ನವದೆಹಲಿ: ಪರಿಶಿಷ್ಟ ಜಾತಿಯಲ್ಲಿ ಮಾದಿಗರಿಗೆ ಒಳಮೀಸಲು ನೀಡುವ ಬೇಡಿಕೆ ಪರಿಶೀಲಿಸಲು ಸಮಿತಿ ರಚನೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಮೋದಿ ಅವರು ಹೈದರಾಬಾದ್ ದಲಿತ ರಾಲಿಯಲ್ಲಿ ಸಮಿತಿ ರಚನೆ ಭರವಸೆ ನೀಡಿದ್ದರು.