ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸುವ ವೈಯಕ್ತಿಕ ದಾಳಿಗಳು, ದ್ವಂದ್ವಾರ್ಥದ ಅವಹೇಳನಗಳು ಅಥವಾ ನಿಂದನಾತ್ಮಕ ಪದಬಳಕೆಯು ತಕ್ಷಣದ ಹಾಗೂ ಕಠಿಣ ಕಾನೂನು ಕ್ರಮಗಳಿಗೆ ಎಡೆಮಾಡಿಕೊಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸೋಮವಾರ ವಿರೋಧಿಗಳಿಗೆ ಕಟು ಎಚ್ಚರಿಕೆ ನೀಡಿದ್ದಾರೆ.
- ತ್ರಿಶಾ ಬಗ್ಗೆ ಕೀಳು ಹೇಳಿಕೆಗೆ ಪರೋಕ್ಷ ಕಿಡಿ===
-ಜಯಲಲಿತಾರಿಗೂ ವೈಯಕ್ತಿಕ ನಿಂದನೆ ಮಾಡುತ್ತಿದ್ದರು-ಅಂಥ ಹೇಳಿಕೆ ನೀಡುವುದನ್ನು ನಿಲ್ಲಿಸಿ: ಸಿಎಂ ಮನವಿ
==ಪಿಟಿಐ ಚೆನ್ನೈ
ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಸುವ ವೈಯಕ್ತಿಕ ದಾಳಿಗಳು, ದ್ವಂದ್ವಾರ್ಥದ ಅವಹೇಳನಗಳು ಅಥವಾ ನಿಂದನಾತ್ಮಕ ಪದಬಳಕೆಯು ತಕ್ಷಣದ ಹಾಗೂ ಕಠಿಣ ಕಾನೂನು ಕ್ರಮಗಳಿಗೆ ಎಡೆಮಾಡಿಕೊಡುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸೋಮವಾರ ವಿರೋಧಿಗಳಿಗೆ ಕಟು ಎಚ್ಚರಿಕೆ ನೀಡಿದ್ದಾರೆ.ವಿಜಯ್ ಅವರ ಆಪ್ತೆಯಾದ ನಟಿ ತ್ರಿಶಾ ಅವರ ಬಗ್ಗೆ ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸೇರಿದಂತೆ ಪ್ರತಿಪಕ್ಷಗಳ ನೇತಾರರು ದ್ವಂದ್ವಾರ್ಥದ ಹೇಳಿಕೆ ನೀಡಿ, ಅವರ ಆಪ್ತತೆ ಬಗ್ಗೆ ವ್ಯಂಗ್ಯವಾಡಿದ್ದರು. ಇದರ ಬೆನ್ನಲ್ಲೇ ವಿಜಯ್ ಅವರ ಈ ಎಚ್ಚರಿಕೆ ಬಂದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಸದನದಲ್ಲಿ ವೈಯಕ್ತಿಕ ನಿಂದನೆ ಮಾಡಲಾಗುತ್ತಿತ್ತು. ಅಂಥ ಅವಮಾನಕರ ರಾಜಕೀಯ ನಿದರ್ಶನಗಳು ಎಂದಿಗೂ ಪುನರಾವರ್ತನೆಯಾಗಬಾರದು. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ಮಾನಹಾನಿಕರ ಹೇಳಿಕೆಗಳನ್ನು ನೀಡುವುದು ಮತ್ತು ದ್ವಂದ್ವಾರ್ಥದ ಪದಗಳನ್ನು ಬಳಸುವುದು ತಪ್ಪು. ಅದನ್ನು ನಿಲ್ಲಿಸುವಂತೆ ಮನವಿ ಮಾಡುತ್ತೇನೆ’ ಎಂದರು.ಡಿಎಂಕೆ ನಾಯಕರ ವಿರುದ್ಧ ಕಿಡಿ:
ಈ ನಡುವೆ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿಜಯ್, ಡಿಎಂಕೆ ಆಡಳಿತಾವಧಿಯಲ್ಲಿ ಗಂಭೀರ, ಸಂಘಟಿತ ಭ್ರಷ್ಟಾಚಾರ ಪ್ರಕರಣ ನಡೆದಿವೆ. ಇ.ಡಿ. ದಾಳಿಗಳಾಗಿವೆ ಎಂದು ವಾಗ್ದಾಳಿ ನಡೆಸಿದರು. ಆಗ ಸದನದಲ್ಲಿ ಕೋಲಾಹಲ ಉಂಟಾಯಿತು.