ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಂವಿಧಾನ ಉಳಿಯದು :ರೈತ ಮುಖಂಡ

KannadaprabhaNewsNetwork |  
Published : Apr 06, 2024, 12:45 AM ISTUpdated : Apr 06, 2024, 04:50 AM IST
ಫೋಟೋರಾಜ್ಯದಲ್ಲಿ ಸಂಚರಿಸುತ್ತಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆ ಕುರಿತು ರೈತ ಮುಖಂಡ ಎನ್.ಜಿ.ರಾಮಚಂದ್ರಪ್ಪ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

  ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ದೇಶ ಉಳಿಸಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ತುಮಕೂರಿನ ಎನ್.ಜಿ.ರಾಮಚಂದ್ರಪ್ಪ ಹೇಳಿದರು.

 ಚಿತ್ರದುರ್ಗ :  ಜಾತಿ, ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಕೋಮುವಾದಿ ಬಿಜೆಪಿ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ದೇಶ ಉಳಿಸಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ತುಮಕೂರಿನ ಎನ್.ಜಿ.ರಾಮಚಂದ್ರಪ್ಪ ಹೇಳಿದರು.

ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ ಒಂದರಿಂದ ಆರಂಭಗೊಂಡಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆ ಮೂರು ತಂಡಗಳಲ್ಲಿ ಸಂಚರಿಸುತ್ತಿದ್ದು, 8 ರಂದು ಬೆಳಗಾವಿ ತಲುಪಿ ಬೃಹತ್ ಸಮಾವೇಶ ನಡೆಸಲಿದೆ. ಈಗಾಗಲೆ ಎರಡು ಬಾರಿ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ಮೂರನೆ ಬಾರಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿರುವುದನ್ನು ತಡೆಯಬೇಕು. ಭ್ರಷ್ಟರನ್ನು ಎದುರುಸಿ ಹಫ್ತಾ ವಸೂಲಿಯಲ್ಲಿ ತೊಡಗಿರುವ ಬಿಜೆಪಿಯನ್ನು ಮನೆಗೆ ಕಳಿಸಬೇಕಾಗಿದೆ. 

ದೇವರು, ಧರ್ಮದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುವರು ದೇಶಕ್ಕೆ ಬೇಕಿಲ್ಲ. ರೈತರು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ದೆಹಲಿಯಲ್ಲಿ ಚಳುವಳಿ ನಡೆಸಿದರೆ ಟಿಯರ್ ಗ್ಯಾಸ್, ರಬ್ಬರ್ ಗುಂಡು, ನೆಲಕ್ಕೆ ಮೊಳೆ ಹೊಡೆದು ತಂತಿ ಬೇಲಿ ಹಾಕಿ ದೇಶಕ್ಕೆ ಅನ್ನ ನೀಡುವ ರೈತರನ್ನು ಅವಮಾನಿಸಿರುವುದನ್ನು ಮರೆಯಲಾಗುವುದಿಲ್ಲ. ಕಾರ್ಪೊರೇಟ್ ಕಂಪನಿಗಳ ಪರವಾಗಿರುವವರನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕೆಂಬುದು ದೇಶ ಉಳಿಸಿ ಸಂಕಲ್ಪ ಯಾತ್ರೆ ಉದ್ದೇಶ ಎಂದರು.

ಹನ್ನೆರಡರಿಂದ ಹದಿಮೂರು ಸಾವಿರ ಕೋಟಿ ರೂ. ವರ್ಷಕ್ಕೆ ಜಿ.ಎಸ್.ಟಿ. ಸಂಗ್ರಹವಾಗುತ್ತಿದೆ. ಕೇಂದ್ರ ಬಿಜೆಪಿ. ಹಾಗೂ ರಾಜ್ಯದ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಬೇಕಿದೆ. ದುರ್ಬಲ ಪ್ರಧಾನಿಯನ್ನು ಮೂರನೆ ಸಲ ಸಂಸತ್ತಿಗೆ ಪ್ರವೇಶ ಮಾಡಲು ಕೊಡುವುದಿಲ್ಲ. ಇದಕ್ಕೆ ಮತದಾರರು ಮನಸ್ಸು ಮಾಡಬೇಕು ಎಂದು ಎನ್.ಜಿ.ರಾಮಚಂದ್ರಪ್ಪ ಕೋರಿದರು.

ಪ್ರಗತಿಪರ ಚಿಂತಕ ಅಪ್ಪುಸಾಹೇಬ್, ಗೋಣಿಬಸಪ್ಪ, ಟಿ.ಶಫಿವುಲ್ಲಾ, ಪ್ರೊ. ಅಂಜನಮೂರ್ತಿ, ಜೆ.ಯಾದವರೆಡ್ಡಿ, ಸಿ.ಕೆ.ಗೌಸ್‍ಪೀರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ: ರಾಮಲಿಂಗಾರೆಡ್ಡಿ
ಯುದ್ಧದಿಂದ ರಾಜ್ಯದಲ್ಲಿ ಸಿಲುಕಿರುವ ಪ್ರವಾಸಿಗರ ಆತಿಥ್ಯಕ್ಕೆ ಕ್ರಮ: ಎಚ್‌.ಕೆ.ಪಾಟೀಲ್‌