ಅಯೋಧ್ಯೆ: ಅಯೋಧ್ಯೆಯಲ್ಲಿ 22.23 ಲಕ್ಷ ದೀಪ ಬೆಳಗಿ ವಿಶ್ವದಾಖಲೆ ಸ್ಥಾಪಿಸಿದ ದೀಪೋತ್ಸವವನ್ನು ಪ್ರಧಾನಿ ನರೇಂದ್ರ ಮೋದಿ ಅದ್ಭುತ ಎಂದು ಬಣ್ಣಿಸಿದ್ದಾರೆ.ದೀಪೋತ್ಸವದ ಫೋಟೋಗಳನ್ನು ಟ್ವೀಟ್ ಮಾಡಿರುವ ಅವರು, ‘ಅದ್ಭುತ, ಅಲೌಕಿಕ ಮತ್ತು ಮರೆಯಲಾಗದ ದೀಪೋತ್ಸವವಿದು. ಲಕ್ಷಾಂತರ ದೀಪಗಳಿಂದ ಬೆಳಗುತ್ತಿರುವ ಅಯೋಧ್ಯಾ ನಗರದ ದೀಪಗಳ ಮಹಾ ಉತ್ಸವದಿಂದ ಇಡೀ ದೇಶವು ಪ್ರಕಾಶಿಸುತ್ತಿದೆ. ಇದರಿಂದ ಹೊರಹೊಮ್ಮುವ ಶಕ್ತಿಯು ಭಾರತದಾದ್ಯಂತ ಹೊಸ ಉತ್ಸಾಹವನ್ನು ಹರಡುತ್ತಿದೆ. ಭಗವಾನ್ ಶ್ರೀರಾಮನು ಎಲ್ಲಾ ದೇಶವಾಸಿಗಳಿಗೆ ಒಳ್ಳೆಯದನ್ನು ಮಾಡಲಿ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಸ್ಫೂರ್ತಿಯಾಗಲಿ ಎಂದು ನಾನು ಬಯಸುತ್ತೇನೆ. ನಮಸ್ಕಾರ ಸಿಯಾ ರಾಮ್!’ ಎಂದಿದ್ದಾರೆ.