ಹಿಜ್ಬುಲ್ಲಾ ಮೇಲೆ ದಾಳಿಗೆ ಆಕ್ರೋಶ ಮತ್ತೆ ಹೋರ್ಮಜ್‌ ಜಲಸಂಧಿ ಬಂದ್‌

Published : Jun 21, 2026, 11:19 AM IST
hormuz

ಸಾರಾಂಶ

ಅಮೆರಿಕ- ಇರಾನ್‌, ಇಸ್ರೇಲ್‌- ಹಿಜ್ಬುಲ್ಲಾಗಳ ನಡುವೆ ಒಪ್ಪಂದ ಘೋಷಣೆಯಾಗಿ ಇನ್ನೇನು ಎಲ್ಲಾ ಸರಿ ಆಯಿತು ಎನ್ನುವ ಹೊತ್ತಿನಲ್ಲೇ, ಶಾಂತಿ ಒಪ್ಪಂದದ ನಿಯಮಗಳ ಉಲ್ಲಂಘನೆ ಆರೋಪ ಮಾಡಿ ಹೊರ್ಮಜ್‌ ಜಲಸಂಧಿಯನ್ನು ಇರಾನ್‌ ಮತ್ತೆ ಬಂದ್‌ ಮಾಡಿದೆ.

 ಟೆಹ್ರಾನ್‌: ಅಮೆರಿಕ- ಇರಾನ್‌, ಇಸ್ರೇಲ್‌- ಹಿಜ್ಬುಲ್ಲಾಗಳ ನಡುವೆ ಒಪ್ಪಂದ ಘೋಷಣೆಯಾಗಿ ಇನ್ನೇನು ಎಲ್ಲಾ ಸರಿ ಆಯಿತು ಎನ್ನುವ ಹೊತ್ತಿನಲ್ಲೇ, ಶಾಂತಿ ಒಪ್ಪಂದದ ನಿಯಮಗಳ ಉಲ್ಲಂಘನೆ ಆರೋಪ ಮಾಡಿ ಹೊರ್ಮಜ್‌ ಜಲಸಂಧಿಯನ್ನು ಇರಾನ್‌ ಮತ್ತೆ ಬಂದ್‌ ಮಾಡಿದೆ. ಅಮೆರಿಕವು ಶಾಂತಿ ಒಪ್ಪಂದದ ಷರತ್ತುಗಳನ್ನು ಮುರಿದಿದೆ ಮತ್ತು ಲೆಬನಾನ್‌ ಮೇಲೆ ಅಮೆರಿಕದ ಮಿತ್ರ ದೇಶ ಇಸ್ರೇಲ್‌ ದಾಳಿ ಮುಂದುವರಿಸಿದೆ ಎಂದು ಆರೋಪಿಸಿ ಇರಾನ್‌ ಈ ಕ್ರಮ ಕೈಗೊಂಡಿದೆ.

ಈ ಬಿಕ್ಕಟ್ಟು ಮತ್ತೇನಾದರೂ ಮುಂದುವರಿದಿದ್ದೇ ಆದಲ್ಲಿ ಮತ್ತೆ ತೈಲ ಬೆಲೆ ಏರಿಕೆ ಜೊತೆಗೆ, ತೈಲ, ಅನಿಲ ಪೂರೈಕೆಯಲ್ಲಿ ಆಗಿರುವ ವ್ಯತ್ಯಯ ಮುಂದುವರೆಯುವ ಆತಂಕ ಎದುರಾಗಿದೆ. ಜೊತೆಗೆ ಶಾಂತಿ ಒಪ್ಪಂದದ ಸುದ್ದಿ ಬಳಿಕ ಭಾರೀ ಕುಸಿತ ಕಂಡಿದ್ದ ಕಚ್ಚಾತೈಲದ ಬೆಲೆ ಮತ್ತೆ ಏರುವ ಆತಂಕ ಎದುರಾಗಿದೆ.

ಹೋರ್ಮಜ್‌ ಬಂದ್‌:

ಒಪ್ಪಂದದ ಬಳಿಕವೂ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಲೆಬನಾನ್‌ ಮೇಲೆ ಭೀಕರ ದಾಳಿ ಮುಂದುವರಿಸಿದೆ. ಪ್ರತಿಯಾಗಿ ಇರಾನ್ ಬೆಂಬಲಿತ ಹಿಜ್ಬುಲ್ಲಾಗಳೂ ಪ್ರತಿದಾಳಿ ಮಾಡಿದ್ದಾರೆ. ಪರಿಣಾಮ, ಶನಿವಾರ ಇಬ್ಬರು ಮಕ್ಕಳು ಸೇರಿ 16 ಜನ ಮೃತಪಟ್ಟಿದ್ದಾರೆ. ಇದರಿಂದಾಗಿ ಲೆಬನಾನ್‌-ಇಸ್ರೇಲ್‌ ಇತ್ತೀಚಿನ ಕದನದಲ್ಲಿ ಮೃತರ ಸಂಖ್ಯೆ 4000 ದಾಟಿದೆ.

ಇದಕ್ಕೆ ಕೆರಳಿರುವ ಇರಾನ್‌, ‘ಕದನ ವಿರಾಮ ಒಪ್ಪಂದದ ಮೊದಲ ಷರತ್ತನ್ನು ಅಮೆರಿಕ ಉಲ್ಲಂಘಿಸಿದೆ. ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡುತ್ತಿದೆ. ಹೀಗಾಗಿ ಹೋರ್ಮುಜ್ ಬಂದ್‌ ಮಾಡುತ್ತಿದ್ದೇವೆ. ಆಕ್ರಮಣ ಮುಂದುವರಿದರೆ, ಮುಂದಿನ ಕ್ರಮಗಳನ್ನು ಯೋಜಿಸಲಾಗಿದೆ’ ಟೀವಿ ಹೇಳಿಕೆಯ ಮೂಲಕ ಎಚ್ಚರಿಸಿದೆ.

ಬಂದ್ ಆಗಿಲ್ಲ- ವ್ಯಾನ್ಸ್‌:

ಈ ನಡುವೆ, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಪ್ರತಿಕ್ರಿಯಿಸಿ, ‘ಹೋರ್ಮುಜ್‌ ಬಂದ್‌ ಆದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಅಲ್ಲಿನ ಹಡಗು ಸಂಚಾರ ಯಥಾರೀತಿ ಇದೆ. ಅಲ್ಲದೆ, ಇರಾನ್‌ ಜತೆ ಮಾತುಕತೆ ನಡೆಸಲು ನಾನು ಸ್ವಿಜರ್ಲೆಂಡ್‌ಗೆ ಹೋಗುತ್ತಿದ್ದೇನೆ’ ಎಂದಿದ್ದಾರೆ. ಭಾನುವಾರ ಅಮೆರಿಕ-ಇರಾನ್‌ ಮುಂದಿನ ಸುತ್ತಿನ ಸಂಧಾನ ಸಭೆ ಆಯೋಜನೆ ಆಗಿದೆ.

ಪರಸ್ಪರ ದಾಳಿ ನಿಲ್ಲಿಸುವ ಸಂಬಂಧ ಶುಕ್ರವಾರವಷ್ಟೇ ಇಸ್ರೇಲ್‌- ಹಿಜ್ಬುಲ್ಲಾ ಡೀಲ್‌

ಆದರೆ ಶನಿವಾರ ಮತ್ತೆ ತನ್ನ ದೇಶದ ಮೇಲೆ ಹಿಜ್ಬುಲ್ಲಾ ದಾಳಿ ಎಂದು ಇಸ್ರೇಲ್‌ ಕಿಡಿ

ಇದರ ಬೆನ್ನಲ್ಲೇ ಮತ್ತೆ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್‌ ವಾಯು ದಾಳಿ

ಇಸ್ರೇಲ್‌ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನಲ್ಲಿ 16 ಬಲಿ

ಇಸ್ರೇಲ್‌ ಕ್ರಮಕ್ಕೆ ಇರಾನ್‌ ಆಕ್ರೋಶ: ತಕ್ಷಣವೇ ಹೋರ್ಮಜ್‌ ಬಂದ್‌ನ ಘೋಷಣೆ

ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ: ತೈಲ ಪೂರೈಕೆ ವ್ಯತ್ಯಯ?

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯದಲ್ಲಿ ಅನ್ನಕ್ಕೂ ‘ಜಾತಿʼ ಲಿಂಕ್‌: ಸಚಿವ ಜೋಶಿ ಕಿಡಿ
ಬಿಡದಿ ಟೌನ್‌ಶಿಪ್‌ ವಿರೋಧಿಸಿ ಇಂದು ಜೆಡಿಎಸ್‌ ಪಾದಯಾತ್ರೆ