ಪ್ರಜ್ವಲ್‌ ರೇವಣ್ಣಗೆ ಕಂಟಕವಾದ 5 ಅಂಶಗಳು

Published : Aug 03, 2025, 10:27 AM ISTUpdated : Aug 03, 2025, 10:30 AM IST
prajwal revanna

ಸಾರಾಂಶ

ಹೊಳೆನರಸೀಪುರ ತಾಲೂಕಿನ ಗನ್ನಿಕಡ ಗ್ರಾಮದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಫಾರ್ಮ್‌ ಹೌಸ್ ಇದೆ. ಈ ತೋಟದಲ್ಲಿ ಕೆಲಸದಾಳುಗಳ ಮನೆಯಲ್ಲೇ ಸಂತ್ರಸ್ತೆ ಸಹ ಇದ್ದರು. ಆ ಮನೆಗೆ ಎಸ್‌ಐಟಿ ದಾಳಿ ನಡೆಸಿದಾಗ ಸಂತ್ರಸ್ತೆಯ ಸೀರೆ ಹಾಗೂ ಒಳ ಉಡುಪುಗಳು ಸಿಕ್ಕಿದ್ದವು.

(ಸೆ.11, 2024 ರಂದು ಕನ್ನಡಪ್ರಭ ಸೀರಿಸ್ ಸಂಕಷ್ಟ ಎಂದು ವರದಿ ಮಾಡಿತ್ತು)

ಹೊಳೆನರಸೀಪುರ ತಾಲೂಕಿನ ಗನ್ನಿಕಡ ಗ್ರಾಮದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಫಾರ್ಮ್‌ ಹೌಸ್ ಇದೆ. ಈ ತೋಟದಲ್ಲಿ ಕೆಲಸದಾಳುಗಳ ಮನೆಯಲ್ಲೇ ಸಂತ್ರಸ್ತೆ ಸಹ ಇದ್ದರು. ಆ ಮನೆಗೆ ಎಸ್‌ಐಟಿ ದಾಳಿ ನಡೆಸಿದಾಗ ಸಂತ್ರಸ್ತೆಯ ಸೀರೆ ಹಾಗೂ ಒಳ ಉಡುಪುಗಳು ಸಿಕ್ಕಿದ್ದವು. ಇವುಗಳಲ್ಲಿ ಪತ್ತೆಯಾದ ವೀರ್ಯ ಆಧರಿಸಿ ಆರೋಪಿ ಹಾಗೂ ಡಿಎನ್‌ಐ ಪರೀಕ್ಷೆ ನಡೆಸಿದಾಗ ಸಾಮ್ಯತೆ ಖಚಿತವಾಗಿತ್ತು.

ವಿಡಿಯೋದಲ್ಲಿ ಸಿಕ್ಕಿದ ಪುರುಷನ ಧ್ವನಿ ಪರೀಕ್ಷೆ

(ಧ್ವನಿ ಪರೀಕ್ಷೆ ಬಗ್ಗೆ ಕನ್ನಡಪ್ರಭ ಮೇ 29, 2024ರಂದು ವರದಿ ಪ್ರಕಟಿಸಿತ್ತು)

ಲೈಂಗಿಕ ದೌರ್ಜನ್ಯದ ವಿಡಿಯೋದಲ್ಲಿ ಸಂತ್ರಸ್ತೆ ಜತೆ ಮಾತನಾಡುವ ಪುರುಷ ಧ್ವನಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರ ಧ್ವನಿ ಪರೀಕ್ಷೆಯನ್ನು ಎಸ್‌ಐಟಿ ನಡೆಸಿತು. ಆಗ ವಿಡಿಯೋದಲ್ಲಿದ್ದ ಪುರುಷ ಧ್ವನಿಗೆ ಪ್ರಜ್ವಲ್ ಧ್ವನಿ ಹೊಂದಾಣಿಕೆ ಬಗ್ಗೆ ಎಫ್‌ಎಸ್‌ಎಲ್ ವರದಿ ನೀಡಿತು.

ಅಂಗಾಂಗಳ ಹೋಲಿಕೆ ಪರೀಕ್ಷೆ

(ಕನ್ನಡಪ್ರಭ ಜೂ.14, 2024ರಂದು ವರದಿ ಪ್ರಕಟಿಸಿತ್ತು?)

ಲೈಂಗಿಕ ದೌರ್ಜನ್ಯ ಕೃತ್ಯದ ವಿಡಿಯೋದಲ್ಲಿ ಸಂತ್ರಸ್ತೆ ಜತೆ ಮಾತನಾಡುತ್ತಿದ್ದ ಪುರುಷನ ಕೈಗಳು, ಸೊಂಟ, ಗುಪ್ತಾಂಗ ಹಾಗೂ ಕಾಲು ಸೇರಿ ಕೆಲ ಅಂಗಾಂಗಗಳು ಕಂಡು ಬಂದಿದ್ದವು. ಈ ಅಂಗಾಂಗಗಳ ಹೋಲಿಕೆಗೆ ಪ್ರಜ್ವಲ್ ರೇವಣ್ಣ ಅವರ ದೇಹವನ್ನು ವಿಡಿಯೋ ಚಿತ್ರೀಕರಿಸಿ ಎಫ್‌ಎಸ್‌ಎಲ್‌ಗೆ ಎಸ್ಐಟಿ ಕಳುಹಿಸಿತ್ತು. ಆಗ ಲೈಂಗಿಕ ಹಗರಣದ ವಿಡಿಯೋದಲ್ಲಿ ಪತ್ತೆಯಾದ ಪುರುಷನ ಅಂಗಗಳಿಗೂ ಪ್ರಜ್ವಲ್ ದೇಹದ ಅಂಗಾಂಗಳಿಗೂ ಹೋಲಿಕೆ ಕಂಡು ಬಂತು.

ಮೊಬೈಲ್‌ನ ವಿಡಿಯೋಗಳ ಸಾಚಾತನ ಖಚಿತ

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮೊಬೈಲ್ ಅನ್ನು ಎಸ್‌ಐಟಿ ಜಪ್ತಿ ಮಾಡಿತ್ತು. ಬಳಿಕ ಈ ಮೊಬೈಲ್ ಅನ್ನು ಎಫ್‌ಎಸ್‌ಎಲ್ ತಜ್ಞರು ಪರಿಶೀಲಿಸಿದಾಗ ಅದರಲ್ಲಿ ಪ್ರಜ್ವಲ್ ಅವರಿಗೆ ಸೇರಿದ್ದ ಅಶ್ಲೀಲ ವಿಡಿಯೋಗಳ ನಕಲಿ ಅಲ್ಲ ಹಾಗೂ ಆರೋಪಿಯೇ ಆ ವಿಡಿಯೋಗಳನ್ನು ಚಿತ್ರೀಕರಿಸಿರುವುದು ಖಚಿತವಾಯಿತು.

ಸಂತ್ರಸ್ತೆಯ ದೃಢವಾದ ನಿಲುವು

ಲೈಂಗಿಕ ದೌರ್ಜನ್ಯ ಕೃತ್ಯ ಬೆಳಕಿಗೆ ಬಂದ ನಂತರ ಸಂತ್ರಸ್ತೆಯನ್ನು ಪ್ರಜ್ವಲ್ ರೇವಣ್ಣ ಕುಟುಂಬದವರು ಅಪಹರಿಸಿದ್ದರು. ಆಗ ಜೀವಭೀತಿಗೊಳಗಾಗಿದ್ದ ಸಂತ್ರಸ್ತೆಯನ್ನು ರಕ್ಷಿಸಿ ಎಸ್‌ಐಟಿ ಅಧಿಕಾರಿಗಳು ಆತ್ಮಸ್ಥೈರ್ಯ ತುಂಬಿದರು. ನ್ಯಾಯಾಲಯದಲ್ಲಿ ಮೂರು ದಿನಗಳ ವಿಚಾರಣೆ ವೇಳೆ ಸಂತ್ರಸ್ತೆ ನಿರ್ಭಿತಿಯಿಂದ ಹೇಳಿಕೆ ನೀಡಿದರು. ಎರಡು ದಿನಗಳ ಕಾಲ ಸತತವಾಗಿ ಎಂಟು ತಾಸು ಆಕೆಯನ್ನು ಪ್ರಜ್ವಲ್ ಪರ ವಕೀಲರು ಪ್ರಶ್ನಿಸಿದರೂ ಸಂತ್ರಸ್ತೆ ಎದೆಗುಂದಲಿಲ್ಲ.

ವಿಡಿಯೋ ಹಂಚಿಕೆಗಾಗಿ 100 ಪೆನ್‌ಡ್ರೈವ್ ಖರೀದಿ:

ಹಾಸನ ಜಿಲ್ಲೆ ಲೈಂಗಿಕ ದೌರ್ಜನ್ಯ ಕೃತ್ಯ ಸಂಬಂಧ ವಿಡಿಯೋ ಹಂಚಿಕೆಗೆ ಹೊಸದಾಗಿ 100 ಪೆನ್‌ಡ್ರೈವ್‌ಗಳು ಹಾಗೂ 1 ಲ್ಯಾಪ್ ಟಾಪ್‌ ಅನ್ನು ಆರೋಪಿಗಳು ಖರೀದಿಸಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುತ್ತೇವೆ ಎಂದು ಎಸ್‌ಐಟಿ ಮುಖ್ಯಸ್ಥರು ಹೇಳಿದ್ದಾರೆ.

ತೀರ್ಪು ವಿಳಂಬಕ್ಕೆ ಪ್ರಜ್ವಲ್ ಯತ್ನ; ಎಸ್‌ಐಟಿ:

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಶೀಘ್ರ ತೀರ್ಪು ವಿಳಂಬವಾಗುವಂತೆ ಮಾಡಲು ನಾನಾ ತಂತ್ರಗಾರಿಕೆ ನಡೆಯಿತು. ಇಂಥ ತಂತ್ರಗಾರಿಕೆ ಹೊರತಾಗಿ 1 ವರ್ಷ 4 ತಿಂಗಳಲ್ಲೇ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಹೇಳಿದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಸಿಐಡಿ ಕೇಂದ್ರ ಕಚೇರಿಯಲ್ಲಿ ತಮ್ಮ ತಂಡದ ಜತೆ ಅವರು ಸುದ್ದಿಗೋಷ್ಠಿ ನಡೆಸಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಪೆನ್‌ ಡ್ರೈವ್ ಹಂಚಿಕೆಯಾಗಿದ್ದವು. ಈ ಪೆನ್ ಡ್ರೈವ್‌ಗಳಲ್ಲಿ ಮಹಿಳೆಯರ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳಿದ್ದವು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ತನಿಖೆಗೆ ನನ್ನ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಈ ತಂಡದಲ್ಲಿ ಎಸ್ಪಿಗಳಾದ ಸೀಮಾ ಲಾಟ್ಕರ್‌ ಹಾಗೂ ಸುಮನ್ ಡಿ.ಪನ್ನೇಕರ್ ಸೇರಿ ಅಧಿಕಾರಿಗಳಿದ್ದರು ಎಂದು ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದರು.

ಮೊದಲು ನಾಲ್ವರು ಸಂತ್ರಸ್ತೆಯರು ಮುಂದೆ ಬಂದು ದೂರು ನೀಡಿದರು. ಅಂತೆಯೇ ಹೊಳೆನರಸೀಪುರ, ಕೆ.ಆರ್‌.ನಗರ ಹಾಗೂ ಸಿಐಡಿ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು. ಆರು ಪ್ರಕರಣಗಳಲ್ಲಿ ಐದು ಪ್ರಕರಣಗಳು ತನಿಖೆ ಪೂರ್ಣಗೊಂಡಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಒಬ್ಬರು ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನವರಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ 5 ಸಂಪುಟಗಳಲ್ಲಿ 1809 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದೆವು. ತರುವಾಯ 2024 ಅಕ್ಟೋಬರ್‌ನಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. ಆದರೆ ವಿಚಾರಣೆಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಯಿತು. ಇದರಿಂದ ಕೆಳಹಂತದ ನ್ಯಾಯಾಲಯದ ವಿಚಾರಣೆ ವಿಳಂಬವಾಯಿತು ಎಂದು ಹೇಳಿದರು.

ಇದೇ ವರ್ಷದ ಮೇ ತಿಂಗಳಿಂದ ಮತ್ತೆ ನ್ಯಾಯಾಲಯದ ವಿಚಾರಣೆ ಆರಂಭವಾಗಿ ಮೂರು ತಿಂಗಳಲ್ಲೇ ತೀರ್ಪು ಬಂದಿದೆ. ವಿಚಾರಣಾ ಹಂತದಲ್ಲಿ ನ್ಯಾಯಾಲಯದ ಮುಂದೆ 26 ಸಾಕ್ಷಿಗಳ ಹೇಳಿಕೆ ಹಾಗೂ 180 ದಾಖಲೆಗಳು ಸೇರಿ ಇತರೆ ಪುರಾವೆಗಳನ್ನು ಹಾಜರುಪಡಿಸಲಾಯಿತು. ದೂರುದಾರ ಮಹಿಳೆಯ ಹೇಳಿಕೆಯನ್ನು ದೃಢೀಕರಿಸಲು ಜೈವಿಕ, ತಾಂತ್ರಿಕ, ಡಿಜಿಟಲ್‌, ಮೊಬೈಲ್ ಹಾಗೂ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗಿತ್ತು. ಆರೋಪಿ ವಿರುದ್ಧ ದಾಖಲಿಸಿದ್ದ 376(ಕೆ), 376(2) ಎನ್‌ ಹಾಗೂ ಐಟಿ ಕಾಯ್ದೆ ಪ್ರತಿ ಸೆಕ್ಷನ್‌ ಅಡಿ ಸಹ ಶಿಕ್ಷೆಯಾಗಿದ್ದು, ತನ್ನ ಕೊನೆಯುಸಿರುವರೆಗೆ ಆರೋಪಿ ಜೈಲಿನಿಂದ ಹೊರಬರುವಂತಿಲ್ಲ ಎಂದರು. ತನಿಖಾ ತಂಡ ಹೀಗಿದೆ:

ಎನ್.ಶೋಭಾ ತನಿಖಾಧಿಕಾರಿ, ತನಿಖಾ ಸಹಾಯಕರಾಗಿ ಎಎಸ್‌ಐ ರತ್ನಮ್ಮ ಮತ್ತು ಎಚ್‌ಸಿ ವೈ.ಬಾಲಕೃಷ್ಣ, ವಿಚಾರಣೆಯನ್ನು ಇನ್ಸ್‌ಪೆಕ್ಟರ್‌ ನಂದೀಶ್‌, ಕಾನ್‌ಸ್ಟೇಬಲ್‌ ಎಂ.ಮಮತಾ, ಕಾನ್‌ಸ್ಟೇಬಲ್ ಜಾಫರ್ ಸಾದಿಕ್ ಖಾನ್‌ ಹಾಗೂ ಕಾಶಿನಾಥ್ ಕರಲಟ್ಟಿ ನಿರ್ವಹಿಸಿದರು. ಅಲ್ಲದೆ ತನಿಖೆಗೆ ನೈತಿಕವಾಗಿ ಬೆಂಬಲಿಸಿದ್ದ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಹಾಗೂ ತಾಂತ್ರಿಕ ನೆರವು ನೀಡಿದ್ದ ಎಫ್‌ಎಸ್‌ಎಲ್‌ ನಿರ್ದೇಶಕಿ ಡಾ.ದಿವ್ಯಾ ಗೋಪಿನಾಥ್ ಅವರಿಗೆ ಎಸ್‌ಐಟಿ ಕೃತಜ್ಞತೆ ಸಲ್ಲಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ 1 ವರ್ಷ 4 ತಿಂಗಳಲ್ಲಿ ಪ್ರಕರಣದ ತೀರ್ಪು ಬಂದಿರುವುದು ವಿಶೇಷ. ಇನ್ನು ಡಿಫೆನ್ಸ್ (ಆರೋಪಿ)ಕಡೆಯಿಂದ ವಿಚಾರಣೆ ವಿಳಂಬಕ್ಕೆ ಭಾರೀ ಪ್ರಯತ್ನ ನಡೆಯಿತು. ಅಂತಿಮ ತೀರ್ಪು ತಡೆಗೂ ರೂಪುರೇಷೆ ಸಿದ್ಧಪಡಿಸಿದ್ದರು. ಹೀಗೆ ಎಲ್ಲ ರೀತಿಯ ತಂತ್ರಗಾರಿಕೆ ಬಳಸಿದರೂ ಪ್ರಕರಣದ ವಿಚಾರಣೆ ವಿಳಂಬ ಮಾಡಲು ಸಾಧ್ಯವಾಗಲಿಲ್ಲ. ನಾವು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಮಾನ್ಯ ಮಾಡಿ ಆರೋಪಿಗೆ ಶಿಕ್ಷೆಯಾಗಿದೆ ಎಂದು ಹೇಳಿದರು.

ಈ ಪ್ರಕರಣದ ಆರೋಪಿ ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಬಲನಾಗಿದ್ದರೆ, ಸಂತ್ರಸ್ತೆ ಸಮಾಜದಲ್ಲಿ ಅತ್ಯಂತ ಕೆಳಸ್ತರದ ದುರ್ಬಲ ವರ್ಗದಲ್ಲಿದ್ದರು. ಹೀಗಿದ್ದರೂ ಎಲ್ಲ ಅಡೆತಡೆಗಳ ಹೊರತಾಗಿಯೂ ಅಪರಾಧಿ ವಿರುದ್ಧ ಸಂತ್ರಸ್ತೆ ದೃಢವಾಗಿ ನಿಲ್ಲುವ ಮೂಲಕ ಎಲ್ಲ ಮಹಿಳೆಯರಿಗೆ ಉತ್ತಮ ಮಾದರಿಯಾಗಿದ್ದಾರೆ. ತಮ್ಮ ಮೇಲಿನ ಶೋಷಣೆ ವಿರುದ್ಧ ಮಹಿಳೆಯರಿಗೆ ಅವರು ಧೈರ್ಯ ಮತ್ತು ಸ್ಥಿತಿ ಸ್ಥಾಪಕತ್ವಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಎಡಿಜಿಪಿ ಶ್ಲಾಘಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಎಸ್‌ಐಟಿ ಸುಮನ್‌.ಡಿ.ಪನ್ನೇಕರ್‌, ತನಿಖಾಧಿಕಾರಿ ಎನ್‌.ಶೋಭಾ, ಇನ್ಸ್‌ಪೆಕ್ಟರ್‌ ನಂದೀಶ್‌ ಹಾಗೂ ವಿಶೇಷ ಅಭಿಯೋಜಕ ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.

ತೀರ್ಪು ವಿಳಂಬಕ್ಕೆ ಪ್ರಜ್ವಲ್ ಯತ್ನ: ಎಸ್‌ಐಟಿ

 ಬೆಂಗಳೂರು :  ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಶೀಘ್ರ ತೀರ್ಪು ವಿಳಂಬವಾಗುವಂತೆ ಮಾಡಲು ನಾನಾ ತಂತ್ರಗಾರಿಕೆ ನಡೆಯಿತು. ಇಂಥ ತಂತ್ರಗಾರಿಕೆ ಹೊರತಾಗಿ 1 ವರ್ಷ 4 ತಿಂಗಳಲ್ಲೇ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್ ಹೇಳಿದರು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಸಿಐಡಿ ಕೇಂದ್ರ ಕಚೇರಿಯಲ್ಲಿ ತಮ್ಮ ತಂಡದ ಜತೆ ಅವರು ಸುದ್ದಿಗೋಷ್ಠಿ ನಡೆಸಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಪೆನ್‌ ಡ್ರೈವ್ ಹಂಚಿಕೆಯಾಗಿದ್ದವು. ಈ ಪೆನ್ ಡ್ರೈವ್‌ಗಳಲ್ಲಿ ಮಹಿಳೆಯರ ಅಶ್ಲೀಲ ಚಿತ್ರ ಹಾಗೂ ವಿಡಿಯೋಗಳಿದ್ದವು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ತನಿಖೆಗೆ ನನ್ನ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಈ ತಂಡದಲ್ಲಿ ಎಸ್ಪಿಗಳಾದ ಸೀಮಾ ಲಾಟ್ಕರ್‌ ಹಾಗೂ ಸುಮನ್ ಡಿ.ಪನ್ನೇಕರ್ ಸೇರಿ ಅಧಿಕಾರಿಗಳಿದ್ದರು ಎಂದು ಎಡಿಜಿಪಿ ಬಿ.ಕೆ.ಸಿಂಗ್ ಹೇಳಿದರು.

ಮೊದಲು ನಾಲ್ವರು ಸಂತ್ರಸ್ತೆಯರು ಮುಂದೆ ಬಂದು ದೂರು ನೀಡಿದರು. ಅಂತೆಯೇ ಹೊಳೆನರಸೀಪುರ, ಕೆ.ಆರ್‌.ನಗರ ಹಾಗೂ ಸಿಐಡಿ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು. ಆರು ಪ್ರಕರಣಗಳಲ್ಲಿ ಐದು ಪ್ರಕರಣಗಳು ತನಿಖೆ ಪೂರ್ಣಗೊಂಡಿದೆ. ಈ ಅತ್ಯಾಚಾರ ಪ್ರಕರಣದಲ್ಲಿ ಒಬ್ಬರು ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನವರಾಗಿದ್ದರು. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ 5 ಸಂಪುಟಗಳಲ್ಲಿ 1809 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದೆವು. ತರುವಾಯ 2024 ಅಕ್ಟೋಬರ್‌ನಿಂದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. ಆದರೆ ವಿಚಾರಣೆಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತರಲಾಯಿತು. ಇದರಿಂದ ಕೆಳಹಂತದ ನ್ಯಾಯಾಲಯದ ವಿಚಾರಣೆ ವಿಳಂಬವಾಯಿತು ಎಂದು ಹೇಳಿದರು.

ಇದೇ ವರ್ಷದ ಮೇ ತಿಂಗಳಿಂದ ಮತ್ತೆ ನ್ಯಾಯಾಲಯದ ವಿಚಾರಣೆ ಆರಂಭವಾಗಿ ಮೂರು ತಿಂಗಳಲ್ಲೇ ತೀರ್ಪು ಬಂದಿದೆ. ವಿಚಾರಣಾ ಹಂತದಲ್ಲಿ ನ್ಯಾಯಾಲಯದ ಮುಂದೆ 26 ಸಾಕ್ಷಿಗಳ ಹೇಳಿಕೆ ಹಾಗೂ 180 ದಾಖಲೆಗಳು ಸೇರಿ ಇತರೆ ಪುರಾವೆಗಳನ್ನು ಹಾಜರುಪಡಿಸಲಾಯಿತು. ದೂರುದಾರ ಮಹಿಳೆಯ ಹೇಳಿಕೆಯನ್ನು ದೃಢೀಕರಿಸಲು ಜೈವಿಕ, ತಾಂತ್ರಿಕ, ಡಿಜಿಟಲ್‌, ಮೊಬೈಲ್ ಹಾಗೂ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗಿತ್ತು. ಆರೋಪಿ ವಿರುದ್ಧ ದಾಖಲಿಸಿದ್ದ 376(ಕೆ), 376(2) ಎನ್‌ ಹಾಗೂ ಐಟಿ ಕಾಯ್ದೆ ಪ್ರತಿ ಸೆಕ್ಷನ್‌ ಅಡಿ ಸಹ ಶಿಕ್ಷೆಯಾಗಿದ್ದು, ತನ್ನ ಕೊನೆಯುಸಿರುವರೆಗೆ ಆರೋಪಿ ಜೈಲಿನಿಂದ ಹೊರಬರುವಂತಿಲ್ಲ ಎಂದರು. ತನಿಖಾ ತಂಡ ಹೀಗಿದೆ:

ಎನ್.ಶೋಭಾ ತನಿಖಾಧಿಕಾರಿ, ತನಿಖಾ ಸಹಾಯಕರಾಗಿ ಎಎಸ್‌ಐ ರತ್ನಮ್ಮ ಮತ್ತು ಎಚ್‌ಸಿ ವೈ.ಬಾಲಕೃಷ್ಣ, ವಿಚಾರಣೆಯನ್ನು ಇನ್ಸ್‌ಪೆಕ್ಟರ್‌ ನಂದೀಶ್‌, ಕಾನ್‌ಸ್ಟೇಬಲ್‌ ಎಂ.ಮಮತಾ, ಕಾನ್‌ಸ್ಟೇಬಲ್ ಜಾಫರ್ ಸಾದಿಕ್ ಖಾನ್‌ ಹಾಗೂ ಕಾಶಿನಾಥ್ ಕರಲಟ್ಟಿ ನಿರ್ವಹಿಸಿದರು. ಅಲ್ಲದೆ ತನಿಖೆಗೆ ನೈತಿಕವಾಗಿ ಬೆಂಬಲಿಸಿದ್ದ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಹಾಗೂ ತಾಂತ್ರಿಕ ನೆರವು ನೀಡಿದ್ದ ಎಫ್‌ಎಸ್‌ಎಲ್‌ ನಿರ್ದೇಶಕಿ ಡಾ.ದಿವ್ಯಾ ಗೋಪಿನಾಥ್ ಅವರಿಗೆ ಎಸ್‌ಐಟಿ ಕೃತಜ್ಞತೆ ಸಲ್ಲಿಸಿದೆ.

ಅತ್ಯಾಚಾರ ಪ್ರಕರಣದಲ್ಲಿ 1 ವರ್ಷ 4 ತಿಂಗಳಲ್ಲಿ ಪ್ರಕರಣದ ತೀರ್ಪು ಬಂದಿರುವುದು ವಿಶೇಷ. 

ಇನ್ನು ಡಿಫೆನ್ಸ್ (ಆರೋಪಿ)ಕಡೆಯಿಂದ ವಿಚಾರಣೆ ವಿಳಂಬಕ್ಕೆ ಭಾರೀ ಪ್ರಯತ್ನ ನಡೆಯಿತು. ಅಂತಿಮ ತೀರ್ಪು ತಡೆಗೂ ರೂಪುರೇಷೆ ಸಿದ್ಧಪಡಿಸಿದ್ದರು. ಹೀಗೆ ಎಲ್ಲ ರೀತಿಯ ತಂತ್ರಗಾರಿಕೆ ಬಳಸಿದರೂ ಪ್ರಕರಣದ ವಿಚಾರಣೆ ವಿಳಂಬ ಮಾಡಲು ಸಾಧ್ಯವಾಗಲಿಲ್ಲ. ನಾವು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ಮಾನ್ಯ ಮಾಡಿ ಆರೋಪಿಗೆ ಶಿಕ್ಷೆಯಾಗಿದೆ ಎಂದು ಹೇಳಿದರು.

ಈ ಪ್ರಕರಣದ ಆರೋಪಿ ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಬಲನಾಗಿದ್ದರೆ, ಸಂತ್ರಸ್ತೆ ಸಮಾಜದಲ್ಲಿ ಅತ್ಯಂತ ಕೆಳಸ್ತರದ ದುರ್ಬಲ ವರ್ಗದಲ್ಲಿದ್ದರು. ಹೀಗಿದ್ದರೂ ಎಲ್ಲ ಅಡೆತಡೆಗಳ ಹೊರತಾಗಿಯೂ ಅಪರಾಧಿ ವಿರುದ್ಧ ಸಂತ್ರಸ್ತೆ ದೃಢವಾಗಿ ನಿಲ್ಲುವ ಮೂಲಕ ಎಲ್ಲ ಮಹಿಳೆಯರಿಗೆ ಉತ್ತಮ ಮಾದರಿಯಾಗಿದ್ದಾರೆ. ತಮ್ಮ ಮೇಲಿನ ಶೋಷಣೆ ವಿರುದ್ಧ ಮಹಿಳೆಯರಿಗೆ ಅವರು ಧೈರ್ಯ ಮತ್ತು ಸ್ಥಿತಿ ಸ್ಥಾಪಕತ್ವಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಎಡಿಜಿಪಿ ಶ್ಲಾಘಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಎಸ್‌ಐಟಿ ಸುಮನ್‌.ಡಿ.ಪನ್ನೇಕರ್‌, ತನಿಖಾಧಿಕಾರಿ ಎನ್‌.ಶೋಭಾ, ಇನ್ಸ್‌ಪೆಕ್ಟರ್‌ ನಂದೀಶ್‌ ಹಾಗೂ ವಿಶೇಷ ಅಭಿಯೋಜಕ ಅಶೋಕ್ ನಾಯ್ಕ್ ಉಪಸ್ಥಿತರಿದ್ದರು.

PREV
Read more Articles on

Recommended Stories

ಅಪ್ಪ ಬಿಟ್ಟ ಕುಲಕಸುಬನ್ನು ಶುರು ಮಾಡಿ ಉದ್ಯಮಿಯಾದ ಮಗ
ಜನರನ್ನು ಸ್ನೇಹಿತರು ಅಥವಾ ಶತ್ರುಗಳು ಎಂದು ವರ್ಗಿಕರಿಸದಿರುವುದನ್ನು ನಿಲ್ಲಿಸಿ