ಶಿವಮೊಗ್ಗ ಬರುತ್ತಿದ್ದ ಹಿಂದು ನಾಯಕರನ್ನು ತಡೆದಿದ್ದು ನೀಚ ಕೃತ್ಯ

KannadaprabhaNewsNetwork |  
Published : Oct 20, 2023, 01:00 AM IST

ಸಾರಾಂಶ

ಶಿವಮೊಗ್ಗ ಬರುತ್ತಿದ್ದ ಹಿಂದು ನಾಯಕರನ್ನು ತಡೆದಿದ್ದು ನೀಚ ಕೃತ್ಯಸುದ್ದಿಗೋಷ್ಠಿಯಲ್ಲಿ ಎಸ್‌.ಎನ್‌.ಚನ್ನಬಸಪ್ಪ ಕಿಡಿ । ಬಹುಮತ ಇದೆ ಎಂದು ಬೇಕಾದ್ದನ್ನು ಮಾಡುವುದು ಸರಿಯಲ್ಲ

ಸುದ್ದಿಗೋಷ್ಠಿಯಲ್ಲಿ ಎಸ್‌.ಎನ್‌.ಚನ್ನಬಸಪ್ಪ ಕಿಡಿ । ಬಹುಮತ ಇದೆ ಎಂದು ಬೇಕಾದ್ದನ್ನು ಮಾಡುವುದು ಸರಿಯಲ್ಲ ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯ ಸರ್ಕಾರ ಹಿಂದು ವಿರೋಧಿ ಎಂದು‌‌ ಪದೇ ಪದೇ ಸಾಬೀತು ಮಾಡುತ್ತಿದೆ.‌ ಶಿವಮೊಗ್ಗ ಬರುತ್ತಿದ್ದ ಹಿಂದು ನಾಯಕರನ್ನು ಬಾರದಂತೆ ತಡೆದಿದ್ದು, ಕಾಂಗ್ರೆಸ್‌ ಸರ್ಕಾರದ ನೀಚ ಕೃತ್ಯ ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಕಿಡಿಕಾರಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಹಿಂದುಗಳ ಮನೆಗಳಿಗೆ ಕಲ್ಲುತೂರಾಟ ಮಾಡಲಾಗಿದೆ. ಈ ಘಟನೆಯಿಂದ ನೊಂದವರ ನೋವಿಗೆ ಸಾತ್ವಾನ ಹೇಳಲು ಬರುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಂತ ನೀಚ ಕೃತ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿರುವುದು ಸರಿಯಲ್ಲ ಎಂದು ಟೀಕಿಸಿದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ನಿಷೇಧ ಮಾಡಲಾಗಿದೆ. ಚಾಮುಂಡಿ ಬದಲಾಗಿ ಮಹಿಷಾ ದಸರಾ ಮಾಡುತ್ತಿದೆ. ಇದು ಹಿಂದುಗಳಿಗೆ ಮಾಡಿದ ಅಪಮಾನ. ಭಗವಾನ್‌ಗೆ ಅನುಮತಿ ಕೊಡುವ ಸರ್ಕಾರ ಹಿಂದು ನಾಯಕರು ಚಾಮುಂಡಿ ಬೆಟ್ಟಕ್ಕೆ ಹೋಗುವ ಹಾಗಿಲ್ಲ, ರಾಗಿಗುಡ್ಡಕ್ಕೆ ಬರುವ ಹಾಗಿಲ್ಲ ಎಂದು ನಿಷೇಧ ಹೇರುವುದು ಸರಿಯಲ್ಲ. ಹರ್ಷ ಕೊಲೆಯಾದಾಗ ಮುತಾಲಿಕ್‌ ಶಿವಮೊಗ್ಗಕ್ಕೆ ಬಂದಿದ್ದರು. ಈಗ ಬಂದರೆ ಯಾಕೆ ಅವರನ್ನು ಬಂಧಿಸಿದ್ದೀರಿ, ನಿಮ್ಮ ಗುಟ್ಟು ಬಯಲಾಗುತ್ತದೆ ಎಂಬ ಭಯವೇ ಎಂದು ಹರಿಹಾಯ್ದರು. ಚಕ್ರವರ್ತಿ ಸೂಲಿಬೆಲೆ, ಈಶ್ವರಪ್ಪ ವಿರುದ್ಧ ಸುಮೋಟೊ ಪ್ರಕರಣ ಆಗುತ್ತದೆ. ರಾಷ್ಟ್ರದೋಹಿ ಕೃತ್ಯ ಮಾಡುವವರ ಮೇಲೆ ಯಾವ ಕೇಸು ಹಾಕಿದ್ದೀರಿ. ಇದು ಅವರಿಗೆ ಕುಮ್ಮಕು ಕೊಡುವ ಕೆಲಸ ಅಲ್ಲವೇ? ಬಹುಮತ ಬಂದಿದೆ ಎಂದು ಏನು ಬೇಕಾದರೂ ಮಾಡಬಹುದು ಎನ್ನುವುದು ಸರಿಯಲ್ಲ. ಎಲ್ಲ ಬಿಟ್ಟು ಮಗ ಬಂಗಿ‌ ನೆಟ್ಟ ಎಂಬ ಗಾದೆ ಮಾತಿನಂತೆ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ. ರಾಷ್ಟ್ರದ್ರೋಹ ಕೃತ್ಯಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ಕೊಡಬಾರದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌, ಪಾಲಿಕೆ ಮೇಯರ್‌ ಶಿವಕುಮಾರ್‌, ಜ್ಞಾನೇಶ್ಚರ್, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು. - - - -

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ
ಅಕ್ರಮ ಕಟ್ಟಡ ಪರಿಶೀಲಿಸಿ ತೆರವಿಗೆ ತಂಡ ರಚಿಸಲು ಮಹೇಶ್ವರ್ ರಾವ್ ಸೂಚನೆ