;Resize=(412,232))
ಬೆಂಗಳೂರು : ರಾಜ್ಯದಲ್ಲಿ ಬರ, ನೆರೆ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ಮಾಡಲು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರು, ಮಾಜಿ ಸಚಿವರು, ಅಭ್ಯರ್ಥಿಗಳು ಹಾಗೂ ಸ್ಥಳೀಯ ಮುಖಂಡರನ್ನೊಳಗೊಂಡ ನಾಲ್ಕು ತಂಡಗಳನ್ನು ನೇಮಿಸಿದ್ದಾರೆ.
ಮಾಜಿ ಸಚಿವ ಎಚ್.ಡಿ.ರೇವಣ್ಣ ಈ ತಂಡದ ಅಧ್ಯಕ್ಷರು. ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಜಿ.ಡಿ.ಹರೀಶ್ ಗೌಡ, ಎಂ.ಆರ್.ಮಂಜುನಾಥ್, ಎಚ್.ಟಿ.ಮಂಜು, ಮಾಜಿ ಸಚಿವರಾದ ಎಚ್.ಕೆ.ಕುಮಾರಸ್ವಾಮಿ, ಸಾ.ರಾ.ಮಹೇಶ್ ಸೇರಿ ಇತರರು ತಂಡದಲ್ಲಿದ್ದಾರೆ.
ಕರಾವಳಿ ಮತ್ತು ಮಲೆನಾಡು ವಿಭಾಗ:
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಈ ತಂಡದ ಅಧ್ಯಕ್ಷರು. ಶಾಸಕಿ ಶಾರಾ ಪೂರ್ಯನಾಯಕ್, ಮಾಜಿ ಎಂಎಲ್ಸಿ ಬಿ.ಎಂ.ಫಾರೂಕ್, ಜೆಡಿಎಸ್ ಅಭ್ಯರ್ಥಿಗಳಾದ ಸುಧಾಕರ್ ಎಸ್.ಶೆಟ್ಟಿ, ಸೂರಜ್ ಸೋನಿ ನಾಯಕ್, ನಾಸೀರ್ ಭಗವಾನ್, ಮಾಜಿ ಶಾಸಕ ಶಹಜಹಾನ್ ಇಸ್ಮಾಯಿಲ್ ಸಾಬ್ ಡೊಂಗರಗಾವ್, ಸಚಿವ ಆನಂದ ಅಸ್ನೋಟಿಕರ್ ಸೇರಿ ಇತರರು ಈ ತಂಡದಲ್ಲಿದ್ದಾರೆ.
ಕೋಲಾರ ಸಂಸದ ಎಂ.ಮಲ್ಲೇಶ್‌ಬಾಬು ಈ ತಂಡದ ಅಧ್ಯಕ್ಷರು. ಶಾಸಕರಾದ ಸಮೃದ್ಧಿ ಮಂಜುನಾಥ್, ಜಿ.ವೆಂಕಟಾಶಿವಾ ರೆಡ್ಡಿ, ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಂ.ಕೃಷ್ಣಾ ರೆಡ್ಡಿ, ಗೋವಿಂದರಾಜು, ಬಿ.ಎನ್.ರವಿಕುಮಾರ್, ಕೆ.ಎಂ.ತಿಮ್ಮರಾಯಪ್ಪ, ಎಚ್.ಎಸ್.ಶಿವಶಂಕರ್, ಡಾ.ಕೆ.ಶ್ರೀನಿವಾಸಮೂರ್ತಿ, ಎಚ್.ಎಂ.ರಮೇಶ್ ಗೌಡ, ಎಂ.ಮಂಜುನಾಥ್, ಎಲ್.ಎನ್.ನಾರಾಯಣಸ್ವಾಮಿ ಸೇರಿ ಇತರರು ಈ ತಂಡದಲ್ಲಿದ್ದಾರೆ.
ಕ.ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗ:
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಈ ತಂಡದ ಅಧ್ಯಕ್ಷರು. ಶಾಸಕರಾದ ಶರಣಗೌಡ ಕಂದಕೂರ್, ಭೀಮಗೌಡ ಬಸನಗೌಡ ಪಾಟೀಲ್, ಕೆ.ನೇಮಿರಾಜ್ ನಾಯಕ್, ಕರೆಮ್ಮ ಜಿ.ನಾಯಕ್, ಮಾಜಿ ಸಚಿವರಾದ ವೆಂಕಟ ರಾವ್ ನಾಡಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಹಲವು ಮಾಜಿ ಶಾಸಕರು, ಮಾಜಿ ಸಚಿವರು, ಅಭ್ಯರ್ಥಿಗಳು ಈ ತಂಡದಲ್ಲಿದ್ದಾರೆ.