ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಮೇಲೆ ದೌರ್ಜನ್ಯ: ಆಕ್ರೋಶ

KannadaprabhaNewsNetwork | Published : Oct 2, 2024 1:04 AM

ಸಾರಾಂಶ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್‌ ೩೫ ವರ್ಷಗಳಿಂದ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಯಾಗಿ ಹಂತ ಹಂತವಾಗಿ ಬೆಳೆದು ಪಕ್ಷದ ಜಿಲ್ಲಾಧ್ಯಕ್ಷರಾದವರು. ಅವರ ಹಿರಿಯತನಕ್ಕೆ ಬೆಲೆ ಕೊಡುವ ಸೌಜನ್ಯವನ್ನೂ ಸಭೆಯಲ್ಲಿದ್ದ ಶಾಸಕಕುಗಳು ವ್ಯಕ್ತಪಡಿಸಲಿಲ್ಲ ಎಂದು ಕುಂಬಾರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್‌ ಮೇಲೆ ರೌಡಿಗಳಂತೆ ವರ್ತಿಸಿ ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿದರೂ ಸ್ಥಳದಲ್ಲಿದ್ದ ಶಾಸಕರು, ಎಂಎಲ್ಸಿ ಗಳು ರಕ್ಷಣೆ ಬಾರದೆ ಮೂಕ ಪ್ರೇಕ್ಷಕರಾಗಿ ಕುಳಿತಿದ್ದು ಖಂಡನೀಯ ಎಂದು ದಕ್ಷಿಣ ಭಾರತ ಕುಂಬಾರ ಪ್ರಜಾಪತಿ ಒಕ್ಕೂಟದ ರಾಜ್ಯಾಧ್ಯಕ್ಷ ಅಪ್ಪಿರಾಜು ಹೇಳಿದರು.

ಅವರು ಪಟ್ಟಣದ ಕರ‍್ಯನಿರತ ಪತ್ರಕರ್ತರ ಭವನದಲ್ಲಿ ತಾಲೂಕು ಕುಂಬಾರರ ಸಂಘ, ಶ್ರೀ ಕುಂಬೇಶ್ವರ ಸ್ವಾಮಿ ದೇವಾಲಯ ಅಭಿವೃಧ್ಧಿ ಸಮಿತಿ ಹಾಗೂ ದಕ್ಷಿಣ ಭಾರತ ಕುಂಬಾರ ಪ್ರಜಾಪತಿ ಫೇಡರೇಶನ್‌ ಆಫ್‌ ರ‍್ನಾಟಕ ಸಂಯುಕ್ತವಾಗಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಹಂತ ಹಂತವಾಗಿ ಮೇಲೇರಿದ ವ್ಯಕ್ತಿ

ಬಣ ರಾಜಕೀಯ ಮೇಲಾಟಕ್ಕಾಗಿ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಣ್‌ ಅವರನ್ನು ಬಲಿಪಾಶ ಮಾಡಲಾಗಿದೆ. ಅವರು ೩೫ ರ‍್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿ ಹಂತ ಹಂತವಾಗಿ ಬೆಳೆದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾದವರು. ಅವರ ಸ್ಥಾನಕ್ಕೆ ಅವರ ಹಿರಿಯತನಕ್ಕೆ ಬೆಲೆ ಕೊಡುವ ಸೌಜನ್ಯ ಸಭೆಯಲ್ಲಿದ್ದ ಶಾಸಕರಿಗೆ ಕಂಡು ಬರದಿರುವುದು ನಮ್ಮ ಸಮುದಾಯಕ್ಕೆ ನೋವನ್ನು ಉಂಟು ಮಾಡಿದೆ ಎಂದರು.

ಕ್ರಮ ಕೈಗೊಳ್ಳಲು ಆಗ್ರಹ

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಡಾ.ನಾಗರಾಜ್‌ ಮಾತನಾಡಿ, ಈ ಘಟನೆ ಬಗ್ಗೆ ರಾಜ್ಯಾದದ್ಯಂತ ಪ್ರತಿಭಟನೆ ನಡೆದಿದ್ದು,ಲಕ್ಷ್ಮಿ ನಾರಾಯಣ್‌ ಅವರಿಗೆ ನ್ಯಾಯ ಒದಗಿಸಿಕೊಡುವಂತೆ ಪಕ್ಷದ ವರಿಷ್ಠರಿಗೆ ಅಗ್ರಹಿಸಲಾಗಿದೆ. ಆರೋಪಿಗಳ ವಿರುದ್ಧ ಶಿಸ್ತಿನ ಕ್ರಮಕ್ಕೆ ಪಕ್ಷ ಮುಂದಾಗಬೇಕು ಎಂದರು.

ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ನಂಜುಂಡಪ್ಪ,ಪುರಸಭೆ ಮಾಜಿ ಸದಸ್ಯರಾದ ರಾಜರಾಂ,ಸುಬ್ರಮಣಿ ಮಾತನಾಡಿದರು.

ಪುರಸಭೆ ಸದಸ್ಯ ಬುಲೆಟ್‌ ವೆಂಕಟೇಶ್‌,ಕುಂಬೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್‌ ನ ಅಧ್ಯಕ್ಷ ಎ.ಶ್ರೀನಿವಾಸ್‌,ಕುಂಬಾರರ ಸಂಘದ ಪ್ರಧಾನ ಕರ‍್ಯರ‍್ಶಿ ರಾಜೇಂದ್ರ ಪಾಠಕ್‌,ಸಿ.ಶ್ರೀನಿವಾಸ್‌ ,ಪ್ಲಾಸ್ಟಿಕ್‌ ಮುನಿಸ್ವಾಮಿ ,ಅರುಣ ರವಿ,ವೆಂಕಟೇಶ್‌ ಇನ್ನಿತರರು ಇದ್ದರು.

Share this article