ಶ್ರೀನಿವಾಸಪುರ: ಅಂದು ರೈಲ್ವೆ ಕೋಚ್ ಫ್ಯಾಕ್ಟರಿ ಬೇಕು ಎಂದವರಿಂದ ಈಗ ಕೈಗಾರಿಕಾ ವಲಯಕ್ಕೆ ವಿರೋಧ, ಅಡ್ಡಗಾಲು?

KannadaprabhaNewsNetwork |  
Published : Oct 07, 2024, 01:35 AM ISTUpdated : Oct 07, 2024, 05:00 AM IST
ಕೈಗಾರಿಕೆಗಳ ಸ್ಥಾಪನೆ ಪರವಾಗಿ ಸಂಘಟನೆ ಮುಖಂಡರ ಸುದ್ಧಿಗೋಷ್ಠಿ | Kannada Prabha

ಸಾರಾಂಶ

ಅಂದು ರೈಲ್ವೆ ಕೋಚ್ ಫ್ಯಾಕ್ಟರಿ ಬೇಕು ಎಂದು ಮುಂದೆ ನಿಂತು ಓಡಾಡಿದವರು ಇಂದು ಯಾಕೆ ಶ್ರೀನಿವಾಸಪುರದಲ್ಲಿ ತಾಲೂಕಿನ ಯದರೂರಿನಲ್ಲಿ ಸ್ಥಾಪನೆಯಾಗುವ ಕೈಗಾರಿಕಾ ವಲಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಬೇಡ ಎನ್ನಲು ಇವರು ಯಾರು ಎಂದು  ಮುಖಂಡರು ಪ್ರಸ್ನಿಸಿದರು.

  ಶ್ರೀನಿವಾಸಪುರ : ಅಂದು ರೈಲ್ವೆ ಕೋಚ್ ಫ್ಯಾಕ್ಟರಿ ಬೇಕು ಎಂದು ಮುಂದೆ ನಿಂತು ಓಡಾಡಿದವರು ಇಂದು ಯಾಕೆ ಶ್ರೀನಿವಾಸಪುರದಲ್ಲಿ ತಾಲೂಕಿನ ಯದರೂರಿನಲ್ಲಿ ಸ್ಥಾಪನೆಯಾಗುವ ಕೈಗಾರಿಕಾ ವಲಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಬೇಡ ಎನ್ನಲು ಇವರು ಯಾರು ಎಂದು ಸೌಹಾರ್ದ ಸ್ವಾಭಿಮಾನಿ ವೇದಿಕೆ ಸಂಘಟನೆ ಹಾಗು ಕಸ್ತೂರಿ ಜನಪರ ವೇದಿಕೆ ಮುಖಂಡರು ಪ್ರಸ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ ಸಾಧಿಕ್ ಅಹ್ಮದ್ ಮಾತನಾಡಿ, 2018 ರಲ್ಲಿ ಚುನಾವಣೆ ನೀತಿ ಸಂಹಿತಿ ಜಾರಿಯಾಗುತ್ತದೆ ಎಂಬ ಅರಿವು ಇದ್ದರು ಸಿದ್ದರಾಮಯ್ಯನವರನ್ನು ಕರೆಸಿ ತರಾತುರಿಯಲ್ಲಿ ಗುದ್ದಲಿ ಪೂಜೆಯನ್ನು ಮಾಡಿಸಿದ್ದ ಕಾಂಗ್ರೆಸ್ ಮುಖಂಡರು ನಂತರ ಚುನಾವಣೆ ನಡೆದು ಅಧಿಕಾರ ಹಿಡಿದರು ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಸ್ತಾವನೆ ಕೈಬಿಡಲಾಯಿತು ಎಂದರು.

ರಾಜಕೀಯ ಮುಂಖಂಡರ ವಿರೋಧ

ಈಗ ಖಾಸಗಿಯೋ, ಸರ್ಕಾರದ್ದೋ ಒಟ್ಟಿನಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಠಿಸಲು ಕೈಗಾರಿಕೆಗಳು ಬರುವಂತ ಸಂದರ್ಭದಲ್ಲಿ ರೈತರ ಮುಸಕಿನಲ್ಲಿ ಕೆಲ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಲ್ಲ, ಇಲ್ಲಿನ ಮಾವಿನ ಬೆಳೆಗಾರರು ಸಹ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ. ಕೈಗಾರಿಕೆಗಳ ಸ್ಥಾಪನೆಯಿಂದ ಇನ್ನಷ್ಟು ಮಾವು ಸಂಸ್ಕರಣ ಘಟಕಗಳು ಇಲ್ಲಿಗೆ ಬರಬಹುದು. ಇದರಿಂದ ಸ್ಥಳೀಯವಾಗಿ ಮಾವಿನಬೆಳೆಗೆ ಉತ್ತಮ ಮಾರುಕಟ್ಟೆ ಸಿಗಬಹುದು ಎಂದರು.

ಹೋಳೂರು ಸಂತೋಷ್ ಮಾತನಾಡಿ ಶ್ರೀನಿವಾಸಪುರ ಪಟ್ಟಣಕ್ಕೆ ಕೆವಲ 9 ಕಿಲೋಮೀಟ‌ರ್ ದೂರದಲ್ಲಿರುವ ಎದರೂರಿನಲ್ಲಿ ಕೈಗಾರಿಕೆಗಳು ಬಂದರೆ ಶ್ರೀನಿವಾಸಪುರದಿಂದ ವೇಮಗಲ್ ನರಸಾಪುರ ಕೈಗಾರಿಕ ಪ್ರದೇಶಗಳಿಗೆ ಹೋಗುವಂತ ಯುವಕರಿಗೆ ಇಲ್ಲೆ ಉದ್ಯೋಗಾವಕಾಶಗಳು ಸಿಗುತ್ತವೆ. ಜೊತೆಗೆ ಶ್ರೀನಿವಾಸಪುರ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ. ಹತ್ತು ಹಲವು ರೀತಿಯ ಉದ್ಯಮಗಳು ಶ್ರೀನಿವಾಸಪುರ ಪಟ್ಟಣಕ್ಕೆ ಬರುತ್ತವೆ. ಇಲ್ಲಿ ಜನ ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಎಂದರು.

ನಗರಸಭೆಯಾಗಲು ಅವಕಾಶ

ಪುರಸಭೆ ಮುಂದೆ ನಗರಸಭೆಯಾಗಲು ಅವಕಾಶ ಸಿಗುತ್ತದೆ ಇಷ್ಟೆಲ್ಲಾ ಅವಕಾಶ ಇರುತ್ತದೆ ಇಂತಹ ಸಂದರ್ಭದಲ್ಲಿ ದೂರದೃಷ್ಟಿಯ ಆಲೋಚನೆ ಇಲ್ಲದೆ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿರುವ ಎದರೂರು ಕೈಗಾರಿಕ ವಲಯ ಸ್ಥಾಪನೆಗೆ ರೈತರ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಅಭಿವೃದ್ಧಿ ಪಥಕ್ಕೆ ಅಡ್ದಗಾಲು ಹಾಕುವುದು ಸರಿಯಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಸ್ತೂರಿ ಜನಪರ ವೇದಿಕೆ ಮುಖ್ಯಸ್ಥ ಮೊಗಿಲಹಳ್ಳಿಮಣಿ ಯದರೂರು ವೆಂಕಟೇಶಗೌಡ, ಕಾರ್ಮಿಕ ಮುಖಂಡ ಆನಂದ್ ಇದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ