ಕಾನೂನು ರೀತಿ ಸೈಟ್‌: ಬೇಕಿದ್ರೆ ಉಪವಾಸ ಕೂರಿ - ನನಗೂ ಸಾಮಾನ್ಯ ಜ್ಞಾನ ಇದೆ

Published : Sep 08, 2026, 06:07 AM IST
cm dk shivakumar

ಸಾರಾಂಶ

ನಾವು ಏನೇ ಮಾಡಿದರು ಕಾನೂನಿನ ಚೌಕಟ್ಟಿನಲ್ಲಿ, ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡೇ ಮಾಡಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದರೆ ಕೋರ್ಟ್ ಇದೆ, ಕಾನೂನು ಇದೆ, ಹೋರಾಟ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೇವನಹಳ್ಳಿ: ನಾವು ಏನೇ ಮಾಡಿದರು ಕಾನೂನಿನ ಚೌಕಟ್ಟಿನಲ್ಲಿ, ಕಾನೂನು ತಜ್ಞರ ಅಭಿಪ್ರಾಯ ತೆಗೆದುಕೊಂಡೇ ಮಾಡಿದ್ದೇವೆ. ಕಾನೂನು ಬಿಟ್ಟು ಏನನ್ನೂ ಮಾಡಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೇಕಾದರೆ ಕೋರ್ಟ್ ಇದೆ, ಕಾನೂನು ಇದೆ, ಹೋರಾಟ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ದೇವೇಗೌಡ ಅವರು ಬರೆದಿರುವ ಪತ್ರ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ

ನೈಸ್ ಅಕ್ರಮದ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬರೆದಿರುವ ಬಹಿರಂಗ ಪತ್ರ ಕುರಿತು ಪ್ರತಿಕ್ರಿಯಿಸಿ, ನೈಸ್‌ ವಿಚಾರವಾಗಿ ನಿಮ್ಮ ವೈಯಕ್ತಿಕ ಅಭಿಪ್ರಾಯಗಳು, ಚರ್ಚೆಗಳನ್ನು ನಾನು ಮೊದಲಿನಿಂದಲೂ ನೋಡಿದ್ದೇನೆ. ಹಿಂದಿನವರು ಏನು ಅಗ್ರಿಮೆಂಟ್‌ಗೆ ಸೈನ್ ಹಾಕಿದ್ದಾರೆ, ಆ ಹಾದಿಯಲ್ಲೇ ಎಲ್ಲವು ಮುಂದಕ್ಕೆ ನಡೆದುಕೊಂಡು ಬಂದಿದೆ. ಯೋಜನೆಯಲ್ಲಿ ಆಸ್ತಿ ಕಳೆದುಕೊಂಡವರ ರಕ್ಷಣೆ ಮಾಡಬೇಕಲ್ವಾ? ಎಂದು ಪ್ರಶ್ನಿಸಿದರು.

ಹಿಂದಿನ ಸರ್ಕಾರಗಳೇ ಅಗ್ರಿಮೆಂಟ್‌ಗೆ ಸೈನ್ ಮಾಡಿಕೊಟ್ಟಿವೆ

ಹಿಂದಿನ ಸರ್ಕಾರಗಳೇ ಅಗ್ರಿಮೆಂಟ್‌ಗೆ ಸೈನ್ ಮಾಡಿಕೊಟ್ಟಿವೆ. ಅವನ್ನೆಲ್ಲ ನೋಡಿದ್ದೇನೆ. ನನಗೂ ಪ್ರಜ್ಞೆ ಇದೆ, ಬೇಸಿಕ್ ಕಾಮನ್‌ ಸೆನ್ಸ್ ಇದೆ. ಯಾರು ಏನನ್ನು ಬೇಕಾದರೂ ಹೇಳಿಕೊಳ್ಳಲಿ, ಉಪವಾಸ ಬೇಕಾದರೆ ಮಾಡಿಕೊಳ್ಳಲಿ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜನ ವಿರೋಧಿ, ದಲಿತ ವಿರೋಧಿ ಸರ್ಕಾರ ಕಿತ್ತೊಗೆಯಿರಿ: ಬಿವೈವಿ
ಮಹಿಳೆಯರ ಬಗ್ಗೆ ಕೀಳುಹೇಳಿಕೆ ಕೊಟ್ಟರೆ ಕಠಿಣ ಕ್ರಮ : ವಿಜಯ್‌ ಎಚ್ಚರಿಕೆ