ಸಚಿವರಿಂದ ಜನರಿಗೆ ಸುಳ್ಳು ಮಾಹಿತಿ : ಎಚ್. ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Nov 02, 2026, 02:30 AM ISTUpdated : Nov 02, 2026, 05:38 AM IST
hd kumaraswamy

ಸಾರಾಂಶ

ಮುಖ್ಯಮಂತ್ರಿಗಳ ಸಮ್ಮುಖದಲ್ಲಿ 100 ಎಕರೆ ಜಾಗವನ್ನು ಎಆರ್‌ಎಐ ಸಂಸ್ಥೆಗೆ ಭೂಮಿ ನೀಡಿರುವುದಾಗಿ ಹಾಗೂ ಸಾರ್ವಜನಿಕ ಸಭೆಯಲ್ಲಿಯೂ ಅದೇ ವಿಚಾರವನ್ನು ಪುನರುಚ್ಚರಿಸಿ ಈಗಾಗಲೇ 100 ಎಕರೆ ನೀಡಿದ್ದೇವೆ. ಇನ್ನೂ500 ಎಕರೆ ಜಮೀನು ಬೇಕಾದರೂ ನೀಡುವುದಾಗಿ ಘೋಷಣೆ ಮಾಡಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಸಂಪೂರ್ಣ ಸುಳ್ಳು.

ಮಂಡ್ಯ : ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ೧೦೦ ಎಕರೆ ಜಾಗವನ್ನು ಎಆರ್‌ಎಐ ಸಂಸ್ಥೆಗೆ ಭೂಮಿ ನೀಡಿರುವುದಾಗಿ ಹಾಗೂ ಸಾರ್ವಜನಿಕ ಸಭೆಯಲ್ಲಿಯೂ ಅದೇ ವಿಚಾರವನ್ನು ಪುನರುಚ್ಚರಿಸಿ ಈಗಾಗಲೇ ೧೦೦ ಎಕರೆ ನೀಡಿದ್ದೇವೆ. ಇನ್ನೂ ೫೦೦ ಎಕರೆ ಜಮೀನು ಬೇಕಾದರೂ ನೀಡುವುದಾಗಿ ಘೋಷಣೆ ಮಾಡಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಸಂಪೂರ್ಣ ಸುಳ್ಳು. ಜನತೆಗೆ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ

ಈ ಕುರಿತು ಸಚಿವರ ಆಪ್ತ ಕಾರ್ಯದರ್ಶಿ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಎಆರ್‌ಎಐ ಸಂಸ್ಥೆಗೆ ೧೦೦ ಎಕರೆ ಭೂಮಿ ಮಂಜೂರು ಮಾಡಿರುವ ಬಗ್ಗೆ ರಾಜ್ಯ ಸರ್ಕಾರದಿಂದಾಗಲಿ ಹಾಗೂ ಜಿಲ್ಲಾಡಳಿತದಿಂದಾಗಲಿ ಅಥವಾ ಸಂಬಂಧಿತ ಎಆರ್‌ಎಐ ಸಂಸ್ಥೆಗೆ ಹಾಗೂ ಕೇಂದ್ರ ಸಚಿವರ ಕಚೇರಿಗೆ ಯಾವುದೇ ಮಾಹಿತಿ ನೀಡದಿರುವುದು ವಿಪರ್ಯಾಸದ ಸಂಗತಿ. ಆದ್ದರಿಂದ ಮಂಡ್ಯ ಜಿಲ್ಲಾಡಳಿತದಿಂದ ಕೂಡಲೇ ಈ ವಿಚಾರವಾಗಿ ಸ್ಪಷ್ಟೀಕರಣವನ್ನು ತುರ್ತಾಗಿ ಒದಗಿಸಿಕೊಡುವಂತೆ ಕೋರಿದ್ದಾರೆ.

ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ

ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿ ಹಾಗೂ ಸಾರ್ವಜನಿಕ ಸಭೆಯಲ್ಲಿ ಎಆರ್‌ಎಐ ಸಂಸ್ಥೆಗೆ ೧೦೦ ಎಕರೆ ಭೂಮಿ ಮಂಜೂರು ಮಾಡಿದ್ದೇವೆ ಅಥವಾ ಕೊಟ್ಟಿದ್ದೇವೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಭೂಮಿ ಮಂಜೂರು ಮಾಡಿರುವ ಬಗ್ಗೆ ಮಂಜೂರಾತಿ ಆದೇಶದ ಪತ್ರದ ಪ್ರತಿಯನ್ನು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸ್ಟಿಂಗ್‌ ಯಾರಿಗೆ ತಿರುಗುಬಾಣ ಅಂತ ಇಂದು ಹೇಳ್ತೀನಿ: ಎಚ್ಡಿಕೆ
ಇದು ಕೇವಲ ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೈ: ಪ್ರಿಯಾಂಕ್‌