ಸಸ್ಪೆಂಡ್‌ ಆಗಬೇಕಿರುವುದು ಕಮಿಷನರ್‌- ದೂರು ಕೊಟ್ಟು ವಾರವಾದರೂ ಈವರೆಗೆ ಎಫ್‌ಐಆರ್‌ ದಾಖ : ಸಿ.ಟಿ.ರವಿ ಲಿಸಿಲ್ಲ

Published : Dec 26, 2024, 09:15 AM IST
ct ravi

ಸಾರಾಂಶ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧದ ಅಶ್ಲೀಲ ಪದ ಬಳಕೆ ಪ್ರಕರಣ ಸಂಬಂಧ ನನ್ನ ಮೇಲಿನ ಹಲ್ಲೆ ಮತ್ತು ಬಂಧನ ವಿಚಾರಕ್ಕೆ ಸಂಬಂಧಿಸಿ ಅಮಾನತ್ತು ಆಗಬೇಕಿರುವುದು ಸಿಪಿಐ ಅಲ್ಲ  ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧದ ಅಶ್ಲೀಲ ಪದ ಬಳಕೆ ಪ್ರಕರಣ ಸಂಬಂಧ ನನ್ನ ಮೇಲಿನ ಹಲ್ಲೆ ಮತ್ತು ಬಂಧನ ವಿಚಾರಕ್ಕೆ ಸಂಬಂಧಿಸಿ ಅಮಾನತ್ತು ಆಗಬೇಕಿರುವುದು ಸಿಪಿಐ ಅಲ್ಲ. ನಾನು ದೂರು ಕೊಟ್ಟರೂ ಈವರೆಗೆ ಎಫ್‌ಐಆರ್‌ ದಾಖಲಿಸದ ಕಮಿಷನರ್​ನ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಖಾನಾಪುರ ಠಾಣೆ ಸಿಪಿಐ ಮಂಜುನಾಥ ನಾಯಕ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಅಮಾನತು ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ಕ್ರಮ ಆಗಬೇಕಿರುವುದು ಕಮಿಷನರ್‌ ಹಾಗೂ ಎಸ್ಪಿ ಮೇಲೆ. ಸದನದೊಳಗೆ ಹಾಗೂ ಹೊರ ಭಾಗದಲ್ಲಿ ನಡೆದ ಘಟನೆಗಳ ಬಗ್ಗೆ ಸಿಸಿಟಿವಿ, ವಿಡಿಯೋ ಎಲ್ಲಾ ಇದೆ. ಅವರು ಯಾರೂ ಅಪರಿಚಿತರಲ್ಲ. ಹೆಬ್ಬಾಳ್ಕರ್ ಅವರ ಪಿಎ ಜೊತೆ ಇದ್ದವರೇ ಹಲ್ಲೆ ಮಾಡಿದ್ದು. ಡಿ.19ರಂದು ದೂರು ನೀಡಿದ್ದೇನೆ. ಆದರೆ, ಈವರೆಗೂ ಎಫ್‌ಐಆರ್‌ ಆಗಿಲ್ಲ. ಅದೇ ದಿನ 10 ಜನರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಟ್ಟು ಕಳುಹಿಸಿದ್ದಾರೆ. ಆದ್ದರಿಂದ ಕಮಿಷನರ್ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ನನ್ನ ಮೇಲೆ ಆಳುವ ಪಕ್ಷದಿಂದ ದೌರ್ಜನ್ಯ ನಡೆದಿದೆ. ಹಾಗಾಗಿ, ಆಳುವ ಪಕ್ಷದ ಅಧೀನದಲ್ಲಿರುವ ಸಂಸ್ಥೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ, ರಾಜ್ಯಪಾಲರು, ಸಭಾಪತಿ ಹಾಗೂ ಡಿಜಿಪಿ ಅವರನ್ನು ಭೇಟಿ ಮಾಡುತ್ತೇನೆ. ಕಾನೂನು ಪ್ರಕ್ರಿಯೆ ಮುಂದುವರಿಸುತ್ತೇನೆ. ಡಿ.26 ಹಾಗೂ 27 ರಂದು ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯದ ಪ್ರಮುಖರನ್ನು ಭೇಟಿ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಸೂಲಿಗೆಂದೇ ಪಿಎಗಳಿದ್ದಾರೆ:

ಇದೇ ವೇಳೆ, ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಸಿ.ಟಿ.ರವಿಯವರು, ಅವರಿಗೆ ವಸೂಲಿಗೆ ಅಂತಾನೇ ಪಿಎಗಳು ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಅವರಿಗೆ ವಸೂಲಿಗೆ ಪಿಎಗಳು ಇದ್ದಾರೆಂದು ಮೊನ್ನೆ ಗೊತ್ತಾಗಿದೆ. ಆ ತಾಯಿ ಬಳಿ ಅನಧಿಕೃತವಾಗಿ ಸಾಕಷ್ಟು ಜನ ಪಿಎಗಳು ಇದ್ದಾರೆ ಎಂದರು.

ತನಿಖೆ ಮುಗಿಯಲಿ;ಧರ್ಮಸ್ಥಳಕ್ಕೆ ಬರ್ತೀನಿ

ನನ್ನ ಬಗ್ಗೆ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬನ್ನಿ, ನಾನು ಕೂಡ ಕುಟುಂಬ ಸಮೇತರಾಗಿ ಬರ್ತಿನಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೀಡಿರುವ ಪಂಥಾಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ಕೇಸ್‌ ನ್ಯಾಯಾಲಯದಲ್ಲಿ ಇದೆ. ತನಿಖೆ ಹಂತದಲ್ಲಿ ಮಾತನಾಡುವುದು ಸರಿಯಲ್ಲ. ಕೇಸನ್ನು ಎದುರಿಸಿದ ನಂತರ ಧರ್ಮಸ್ಥಳಕ್ಕೂ ಹೋಗ್ತಿನಿ. ನನ್ನನ್ನು ವಾಹನದಲ್ಲಿ ಪೊಲೀಸರು ಕರೆದುಕೊಂಡು ಹೋಗುವಾಗ ಸವದತ್ತಿ ಯಲ್ಲಮ್ಮ ದೇವರಿಗೆ ಹರಕೆ ಹೊತ್ತಿದ್ದೆ, ಅಲ್ಲಗೂ ಕೂಡ ಹೋಗ್ತಿನಿ ಎಂದು ಹೇಳಿದರು

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ