ಮಹಿಳಾ ಮಂತ್ರಿ ಸ್ಥಾನ ಬಗ್ಗೆ ಇಂದು ಡಿಕೆ ಚರ್ಚೆ?

Published : Nov 16, 2026, 05:04 AM IST
DK Shivakumar

ಸಾರಾಂಶ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸೋಮವಾರ ಮಧ್ಯಾಹ್ನ ದೆಹಲಿಗೆ ತೆರಳಲಿದ್ದು, ಈ ವೇಳೆ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸುವುದು ಸೇರಿ ಖಾಲಿ ಇರುವ ಸ್ಥಾನ ಭರ್ತಿ ಕುರಿತು ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸೋಮವಾರ ಮಧ್ಯಾಹ್ನ ದೆಹಲಿಗೆ ತೆರಳಲಿದ್ದು, ಈ ವೇಳೆ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸುವುದು ಸೇರಿ ಖಾಲಿ ಇರುವ ಸ್ಥಾನ ಭರ್ತಿ ಕುರಿತು ವರಿಷ್ಠರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಮಹಿಳೆ ಸೇರ್ಪಡೆ ಮಾಡುವ ಸಂಬಂಧ ಹೈಕಮಾಂಡ್‌ ಗಮನಕ್ಕೆ

ಈ ಕುರಿತು ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿರುವ ಅವರು, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ತೆರಳುತ್ತಿದ್ದೇನೆ. ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಈಗಾಗಲೇ ದೆಹಲಿ ವರಿಷ್ಠರಿಗೆ ತಿಳಿಸಿದ್ದೇನೆ. ಸಂಪುಟಕ್ಕೆ ಮಹಿಳೆಯರನ್ನು ಸೇರ್ಪಡೆ ಮಾಡುವ ಸಂಬಂಧವೂ ಹೈಕಮಾಂಡ್‌ ಗಮನಕ್ಕೆ ತಂದಿದ್ದೇನೆ ಎಂದರು.

ಖಂಡಿತಾ ಬಾಕಿ ಸ್ಥಾನ ಭರ್ತಿ ಮಾಡುತ್ತೇವೆ

ಈ ಮಾತುಕತೆ ಪ್ರಕ್ರಿಯೆ ನಾಳೆ ಆಗುತ್ತೋ, ಇಲ್ವೋ ಗೊತ್ತಿಲ್ಲ. ಆದರೆ, ಈ ವಿಚಾರವಾಗಿ ಚರ್ಚಿಸಲು ನನ್ನನ್ನು ದೆಹಲಿಗೆ ಆಹ್ವಾನಿಸುತ್ತೇನೆ ಎಂದು ವರಿಷ್ಠರು ತಿಳಿಸಿದ್ದಾರೆ. ಇದು ಆಗಬೇಕಾದ ಕೆಲಸ. ನಾವು ಖಂಡಿತಾ ಬಾಕಿ ಸ್ಥಾನ ಭರ್ತಿ ಮಾಡುತ್ತೇವೆ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಿಜೆಪಿಗರು ವಾಸ್ತವ ಅರಿಯಲಿ : ಎಚ್‌ಡಿಕೆ - ಜೆಡಿಎಸ್‌ ಪರ ಕ್ಷೇತ್ರದಲ್ಲಿ ಒಲವಿದೆ
21ಕ್ಕೆ ಹಿರಿಯೂರಲ್ಲಿ ಡಿಕೆಶಿ ಪ್ರಜಾಸೇವೆ - ಬೈಎಲೆಕ್ಷನ್‌ ಹಿನ್ನೆಲೆ ಕಾರ್ಯಕ್ರಮ