೆ ನೀಡಬೇಕು. ಅವರ ಜಾಗಕ್ಕೆ ಮಹಿಳೆ ಬರಬೇಕು. ಆಗ ನಿಜವಾದ ಮಹಿಳಾ ಅಭಿವೃದ್ಧಿಯಾಗುತ್ತದೆ. ಈ ಕೆಲಸವನ್ನು ಬಿಜೆಪಿ ಮಾಡಬೇಕು. ಒಂದು ವೇಳೆ ನಾನು ಭಾರತದ ಪ್ರಜೆಯಾಗಿದ್ದರೆ ಬಿಹಾರದಲ್ಲಿ ಚುನಾವಣೆಗೆ ನಿಲ್ಲುತ್ತಿದೆ’ ಎಂದು ಹೇಳಿದ್ದಾರೆ.