ಕನ್ನಡಪ್ರಭ ವಾರ್ತೆ, ಬೆಂಗಳೂರು
ಮುಂದಿನ ವರ್ಷದ ವೇಳೆಗೆ ಮತ್ತೊಂದು ಲಕ್ಷ ಕೊಟಿ ರು. ಮೌಲ್ಯದ ಖರೀದಿ ಆದೇಶಗಳು ಬರಲಿವೆ. ಸುಖೋಯ್‌ಗಾಗಿ 240 ಎಂಜಿನ್, ಎಲ್‌ಸಿಎ ತೇಜಸ್‌ನ 83 ಲಘು ಯುದ್ದ ವಿಮಾನ, ಎಲ್‌ಯುಎಚ್ ಹೆಲಿಕಾಪ್ಟರ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಂದ ಆಗಿದೆ.
2030ರವರೆಗೆ ಉತ್ಪಾದನೆಗೆ ಅಗತ್ಯವಿರುವ ಖರೀದಿ ಒಪ್ಪಂದಗಳು ಈಗಾಗಲೇ ಆಗಿವೆ. ಎಚ್‌ಎಎಲ್ ಆದಾಯವನ್ನು ಮತ್ತಷ್ಟು ಹೆಚ್ಚಳ ಮಾಡಲು ವಿದೇಶಗಳಿಗೆ ರಫ್ತು ಆದೇಶಗಳನ್ನು ತರಲೂ ಕೆಲಸ ಮಾಡುತ್ತಿದ್ದು, ವಿದೇಶಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಹೇಳಿದರು.ಯಲಹಂಕ ವಾಯುನೆಲೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಹಣಕಾಸು ವರ್ಷದಲ್ಲಿ 30,380 ಕೋಟಿ ರು. ಆದಾಯ ಗಳಿಸಿದ ದೇಶದ ಮೊದಲ ರಕ್ಷಣಾ ವಲಯದ ಸಾರ್ವಜನಿಕ ಸ್ವಾಮ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಚ್‌ಎಎಲ್ ಪಾತ್ರವಾಗಿದೆ. ಸಂಸ್ಥೆಯ ಬಳಿ ಸದ್ಯ 1.2 ಲಕ್ಷ ಕೋಟಿ ರೂ.ಗಳ ಖರೀದಿ ಒಪ್ಪಂದವಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕಾಂಬ್ಯಾಟ್ ಏರ್‌ಕ್ರಾಫ್ಟ್ ಕಡೆಗೆ ಹೆಚ್ಚು ಒಲವು ನೀಡಲಿದೆ ಎಂದು ಹೇಳಿದರು.
ವಿದೇಶಕ್ಕೆ ರಫ್ತು ಮಾತುಕತೆ:
ತೇಜಸ್ ವಿಮಾನ ಶೀಘ್ರ ಹಸ್ತಾಂತರ:
ತೇಜಸ್ ವಿಮಾನಗಳ ಪೂರೈಕೆ ವಿಳಂಬಕ್ಕೆ ವಾಯುಸೇನೆ ಮುಖ್ಯಸ್ಥರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, 2025ರ ಅಂತ್ಯಕ್ಕೆಹನ್ನೊಂದು ತೇಜಸ್ ಎಂಕೆ-1ಎ ವಿಮಾನಗಳನ್ನು ಭಾರತೀಯ ವಾಯುಸೇನೆಗೆ ಹಸ್ತಾಂತರಿಸಲಾಗುವುದು. ಈ ಪೈಕಿ ಮೂರು ವಿಮಾನಗಳು ಏರೋ ಇಂಡಿಯಾದಲ್ಲಿ ಪ್ರದರ್ಶನ ನೀಡುತ್ತಿವೆ. ಜನರಲ್ ಎಲೆಕ್ಟ್ರಿಕ್ ತನ್ನ ಇಂಜಿನ್‌ಗಳನ್ನು ನೀಡಲು ವಿಳಂಬ ಮಾಡಿದ್ದರಿಂದ ಯೋಜನೆ ತಡವಾಯಿತು. ಈಗ ಪೂರೈಕೆ ಸರಪಣಿ ಸರಿ ದಾರಿಗೆ ಬಂದಿದ್ದು, ಮುಂದೆ ಇಂತಹ ಲೋಪಗಳು ಆಗುವುದಿಲ್ಲ ಎಂದು ಭರವಸೆ ನೀಡಿದರು.ಎಚ್‌ಎಎಲ್ ಷೇರು ಟ್ರೇಡಿಂಗ್‌ಗಾಗಿ ಅಲ್ಲ: ಎಚ್ಎಎಲ್