ರಾಜಕಾರಣ ಕೆಟ್ಟಿದೆ, ಸಜ್ಜನ ರಾಜಕಾರಣಿಗಳಿಲ್ಲ: ರಾಯರಡ್ಡಿ

Published : Jun 23, 2025, 10:04 AM IST
basavaraj rayareddy

ಸಾರಾಂಶ

ಇತ್ತೀಚಿನ ರಾಜಕಾರಣ ಕೆಟ್ಟುಹೋಗಿದೆ. ನಾನು ಹೇಳಿದರೆ ನಾಳೆ ಬೇರೆನೇ ಪತ್ರಿಕೆಯಲ್ಲಿ ಬರೆಯುತ್ತಾರೆ. ರಾಜಕಾರಣಲ್ಲಿ ಪ್ರಮಾಣಿಕತೆ ಉಳಿದಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

 ಕುಕನೂರು(ಕೊಪ್ಪಳ): ಇತ್ತೀಚಿನ ರಾಜಕಾರಣ ಕೆಟ್ಟುಹೋಗಿದೆ. ನಾನು ಹೇಳಿದರೆ ನಾಳೆ ಬೇರೆನೇ ಪತ್ರಿಕೆಯಲ್ಲಿ ಬರೆಯುತ್ತಾರೆ. ರಾಜಕಾರಣಲ್ಲಿ ಪ್ರಮಾಣಿಕತೆ ಉಳಿದಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಭಾನುವಾರ ನಡೆದ ಕೆ.ಎಚ್‌.ಪಾಟೀಲ್ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕಾರಣಲ್ಲಿ ಪ್ರಾಮಾಣಿಕತೆ ಉಳಿದಿಲ್ಲ. ಹಣ ಇಲ್ಲದಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಆಗುವುದಿಲ್ಲ. ಅಂತಿತವರು ಚುನಾವಣೆಗೆ ನಿಲ್ಲಲು ಆಗೋದಿಲ್ಲ. ಜನರು ಸರಿಯಾಗಿದ್ದಾರೆ. ಆದರೆ ಸಜ್ಜನ ರಾಜಕಾರಣಿಗಳ ಸಂಖ್ಯೆ ಕಡಿಮೆಯಾಗಿದೆ. ಅದನ್ನು ನಾನು ಹೇಳಲು ಬರುವುದಿಲ್ಲ ಎಂದು ಹೇಳಿದರು.ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಈ ಕ್ಯಾಬಿನೆಟ್‌ನಲ್ಲಿ ಒಬ್ಬ ಉತ್ತಮ ಮಂತ್ರಿ ಆಗಿದ್ದಾರೆ. ರಾಜಕೀಯದಲ್ಲಿ ಅವರಿಗೆ ಭವಿಷ್ಯ ಇದೆ. ಪರಮೇಶ್ವರ್ ಅವರು ನಾಯಕತ್ವ ತೆಗೆದುಕೊಳ್ಳಬೇಕು ಎಂದು ಹೇಳುತ್ತೇನೆ. ನಾನು ಆವಾಗ ಇವಾಗ ಬೈಯುತ್ತಿರುತ್ತೇನೆ ಎಂದು ರಾಯರೆಡ್ಡಿ ಹೇಳಿದರು.

ಸಜ್ಜನರ ಕೈಯಿಂದ ಪ್ರಮಾಣಿಕ ವ್ಯಕ್ತಿಯಾದ ಕೆ.ಎಚ್.ಪಾಟೀಲ್ ರ ಮೂರ್ತಿಯ ಅನಾವರಣ ಆಗಿದೆ ಎಂದ ಅವರು, ಸಿದ್ದರಾಮಯ್ಯ ದೊಡ್ಡ ವ್ಯಕ್ತಿ. ಅವರಿಗೆ ಜನರ ಬಗ್ಗೆ ಕಾಳಜಿ ಹೆಚ್ಚು. ಸರಕಾರದಲ್ಲಿ ಹಣದ ಕೊರತೆ ಇಲ್ಲ. ಆಡಳಿತದ ವ್ಯವಸ್ಥೆಯಲ್ಲಿ ಇದೆಲ್ಲ ಇರೋದೆ. ಸರಕಾರದಲ್ಲಿ ಒಳ್ಳೆಯ ಆಡಳಿತವನ್ನು ಸಿದ್ದರಾಮಯ್ಯ ಅವರು ಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಡಳಿತದಲ್ಲಿ ಬದಲಾವಣೆ ತರುತ್ತಾರೆ. ಯಾವುದೇ ಯೋಜನೆ ನಿಲ್ಲಿಸುವುದಿಲ್ಲ. ಅಪಪ್ರಚಾರ ಮಾಡುತ್ತಾರೆ ಏನು ಮಾಡೋಕೆ ಆಗೋದಿಲ್ಲ ಎಂದ ರಾಯರೆಡ್ಡಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಿ ರಾಮ್‌ ಜಿ: ಈಗ ಎಚ್ಡಿಕೆಗೆ ಡಿಕೆಶಿ ಸವಾಲ್‌
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು