;Resize=(412,232))
ಬೆಂಗಳೂರು : ಕೆಪಿಸಿಸಿ ಹಾಗೂ ಸರ್ಕಾರದ ನಡುವೆ ಸಮನ್ವಯ ಸಾಧಿಸಲು ರಾಜ್ಯದಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ರಚನೆ ಮಾಡುತ್ತೇವೆ. ಇತ್ತೀಚೆಗೆ ಬಂದಿದ್ದ ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರೂ ಆದಷ್ಟು ಬೇಗ ಸಮಿತಿ ಮಾಡುವಂತೆ ಹೇಳಿದ್ದಾರೆ.
ಹೀಗಾಗಿ ಸದ್ಯದಲ್ಲೇ ರಚನೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ರಾಜಕೀಯ ವ್ಯವಹಾರಗಳ ಸಮಿತಿ ಇದೆ. ರಾಜ್ಯದಲ್ಲೂ ರಚನೆ ಮಾಡಲು ನಾವು ಬದ್ಧರಿದ್ದೇವೆ. ಇತ್ತೀಚೆಗೆ ಬಂದಿದ್ದ ಸುರ್ಜೇವಾಲ, ವೇಣುಗೋಪಾಲ್ ಅವರು ಬೇಗ ಮಾಡುವಂತೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾಯಕರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಮಾಡುತ್ತೇವೆ ಎಂದು ಹೇಳಿದರು.