ಅಡ್ವಾಣಿಯವರ ದಾಖಲೆ ಹಿಂದಿಕ್ಕಿಅತಿ ದೀರ್ಘಾವಧಿ ಗೃಹಸಚಿವರಾಗಿ ಶಾ ದಾಖಲೆ

KannadaprabhaNewsNetwork |  
Published : Aug 06, 2025, 01:15 AM IST
ಶಾ | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆ ಮುರಿದಿದ್ದಾರೆ.

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಗೃಹ ಸಚಿವರಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಲಾಲ್ ಕೃಷ್ಣ ಅಡ್ವಾಣಿ ಅವರ ದಾಖಲೆ ಮುರಿದಿದ್ದಾರೆ.ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ 2019ರ ಮೇ 30ರಿಂದ 2025ರ ಆ.4ರವರೆಗೆ ಒಟ್ಟು 2,258 ದಿನಗಳನ್ನು (6 ವರ್ಷ 65 ದಿನ) ಪೂರೈಸಿದ್ದಾರೆ. ಇದಕ್ಕೂ ಮುನ್ನ ಅಡ್ವಾಣಿಯವರು 1998ರ ಮಾ.19ರಿಂದ 2004ರ ಮೇ.22ರವರೆಗೆ ಸೇವೆ ಸಲ್ಲಿಸಿ ಒಟ್ಟು 2,256 ದಿನಗಳ (6 ವರ್ಷ 64 ದಿನ) ದಾಖಲೆ ಬರೆದಿದ್ದರು. ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿಯವರು ಶಾ ಅವರ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಇತ್ತೀಚೆಗೆ ಮೋದಿಯವರು ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳ ಪೈಕಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದರು.

--

ಶಾ ಅವಧಿಯ ಮಹತ್ವದ ನಿರ್ಧಾರಗಳು: ಜಮ್ಮು ಮತ್ತು ಕಾಶ್ಮೀರ 370ನೇ ವಿಧಿ ರದ್ದು, ಸಿಎಎ ಮತ್ತು ಎನ್‌ಆರ್‌ಸಿ ಜಾರಿ, ಕಾಶ್ಮೀರದ ಪ್ರತ್ಯೇಕತಾವಾದಿ ಹರಿಯತ್ ಸಂಘಟನೆಯ ನಿಷೇಧ, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ರಕ್ಷಣಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ ಎಂಬ 3 ಹೊಸ ಕಾನೂನುಗಳ ಪರಿಚಯ, ನಕ್ಸಲ್ ನಿಗ್ರಹದ ಕ್ರಮಗಳು, ಕೋವಿಡ್-19 ಯಶಸ್ವಿ ನಿರ್ವಹಣೆ, ಮಾದಕದ್ರವ್ಯಗಳ ವಿರುದ್ಧ ಅಭಿಯಾನ (11,961 ಕೋಟಿ ರು. ಮೌಲ್ಯದ ಡ್ರಗ್ಸ್ ವಶ), ಈಶಾನ್ಯದಲ್ಲಿ ದಂಗೆಕೋರ ಸಂಘಟನೆಗಳೊಂದಿಗೆ 12 ಶಾಂತಿ ಒಪ್ಪಂದ ಇತ್ಯಾದಿ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜಿ ರಾಮ್‌ ಜಿ: ಈಗ ಎಚ್ಡಿಕೆಗೆ ಡಿಕೆಶಿ ಸವಾಲ್‌
ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು