ರಾಜ್ಯಸಭೆಯಲ್ಲಿ ನಮಾಜ್‌ ವಿರಾಮಕ್ಕೆ ಬ್ರೇಕ್‌

KannadaprabhaNewsNetwork |  
Published : Dec 11, 2023, 01:15 AM IST
ಹೊಸ ಸಂಸತ್‌ ಭವನ | Kannada Prabha

ಸಾರಾಂಶ

ಊಟದ ವಿರಾಮದ ಬಳಿಕ ರಾಜ್ಯಸಭೆ ಅಧಿವೇಶನವನ್ನು ಶುಕ್ರವಾರ ಮಧ್ಯಾಹ್ನ 2.30ರ ಬದಲಾಗಿ 2 ಗಂಟೆಗೆ ಆರಂಭಿಸಲು ಸಭಾಧ್ಯಕ್ಷ ಜಗದೀಪ್ ಧನಕರ್‌ ನಿರ್ಧರಿಸಿದ್ದಾರೆ.

ಪ್ರತಿ ಶುಕ್ರವಾರ 2.30ರ ಬದಲಿಗೆ 2 ಗಂಟೆಗೆ ಕಲಾಪ ಆರಂಭ

ನವದೆಹಲಿ: ಊಟದ ವಿರಾಮದ ಬಳಿಕ ರಾಜ್ಯಸಭೆ ಅಧಿವೇಶನವನ್ನು ಶುಕ್ರವಾರ ಮಧ್ಯಾಹ್ನ 2.30ರ ಬದಲಾಗಿ 2 ಗಂಟೆಗೆ ಆರಂಭಿಸಲು ಸಭಾಧ್ಯಕ್ಷ ಜಗದೀಪ್ ಧನಕರ್‌ ನಿರ್ಧರಿಸಿದ್ದಾರೆ. ಈ ನಿರ್ಧಾರಕ್ಕೆ ಮುಸ್ಲಿಂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ನಮಾಜ್‌ಗಾಗಿ ಹೆಚ್ಚುವರಿ ಅವಧಿಯ ವಿರಾಮವನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಕಳೆದ ಶುಕ್ರವಾರ ರಾಜ್ಯಸಭೆಯ ಕಲಾಪ ಮಧ್ಯಾಹ್ನ 2.30ರ ಬದಲಿಗೆ 2 ಗಂಟೆಗೆ ಆರಂಭವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಸಂಸದ ತಿರುಚಿ ಶಿವ, ‘ಇಷ್ಟು ದಿನದವರೆಗೆ ರಾಜ್ಯಸಭೆಯ ಮಧ್ಯಾಹ್ನದ ಕಲಾಪ 2.30ಕ್ಕೆ ಆರಂಭವಾತ್ತಿತ್ತು. ಆದರೆ ಈಗ 2 ಗಂಟೆಗೆ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ದಿಢೀರನೆ ಇಂತಹ ನಿರ್ಧಾರ ಕೈಗೊಂಡಿದ್ದು ಯಾಕೆ ಎಂದು ಪ್ರಶ್ನಸಿದ್ದಾರೆ.ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷ ಜಗದೀಪ್‌ ಧನಕರ್‌, ‘ಇದರಲ್ಲಿ ಯಾವುದೇ ವಿಷೇಶವಿಲ್ಲ. ಲೋಕಸಭೆ ಕಲಾಪ 2 ಗಂಟೆಗೆ ಆರಂಭವಾಗುತ್ತದೆ. ಇದೇ ರೀತಿಯಲ್ಲಿ ರಾಜ್ಯಸಭೆ ಕಲಾಪವನ್ನು ಸಹ ಆರಂಭಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. ಡಿಎಂಕೆ ಸಂಸದ ಅಬ್ದುಲ್ಲಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ನಮಾಜ್‌ ಇರುವುದರಿಂದ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇದೀಗ ಇದನ್ನು ಮೊಟಕುಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

40 ಲಕ್ಷ ಮಹಿಳೆಯರಿಗೆ 9000 ರು. ಗ್ಯಾರಂಟಿ ! ಎಲೆಕ್ಷನ್‌ ಮುನ್ನ ಬಂಪರ್‌
ಡಿಕೆ ರಾಜಕೀಯ ಹೋರಾಟ ಎಲ್ಲರಿಗೂ ಸ್ಪೂರ್ತಿ : ಸಿಎಂ ಸಿದ್ದರಾಮಯ್ಯ