ಸಿಎಂ ಹುದ್ದೆಗೆ ₹500 ಕೋಟಿ ಎಂದ ಸಿಧು ಪತ್ನಿ ಸಸ್ಪೆಂಡ್‌

Published : Dec 09, 2025, 05:59 AM IST
Navjot kaur sidhu

ಸಾರಾಂಶ

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ 500 ಕೋಟಿ ರು. ನೀಡಬೇಕೆಂದು ಹೇಳಿಕೆ ನೀಡಿದ್ದ ಪಂಜಾಬ್‌ ಕಾಂಗ್ರೆಸ್ಸಿಗ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ನವಜೋತ್‌ ಕೌರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

 ಚಂಡೀಗಢ: ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ 500 ಕೋಟಿ ರು. ನೀಡಬೇಕೆಂದು ಹೇಳಿಕೆ ನೀಡಿದ್ದ ಪಂಜಾಬ್‌ ಕಾಂಗ್ರೆಸ್ಸಿಗ ಹಾಗೂ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಅವರ ಪತ್ನಿ ನವಜೋತ್‌ ಕೌರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಕೌರ್‌ ಹೇಳಿಕೆ ಪಕ್ಷಕ್ಕೆ ಭಾರೀ ಮುಜುಗರ

ಕೌರ್‌ ಹೇಳಿಕೆ ಪಕ್ಷಕ್ಕೆ ಭಾರೀ ಮುಜುಗರ ತಂದ ಬೆನ್ನಲ್ಲೇ ಯಾವುದೇ ಸೂಚನೆಯನ್ನೂ ನೀಡದೇ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ನಮ್ಮ ಬಳಿ ₹500 ಕೋಟಿ ಹಣ ಇಲ್ಲ

2027ರ ಪಂಜಾಬ್‌ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಭಾನುವಾರ ಮಾತನಾಡಿದ್ದ ನವಜೋತ್‌ ಕೌರ್‌, ‘ಕಾಂಗ್ರೆಸ್‌ನಲ್ಲಿ 500 ಕೋಟಿ ರು.ನ ಸೂಟ್‌ಕೇಸ್‌ ಕೊಟ್ಟವರನ್ನು ಕಾಂಗ್ರೆಸ್‌ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುತ್ತದೆ. ನಾವು ಸದಾ ಪಂಜಾಬ್‌ ಬಗ್ಗೆ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ನಮ್ಮ ಬಳಿ ₹500 ಕೋಟಿ ಹಣ ಇಲ್ಲ. ಹೀಗಾಗಿ, ನವಜೋತ್‌ ಸಿಂಗ್‌ ಸಿಧು ಅವರನ್ನು ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಮಾತ್ರವೇ ಅವರು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ’ ಎಂದು ಭಾನುವಾರ ಹೇಳಿದ್ದರು.

ಈ ಹೇಳಿಕೆಯನ್ನೇ ದಾಳವಾಗಿ ಬಳಸಿಕೊಂಡಿದ್ದ ಬಿಜೆಪಿ, ‘ಇದು ಕಾಂಗ್ರೆಸ್‌ ನಾಯಕತ್ವದ ಮೇಲಿನ ಗಂಭೀರ ಆರೋಪವಾಗಿದೆ. ಈ ಬಗ್ಗೆ ಪಕ್ಷ ಸ್ಪಷ್ಟನೆ ನೀಡಬೇಕು. ಈ ಹಿಂದೆ ಕರ್ನಾಟಕದ ಕಾಂಗ್ರೆಸ್‌ ನಾಯಕಿ ಮಾರ್ಗರೆಟ್ ಆಳ್ವ ಕೂಡಾ ಇಂತದ್ದೇ ಆರೋಪ ಮಾಡಿದ್ದರು. 2008ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಅನ್ನು ಅತಿ ಹೆಚ್ಚು ಬಿಡ್‌ ಮಾಡಿದವರಿಗೆ ಹಣಕ್ಕೆ ಮಾರಿಕೊಳ್ಳಲಾಗಿತ್ತು. ಇದು ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಎಷ್ಟು ಆಳವಾಗಿ ಮುಳುಗಿದೆ ಎಂಬುದಕ್ಕೆ ಸಾಕ್ಷಿ ಎಂದು ಎಂದು ಕಿಡಿಕಾರಿತ್ತು.

ಹುಚ್ಚಾಸ್ಪತ್ರೆಗೆ ಸಿಧು ಪತ್ನಿ ಸೇರಿಸಬೇಕು

ಕಾಂಗ್ರೆಸ್‌ನಲ್ಲಿ ಸಿಎಂ ಆಗಲು 500 ಕೋಟಿ ರು. ನೀಡಬೇಕು ಎಂದು ರೀತಿ ಹೇಳುವವರನ್ನು ಆಸ್ಪತ್ರೆಗೆ ಸೇರಿಸೋಣ. ಒಳ್ಳೆಯ ಹುಚ್ಚಾಸ್ಪತ್ರೆಗೆ ಸೇರಿಸೋಣ.

- ಡಿ.ಕೆ. ಶಿವಕುಮಾರ್‌, ಡಿಸಿಎಂ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಂದೇಮಾತರಂಗೆ ಕತ್ತರಿ ಹಾಕಿದ್ದೇ ಕಾಂಗ್ರೆಸ್‌: ಮೋದಿ
ಜ.8, 9ರವರೆಗೆ ಕಾಯಿರಿ: ಡಿಕೆ ಬಣದ ‘ತಿರುಗೇಟು’!