ನಗರದ ಮೂಲಸೌರ್ಯಕ್ಕೆ ವಿಶೇಷ ಕಾಳಜಿ ವಹಿಸಿ : ತೇಜಸ್ವಿ ಸೂರ್ಯ ಮನವಿ

KannadaprabhaNewsNetwork |  
Published : Apr 28, 2025, 01:30 AM ISTUpdated : Apr 28, 2025, 05:49 AM IST
Tejasvi Surya Sivasri Meet PM Modi

ಸಾರಾಂಶ

ನಗರದಲ್ಲಿ ಆಯೋಜಿಸಿದ್ದ ಟಿಸಿಎಸ್‌ ವರ್ಲ್ಡ್ 10ಕೆ ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲಿಟ್‌ಗಳು ಸೇರಿದಂತೆ 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.  

  ಬೆಂಗಳೂರು : ನಗರದಲ್ಲಿ ಆಯೋಜಿಸಿದ್ದ ಟಿಸಿಎಸ್‌ ವರ್ಲ್ಡ್ 10ಕೆ ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲಿಟ್‌ಗಳು ಸೇರಿದಂತೆ 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇವರೆಲ್ಲರೂ ಸುಂದರ ಓಟದ ಬದಲು ಗುಂಡಿಯ ಓಟ, ಧೂಳಿನ ಓಟ ನಡೆಸಿದ್ದಾರೆ. ಆದ್ದರಿಂದ ಬ್ರ್ಯಾಂಡ್‌ ಬೆಂಗಳೂರಿನ ಮೌಲ್ಯ ಹೆಚ್ಚಿಸಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ಭಾನುವಾರ ನಡೆದ ಈ ರೀತಿಯ ಕಾರ್ಯಕ್ರಮಗಳು ನಮ್ಮ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯ ಹೆಚ್ಚಿಸುವುದಕ್ಕೆ ಮತ್ತು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ಸಹಕಾರಿಯಾಗುತ್ತವೆ. ಆದರೆ, ಬೆಂಗಳೂರು ಸಂಸದನಾಗಿ ಮಾತ್ರವಲ್ಲ, ಒಬ್ಬ ಓಟಗಾರ, ನಾಗರಿಕನಾಗಿ ಅತ್ಯಂತ ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ. ಓಟದಲ್ಲಿ ಜಗತ್ತಿನ ಶ್ರೇಷ್ಠ ಅಥ್ಲೀಟ್‌ಗಳು, ಹಿರಿಯ ನಾಗರಿಕರು ಸೇರಿದಂತೆ 40 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಆದರೆ, ಅವರೆಲ್ಲರೂ ಸುಂದರ ಓಟದ ಬದಲು, ಗುಂಡಿಗಳ ಓಟ, ಧೂಳಿನ ಓಟ, ಅಪಾಯದಿಂದ ಕೂಡಿದ ಓಟ ಎಂಬ ಅನುಭವ ಪಡೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಹೃದಯಭಾಗದ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಸಣ್ಣ ಸುಗಮ ರಸ್ತೆ ಕೂಡ ಇಲ್ಲ. ಎಲ್ಲೆಲ್ಲೂ ಗುಂಡಿಗಳೇ ತುಂಬಿವೆ. ಓಟಗಾರರು ಮುಗ್ಗರಿಸಿ ಗಾಯಗೊಂಡಿದ್ದು, ಹಿರಿಯ ನಾಗರಿಕರು ಹೆಜ್ಜೆ ಹಾಕಲು ಹೆದರುವ ಸ್ಥಿತಿ ಉಂಟಾಗಿತ್ತು. ವೀಲ್‌ಚೇರ್‌ನಲ್ಲಿದ್ದವರು ಸ್ವಂತ ಶಕ್ತಿಯಿಂದ ಸಾಗಲಾರದೆ, ಅನ್ಯರ ಸಹಾಯ ಪಡೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅನೇಕ ಸ್ಥಳಗಳಲ್ಲಿ ಕಸದ ರಾಶಿ ಇದ್ದು ಇವು ಬ್ರ್ಯಾಂಡ್ ಬೆಂಗಳೂರಿನ ಚಿತ್ರಣಗಳಾಗಿದ್ದವು. ಆದ್ದರಿಂದ ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.

PREV

Recommended Stories

ಜಕ್ಕೂರು ಏರೋಡ್ರೋಂ ರನ್‌ವೇ ವಿಸ್ತರಣೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಶೇ.1ರಷ್ಟು ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯ ಬೃಹತ್ ಪ್ರತಿಭಟನೆ