ಎಚ್‌ಡಿಕೆ ದಿಲ್ಲಿ ಮನೇಲಿ ಪೊಲೀಸರ ಮಹಜರ್‌!

Published : Oct 30, 2026, 09:11 AM IST
hd kumaraswamy

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದೆಹಲಿಯಲ್ಲಿನ ಅಧಿಕೃತ ಗೃಹ ಕಚೇರಿಯಲ್ಲಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಮಹಜರ್ ನಡೆಸಿದ್ದಾರೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ದೆಹಲಿಯಲ್ಲಿನ ಅಧಿಕೃತ ಗೃಹ ಕಚೇರಿಯಲ್ಲಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಮಹಜರ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮಹಜರ್

ಇತ್ತೀಚೆಗೆ ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲು ಪಾತ್ರ ವಹಿಸಿದ್ದ ಆರೋಪದ ಮೇರೆಗೆ ದೆಹಲಿಯ ರಿತೇಶ್ ಪಾಂಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲಿ ಮಹಜರ್ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಪಾಂಡೆ ಕೆಲಸ

ಕುಮಾರಸ್ವಾಮಿ ಅವರ ದೆಹಲಿ ಗೃಹ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಪಾಂಡೆ ಕೆಲಸ ಮಾಡುತ್ತಿದ್ದು, ಆತನಿಗೆ ಮಾಸಿಕ 50 ಸಾವಿರ ರು. ವೇತನ ನಿಗದಿಯಾಗಿತ್ತು. ಕೆಲ ದಿನಗಳ ಹಿಂದೆ ಎರಡು ಮೊಬೈಲ್‌ಗಳನ್ನು ಖರೀದಿಸಿ ತರುವಂತೆ ಆತನಿಗೆ ಪ್ರಜ್ವಲ್ ಪ್ರಸಾದ್ ಎಂಬಾತ 30 ಸಾವಿರ ರು. ನೀಡಿ ಸೂಚಿಸಿದ್ದ. ಅಂತೆಯೇ ದೆಹಲಿಯ ಕರೋಲ್‌ಬಾಗ್‌ನಲ್ಲಿ ತಲಾ 15 ಸಾವಿರ ರು.ಗೆ ಎರಡು ಮೊಬೈಲ್‌ಗಳನ್ನು ಕೊಂಡು ಪಾಂಡೆ ತಂದಿದ್ದ. ಈ ಮೊಬೈಲ್‌ಗಳನ್ನೇ ಬಳಸಿ ಸ್ಟಿಂಗ್ ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಅಲ್ಲದೆ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಕೂಡ ಆ ವಿಡಿಯೋಗಳನ್ನು ಆತ ಹಂಚಿಕೊಂಡಿದ್ದ. ಹೀಗಾಗಿ ದೆಹಲಿಯ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಗೃಹ ಕಚೇರಿಯಲ್ಲಿ ಆರೋಪಿಯನ್ನು ಕರೆದೊಯ್ದು ಮಹಜರ್‌ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಸ್ಟಿಂಗ್ ಆಪರೇಷನ್‌ ಪ್ರಕರಣದಲ್ಲಿ ಬಂಧಿತನಾದ ಮೊದಲ ಆರೋಪಿ ರಿತೇಶ್ ಪಾಂಡೆ ಆಗಿದ್ದಾನೆ. ಕಳೆದ ಶನಿವಾರ ಆತನ್ನು ದೆಹಲಿಯಲ್ಲಿ ಬಂಧಿಸಿ ಸಿಸಿಬಿ ಸೈಬರ್ ಠಾಣೆ ಪೊಲೀಸರು ಕರೆತಂದಿದ್ದರು. ಬಳಿಕ ನ್ಯಾಯಾಲಯದಲ್ಲಿ ಆತನಿಗೆ ಜಾಮೀನು ಸಿಕ್ಕಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿದ್ದು ಸ್ಟಿಂಗ್‌ ಕಟ್ಟುಕತೆ - ಮಾಜಿ ಸಿಎಂಗೆ ಸೈಬರ್‌ ಕ್ರೈಂ ಪೊಲೀಸ್‌ ಕ್ಲೀನ್‌ಚಿಟ್‌
ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಪರೀಕ್ಷೆ