ಇದು ಕೇವಲ ಟ್ರೈಲರ್, ಪಿಕ್ಚರ್ ಅಭಿ ಬಾಕಿ ಹೈ: ಪ್ರಿಯಾಂಕ್‌

Published : Nov 02, 2026, 06:16 AM IST
Priyank Kharge

ಸಾರಾಂಶ

ಗೃಹ ಸಚಿವ ಎಂದು ನಾನು ಕಾನೂನು ಬಿಟ್ಟು ಹೋಗೋಕೆ ಆಗಲ್ಲ. ಕುಮಾರಸ್ವಾಮಿಯವರ ರೀತಿ ನಾನು ಹಿಟ್ & ರನ್ ಮಾಡಲ್ಲ. ದಾಖಲೆ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಕುಮಾರಸ್ವಾಮಿಯವರು ಈ ದಾಖಲೆಗಳನ್ನು ನಿರಾಕರಿಸೋಕೆ ಸಾಧ್ಯವೆ ಇಲ್ಲ.

ಕಲಬುರಗಿ/ಬೆಂಗಳೂರು: ಗೃಹ ಸಚಿವ ಎಂದು ನಾನು ಕಾನೂನು ಬಿಟ್ಟು ಹೋಗೋಕೆ ಆಗಲ್ಲ. ಕುಮಾರಸ್ವಾಮಿಯವರ ರೀತಿ ನಾನು ಹಿಟ್ & ರನ್ ಮಾಡಲ್ಲ. ದಾಖಲೆ ಇಟ್ಟುಕೊಂಡೇ ಮಾತನಾಡುತ್ತಿದ್ದೇನೆ. ಕುಮಾರಸ್ವಾಮಿಯವರು ಈ ದಾಖಲೆಗಳನ್ನು ನಿರಾಕರಿಸೋಕೆ ಸಾಧ್ಯವೆ ಇಲ್ಲ. ‘ಇದು ಬರೀ ಟ್ರೈಲರ್, ಅಭಿ ಪಿಚ್ಚರ್‌ ಬಾಕಿ ಹೈ’ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಸ್ಟಿಂಗ್ ವಿಚಾರದಲ್ಲಿ ಎಫ್‌ಐಆರ್ ದಾಖಲಾಗಿತ್ತು

ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ‘ಸ್ಟಿಂಗ್ ಆಪರೇಷನ್’ ಕೇಸ್‌ಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಸ್ಟಿಂಗ್ ವಿಚಾರದಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ವೇಳೆ ಕೆಲವರು ತನಿಖೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ತನಿಖೆಗೆ ಜೆಡಿಎಸ್ ಕಾರ್ಯಕರ್ತರು ಸಪೋಟ್೯ ಮಾಡಬೇಕಿತ್ತು ಎಂದರು.

ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗಬೇಕು ಎಂದು ಹೆಚ್ಚು-ಕಡಿಮೆ 20 ಸಲ ಧ್ವನಿ ಎತ್ತಿದ್ದು ಇವರೇ ತಾನೆ?. ಈಗ ತನಿಖೆಗೆ ಕರೆದಾಗ ಯಾಕೆ ಅವರು ಬರುತ್ತಿಲ್ಲ. ನಾವು ತನಿಖೆ ನಡೆಸಿದಾಗ ಅವರ ದೆಹಲಿ ನಿವಾಸದಲ್ಲಿ ಮೊಬೈಲ್‌ ಪತ್ತೆಯಾಯಿತು.

ಆ ವ್ಯಕ್ತಿಗಳು ಎಲ್ಲಿ ಮೊಬೈಲ್ ಖರೀದಿ ಮಾಡಿದರು?

ಅದಾದ ಬಳಿಕ ಆ ವ್ಯಕ್ತಿಗಳು ಎಲ್ಲಿ ಮೊಬೈಲ್ ಖರೀದಿ ಮಾಡಿದರು?, ಆ ಮೊಬೈಲ್ ಎಲ್ಲಿ ಎಕ್ಸ್ ಚೇಂಜ್ ಆಯ್ತು?, ಎಲ್ಲದಕ್ಕೂ ಸಹ ಸಿಸಿಟಿವಿ ಸಾಕ್ಷ್ಯಗಳಿವೆ. ಇವರೆಲ್ಲರೂ ಕುಮಾರಸ್ವಾಮಿ ಜೊತೆ ಕೆಲಸ ಮಾಡಿಕೊಂಡು ಅವರ ಜೊತೆ ಇರುವವರು. ಕುಮಾರಸ್ವಾಮಿ ಅವರು ಏನೂ ಮಾಡಿಲ್ಲ ಅಂತಾದರೆ ಈ ಮೂರು ಜನರ ಹೆಸರು ಯಾಕೆ ಬಂತು?. ವಿಡಿಯೋ ಎಲ್ಲಿ ಅಪಲೋಡ್ ಆಗಿದೆ ಎಲ್ಲದಕ್ಕೂ ಸಾಕ್ಷ್ಯಯಿದೆ. ಮೊದಲಿಗೆ ಡಿಕೆಶಿ ಅವರು ಸ್ಟಿಂಗ್ ಮಾಡಿಸಿದ್ರು ಅಂದರು, ನಂತರ ನಾನೇ ಮಾಡಿಸಿದೆ ಅಂತ ಹೇಳಿದರು. ಅಗತ್ಯ ಬಿದ್ದರೆ ಎಲ್ಲರನ್ನೂ ನಾನು ಕರೆಸುತ್ತೇನೆ. ಎಚ್ಡಿಕೆ ತರಹ ನಾನು ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿ ಅಲ್ಲ ಎಂದರು.

ಇಷ್ಟೆಲ್ಲ ನಮಗೆ ಗೊತ್ತಿದ್ದರೂ ಸಹ ನಾವು ತನಿಖೆಯ ಗೌಪ್ಯತೆ ಕಾಪಾಡಿದ್ದೇವೆ. ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಅವರು ನಿರಾಕರಿಸುವಂತಿಲ್ಲ. ಪಿಚ್ಚರ್‌ ಇನ್ನೂ ಬಹಳ ಇದೆ, ಸದ್ಯ ಇಂಟರವಲ್ ಆಗಿದೆ ಅಷ್ಟೇ. ಇಂದು ಇಲ್ಲಾ ನಾಳೆ ಎಲ್ಲವೂ ಸಹ ಬಹಿರಂಗವಾಗುತ್ತದೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಾನೇನು ಕೆಪಿಎಸ್ಸಿ ಅಕ್ರಮ ಮುಚ್ಚಿ ಹಾಕಲು ಹೇಳಿದ್ನಾ: ಕುಮಾರಸ್ವಾಮಿ
ಪ್ರಜ್ವಲ್‌ ಕೇಸಲ್ಲಿ ಸಿಕ್ಕಂತೆ ಸ್ಟಿಂಗ್‌ ತನಿಖೆಗೂ ಪ್ರಶಸ್ತಿ ಸಿಗುತ್ತೆ: ಖರ್ಗೆ