ಸಿಎಂ ಸಿದ್ದರಾಮಯ್ಯಗೂ ಹನಿಟ್ರ್ಯಾಪ್‌ ಆಗಿರುವ ಅನುಮಾನವಿದೆ : ಛಲವಾದಿ ನಾರಾಯಣಸ್ವಾಮಿ

Published : Mar 27, 2025, 11:03 AM IST
chalavadi narayanaswamy, siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹನಿಟ್ರ‍್ಯಾಪ್ ಆಗಿರುವ ಅನುಮಾನವಿದೆ. ತನಿಖೆಯಾದರೆ ತಮ್ಮದೂ ಎಲ್ಲಿ ಆಚೆ ಬರುತ್ತದೋ ಎಂಬ ಭಯ ಅವರಿಗೆ ಕಾಡುತ್ತಿರಬೇಕು. ಅದಕ್ಕಾಗಿ ಅವರು ಹನಿಟ್ರ್ಯಾಪ್‌ ಪ್ರಕರಣದ ತನಿಖೆಗೆ ಸೂಚಿಸುತ್ತಿಲ್ಲ ಎಂದು   ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ರಾಮನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹನಿಟ್ರ‍್ಯಾಪ್ ಆಗಿರುವ ಅನುಮಾನವಿದೆ. ತನಿಖೆಯಾದರೆ ತಮ್ಮದೂ ಎಲ್ಲಿ ಆಚೆ ಬರುತ್ತದೋ ಎಂಬ ಭಯ ಅವರಿಗೆ ಕಾಡುತ್ತಿರಬೇಕು. ಅದಕ್ಕಾಗಿ ಅವರು ಹನಿಟ್ರ್ಯಾಪ್‌ ಪ್ರಕರಣದ ತನಿಖೆಗೆ ಸೂಚಿಸುತ್ತಿಲ್ಲ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹನಿಟ್ರ‍್ಯಾಪ್‌ನಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ. ಇದ್ದಿದ್ದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಇಷ್ಟೊತ್ತಿಗೆ ತನಿಖೆಗೆ ಮುಂದಾಗುತ್ತಿತ್ತು ಎಂದರು. 

ಈಗ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ‍್ಯಾಪ್ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಮಾತನಾಡುವವರನ್ನು ಮಟ್ಟ ಹಾಕಲು ಹನಿಟ್ರ‍್ಯಾಪ್ ಮಾಡುವ ಕೆಲಸ ಆಗುತ್ತಿದೆ. ಆದರೆ, ಈ ಬಗ್ಗೆ ಸಿದ್ದರಾಮಯ್ಯ ಮಾತೇ ಆಡುತ್ತಿಲ್ಲ. ಹನಿಟ್ರ್ಯಾಪ್‌ ಪ್ರಕರಣದ ತನಿಖೆ ಮಾಡುತ್ತೇವೆ ಎನ್ನುವುದನ್ನು ಬಿಟ್ಟರೆ ಇನ್ನೇನೂ ಹೇಳಿಲ್ಲ ಎಂದರು.

ಬಹುಶಃ ಸಿದ್ದರಾಮಯ್ಯ ಅವರಿಗೂ ಹನಿಟ್ರ‍್ಯಾಪ್ ಆಗಿರುವ ಅನುಮಾನವಿದೆ. ತನಿಖೆಯಾದರೆ ತಮ್ಮದೂ ಎಲ್ಲಿ ಆಚೆ ಬರುತ್ತದೋ ಎಂಬ ಭಯ ಅವರಿಗೆ ಕಾಡುತ್ತಿರಬೇಕು. ಅದಕ್ಕಾಗಿ ಮುಖ್ಯಮಂತ್ರಿಯವರು ಪ್ರಕರಣದ ತನಿಖೆಗೆ ಸೂಚಿಸುತ್ತಿಲ್ಲ ಎಂದು ಆರೋಪಿಸಿದರು. 

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ