ಕೆಪಿಸಿಸಿ ಪಟ್ಟಕ್ಕೆ ಸತೀಶ್‌, ಹರಿ ಪೈಪೋಟಿ

Published : Jun 02, 2026, 07:46 AM IST
KPCC

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್‌ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ.

 ಬೆಂಗಳೂರು :  ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹಿರಿಯ ನಾಯಕರಾದ ಸತೀಶ್‌ ಜಾರಕಿಹೊಳಿ ಹಾಗೂ ಬಿ.ಕೆ. ಹರಿಪ್ರಸಾದ್‌ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ

ಮೇಲ್ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಒಬಿಸಿ ವರ್ಗಕ್ಕೆ ನೀಡಲು ಕಾಂಗ್ರೆಸ್‌ ಬಯಸಿದೆ. ಹೀಗಾಗಿ ಆ ಹುದ್ದೆಯನ್ನು ಪಡೆಯಲು ಸತೀಶ್‌ ಜಾರಕಿಹೊಳಿ ಅವರು ತೀವ್ರ ಪೈಪೋಟಿ ನಡೆಸಿದ್ದಾರೆ. 

ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ

ಆದರೆ ಪಕ್ಷಕ್ಕೆ ದೀರ್ಘಕಾಲದಿಂದ ನಿಷ್ಠೆಯಿಂದ ಇರುವ ನಾಯಕನಿಗೆ ಪಟ್ಟ ಕಟ್ಟುವ ಇರಾದೆ ಕಾಂಗ್ರೆಸ್‌ ವರಿಷ್ಠರಲ್ಲಿದೆ. ಆದ ಕಾರಣ ಹರಿಪ್ರಸಾದ್‌ ಹೆಸರನ್ನು ಕೆಲ ವರಿಷ್ಠ ನಾಯಕರು ಸೂಚಿಸಿದ್ದಾರೆ. ಹೀಗಾಗಿ ಜಾರಕಿಹೊಳಿ ಹಾಗೂ ಹರಿಪ್ರಸಾದ್‌ ಪೈಕಿ ಇಬ್ಬರಲ್ಲಿ ಒಬ್ಬರಿಗೆ ಹುದ್ದೆ ಒಲಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ದಿಲ್ಲಿಯಲ್ಲಿಂದು ಸಂಪುಟ ಸರ್ಕಸ್‌ - ನಿನ್ನೆ ನಡೆಯಬೇಕಿದ್ದ ಸಭೆ ಇಂದು ಬೆಳಗ್ಗೆ 11ಕ್ಕೆ ಮುಂದೂಡಿಕೆ
ಸೂಟ್‌ ರಹಸ್ಯ ಬಿಚ್ಚಿಟ್ಟ ತಮಿಳುನಾಡು ಸಿಎಂ ವಿಜಯ್‌