ಅಧಿಕಾರ ಇದ್ದಾಗ ತಾಜ್‌ ವೆಸ್ಟೆಂಡ್‌, ಇಲ್ಲದಾಗ ಹಳ್ಳಿ ನೆನಪು: ಪ್ರಿಯಾಂಕ್‌

Published : Nov 06, 2026, 09:52 AM IST
Priyank kharge

ಸಾರಾಂಶ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೀಡುವ ಸಲಹೆ, ಕೇಳುವ ಪ್ರಶ್ನೆಗಳನ್ನು ಹಳ್ಳಿ ಗುಗ್ಗು ಕೂಡಾ ಕೊಡುವುದಿಲ್ಲ ಎಂದು ಆಡು ಮಾತಿನಲ್ಲಿ ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ತಾಜ್‌ ವೆಸ್ಟೆಂಡ್‌ನಲ್ಲಿ ಇರುತ್ತಾರೆ

ಬೆಂಗಳೂರು : ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೀಡುವ ಸಲಹೆ, ಕೇಳುವ ಪ್ರಶ್ನೆಗಳನ್ನು ಹಳ್ಳಿ ಗುಗ್ಗು ಕೂಡಾ ಕೊಡುವುದಿಲ್ಲ ಎಂದು ಆಡು ಮಾತಿನಲ್ಲಿ ಹೇಳಿದ್ದೇನೆ. ಅಧಿಕಾರದಲ್ಲಿದ್ದಾಗ ತಾಜ್‌ ವೆಸ್ಟೆಂಡ್‌ನಲ್ಲಿ ಇರುತ್ತಾರೆ. ಅಧಿಕಾರದಲ್ಲಿ ಇಲ್ಲದಿರುವಾಗ ಅವರಿಗೆ ಹಳ್ಳಿ ನೆನಪಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ನನ್ನ ಹೇಳಿಕೆಯನ್ನು ವಿವಾದ ಮಾಡಲು ಹೊರಟಿದ್ದಾರೆ

ಸುದ್ದಿಗಾರರ ಜೊತೆ ಮಾತನಾಡಿ, ಈಗ ಅವರು ನನ್ನ ಹೇಳಿಕೆಯನ್ನು ವಿವಾದ ಮಾಡಲು ಹೊರಟಿದ್ದಾರೆ, ಅದಕ್ಕೇನು ಮಾಡಲೂ ಆಗುವುದಿಲ್ಲ, ಮೂರ್ಖ ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮೂರ್ಖನೇ. ಆಡಿರುವ ಮಾತಿನ ಬಗ್ಗೆ ವಿಷಾದ ಇಲ್ಲ, ಮೊದಲು ಅವರು ಆಡಿರುವ ಮಾತಿಗೆ ವಿಷಾದ ವ್ಯಕ್ತಪಡಿಸಲಿ, ಆಮೇಲೆ ನೋಡೊಣ ಎಂದರು.

ದಲಿತ-ಬಲಿತ ಎಂದು ಹೇಳಿದಾಗ ಯಾರೂ ಕೇಳಿಲ್ಲ

ಹಿಂದೆ ಕುಮಾರಸ್ವಾಮಿ ಅವರು ದಲಿತ-ಬಲಿತ ಎಂದು ಹೇಳಿದಾಗ ಯಾರೂ ಕೇಳಿಲ್ಲ. ಸ್ಟಿಂಗ್‌ ಆಪರೇಷನ್‌ ಪ್ರಕರಣ ಕುರಿತು ಸಾಕ್ಷಿ ಕೊಡಿ ಎಂದು ಹೇಳಿದ್ದೇನೆ. ಅದನ್ನು ಕೊಡದೆ ಮೂರ್ಖರ ತರಹ ಮಾತನಾಡಿದರೆ ಹೇಗೆ? ಯಾವುದೋ ಒಂದಕ್ಕೆ ಹೋಲಿಕೆ ಮಾಡೋದು ಸರಿಯಲ್ಲ. ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮಣ್ಣಿನ ಮಗ ಎನ್ನುವ ಇವರು ಬೆಂಗಳೂರು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ರಿಯಲ್‌ ಎಸ್ಟೇಟ್‌ ಮಾಡಿಲ್ಲವೇ ಎಂದು ಪ್ರಿಯಾಂಕ್‌ ಖರ್ಗೆ ಎಂದು ಪ್ರಶ್ನಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನೂತನ ಕಾರ್ಖಾನೆಗೆ 39 ಸಕ್ಕರೆ ಕಾರ್ಖಾನೆ ಮಾಲೀಕರಿಂದ ಅರ್ಜಿ
ಶುಭ ಕೋರಿದ ಮೋದಿಗೆ ಸಿಎಂ ಬೇಡಿಕೆ ಪಟ್ಟಿ