- ನಾಯ್ಡು ಹೇಳಿಕೆಗೆ ಡಿಸಿಎಂ ತಿರುಗೇಟು
- ಆಂಧ್ರಕ್ಕೆ ವಿಮಾನ ಘಟಕ ಸ್ಥಳಾಂತರಕ್ಕೆ ನಾಯ್ಡು ಯತ್ನ
- ಇದಕ್ಕೆ ಡಿಕೆಶಿ ಕಿಡಿ । ನಮ್ಮಲ್ಲೇ ಉಳಿಸಿಕೊಳ್ಳುವ ವಾಗ್ದಾನ- ಎಚ್‌ಎಎಲ್ ಸೇರಿ ನವರತ್ನಗಳು ನಮ್ಮ ಅಸ್ಮಿತೆ ಪ್ರತೀಕ
===
ರಾಜ್ಯದ ಹೆಮ್ಮೆಯ ಹಿಂದೂಸ್ತಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಘಟಕ ಆಂಧ್ರಕ್ಕೆ ಸ್ಥಳಾಂತರ ಬೇಡಿಕೆ ವಿಚಾರವಾಗಿ ನಮ್ಮ ರಾಜ್ಯದ ಸಂಸದರು, ಕೇಂದ್ರದ ಸಚಿವರು ಧ್ವನಿ ಎತ್ತಬೇಕು. ನಾವು ಯಾವುದೇ ಕಾರಣಕ್ಕೂ ಎಚ್‌ಎಎಲ್ ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ರಾಜಕೀಯವಾಗಿ ಇಡುವ ಬೇಡಿಕೆಗೆ ನಮ್ಮ ಆಕ್ಷೇಪ ಇಲ್ಲ. ಅವರು ಹೊಸದಾಗಿ ಸ್ಥಾಪಿಸಿಕೊಳ್ಳಲಿ. ಆದರೆ, ನಮ್ಮ ರಾಜ್ಯದಲ್ಲಿ ಮೊದಲಿನಿಂದಲೂ ಇರುವುದನ್ನು ನಾವು ಉಳಿಸಿಕೊಳ್ಳುತ್ತೇವೆ. ಎಚ್‌ಎಎಲ್ ಸೇರಿ ನವರತ್ನ ಕಂಪನಿಗಳು ನಮ್ಮ ಸ್ವಾಭಿಮಾನವಾಗಿವೆ. ರಾಜ್ಯದ ಯಾವುದೇ ಕಂಪನಿಯನ್ನು ಯಾವುದೇ ಕಾರಣಕ್ಕೂ ನಾವು ಬಿಟ್ಟು ಕೊಡುವುದಿಲ್ಲ. ಅವುಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.