ಕನ್ನಡಪ್ರಭವಾರ್ತೆ ಬೆಂಗಳೂರು
ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಕಡೆಗೆ ಗಮನವನ್ನು ಕೇಂದ್ರೀಕರಿಸಿರುವ ಟಿಕೆಎಂ ಸಂಸ್ಥೆಯು ತನ್ನ ಬಹು ಮಾರ್ಗ ವಿಧಾನದ ಮೂಲಕ ವಿವಿಧ ಪರ್ಯಾಯ ಇಂಧನ ಸಾರಿಗೆ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವುದರ ಜೊತೆಗೆ ಫಾಸಿಲ್ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಂಸ್ಥೆಯು ಶ್ರಮಿಸುತ್ತಿದೆ.
ಇಂಡಿಯಾ ಎನರ್ಜಿ ವೀಕ್‌ನಲ್ಲಿ ಟೊಯೋಟಾ ಸಂಸ್ಥೆಯು ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಸ್ಎಚ್ಇವಿ) ಅನ್ನು ಪ್ರದರ್ಶಿಸುತ್ತಿದೆ. ಈ ವಿಭಾಗದಲ್ಲಿ ಇನ್ನೋವಾ ಹೈಕ್ರಾಸ್ (ಎಸ್ಎಚ್ಇವಿ) ತನ್ನ ಅಸಾಧಾರಣ ಹೈಬ್ರಿಡ್ ಎಲೆಕ್ಟ್ರಿಕ್ ಸಿಸ್ಟಮ್ ಅನ್ನು ಪ್ರದರ್ಶಿಸಲಿದೆ. ಫ್ಲೆಕ್ಸ್- ಫ್ಯುಯಲ್ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಪ್ರೊಟೊಟೈಪ್ (ಎಫ್ಎಫ್ ವಿ- ಪಿಎಚ್ಇವಿ) ಅನ್ನು ಪ್ರದರ್ಶಿಸಲಾಗುತ್ತಿದ್ದು, ಈ ಮೂಲಕ ಇಂಗಾಲ ತಟಸ್ಥತೆ ಸಾಧಿಸುವ ಕಡೆಗಿನ ತನ್ನ ಕೆಲಸವನ್ನು ಕಾಣಿಸುತ್ತಿದೆ. ಅರ್ಬನ್ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (ಬಿಇವಿ) ಕಾನ್ಸೆಪ್ಟ್ ಅನ್ನು ತಿಳಿಸಲಾಗುತ್ತಿದ್ದು, ಭವಿಷ್ಯಕ್ಕೆ ಸಲ್ಲುವ ವಿನ್ಯಾಸ ಮತ್ತು ಕಾರ್ಯಕ್ಷಮತೆ ಹೊಸ ಎಲೆಕ್ಟ್ರಿಕ್ ವಾಹನವನ್ನು ಪ್ರದರ್ಶಿಸಲಿದೆ.ಭವಿಷ್ಯದ ಇಂಧನ ಎಂದೇ ಪರಿಗಣಿತವಾಗಿರುವ ಜಲಜನಕದಿಂದ ಚಾಲಿತವಾಗಿರುವ ಮಿರೈ (ಎಫ್ ಸಿ ಇ ವಿ) ವ್ಯವಸ್ಥೆಯನ್ನು ಪ್ರದರ್ಶನ ಮಾಡಲಾಗುತ್ತಿದೆ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಸಬ್-ಸಿಸ್ಟಮ್ ಅನಾವರಣಗೊಳಿಸಲಾಗುತ್ತಿದೆ.