;Resize=(412,232))
ಉದ್ಯೋಗ ವಲಯದಲ್ಲಿರುವ ಬಹುತೇಕರು ಈಗ ಐಟಿಆರ್ ಫೈಲ್ ಮಾಡುವ ಸಮಯ. ಐಟಿಆರ್ ಫೈಲ್ ಮಾಡುವ ಈ ಸಂದರ್ಭದಲ್ಲಿ ಯಾವುದೆಲ್ಲಾ ತೆರಿಗೆ ಮುಕ್ತ ಆದಾಯ ಎಂಬುದನ್ನು ತಿಳಿಯುವುದು ಒಳ್ಳೆಯದು. ಈ ವರ್ಷ ಅಲ್ಲದಿದ್ದರೂ ಮುಂದಿನ ವರ್ಷಕ್ಕಾದರೂ ಈ ಮಾಹಿತಿ ನೆರವಾಗುತ್ತದೆ. ತೆರಿಗೆ ವಿನಾಯಿತಿ ಆದಾಯ ಗಳಿಸುವ ಐದು ದಾರಿಗಳಿಲ್ಲಿವೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(1) ರ ಅಡಿಯಲ್ಲಿ ಕೃಷಿಯಿಂದ ಬರುವ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ಕೃಷಿ ಭೂಮಿಯಿಂದ ಬರುವ ಬಾಡಿಗೆ, ಬೆಳೆ ಮಾರಾಟದ ಲಾಭ ಎಲ್ಲವೂ ಇದಕ್ಕೆ ಸೇರುತ್ತದೆ. ಈ ವಿನಾಯಿತಿ ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರ ಅನ್ವಯಿಸುತ್ತದೆ.
ದೀರ್ಘಾವಧಿಯ ಹೂಡಿಕೆಗೆ ಪಿಪಿಎಫ್ ಅತ್ಯುತ್ತಮ ಮತ್ತು ಸುರಕ್ಷಿತ ಮಾರ್ಗ. ನೀವು ಹೂಡಿಕೆ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಆದರೆ ಅದರ ಮೇಲಿನ ಬಡ್ಡಿಗೆ ತೆರಿಗೆ ಇರುವುದಿಲ್ಲ. ಯೋಜನೆಯ ಅವಧಿ ಮುಗಿದ ನಂತರ ಸಿಗುವ ಒಟ್ಟು ಮೊತ್ತಕ್ಕೂ ಯಾವುದೇ ಬ್ಯಾಂಕ್ ಅಥವಾ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಇದೇ ನಿಯಮ ಇಪಿಎಫ್ ಖಾತೆಗೂ ಅನ್ವಯಿಸುತ್ತದೆ. (ಆದರೆ ಇಪಿಎಫ್‌ನಲ್ಲಿ ವಾರ್ಷಿಕ ₹2.5 ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆಯ ಬಡ್ಡಿಗೆ ತೆರಿಗೆ ಇರುತ್ತದೆ).
3. ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಗುವಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಜಾಣತನ. ಇದು ಕೂಡ ಸಂಪೂರ್ಣ ತೆರಿಗೆ ಮುಕ್ತ. ಈ ಯೋಜನೆಯಡಿ ವಾರ್ಷಿಕವಾಗಿ ಜಮೆಯಾಗುವ ಬಡ್ಡಿ ಮತ್ತು ಮಗು ಬೆಳೆದ ನಂತರ ಸಿಗುವ ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ.
4. ಮದುವೆಯಲ್ಲಿ ಬರುವ ಉಡುಗೊರೆಗಳು
ಸ್ನೇಹಿತರು ಅಥವಾ ಸಂಬಂಧಿಕರಿಂದ ₹50,000ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆ ಅಥವಾ ನಗದು ಪಡೆದರೆ ಅದಕ್ಕೆ ತೆರಿಗೆ ಕಟ್ಟಬೇಕು. ಆದರೆ, ಇದಕ್ಕೆ ಇರುವ ಏಕೈಕ ವಿನಾಯಿತಿ ಎಂದರೆ ಮದುವೆ. ವಿವಾಹದ ಸಂದರ್ಭದಲ್ಲಿ ವಧು-ವರರಿಗೆ ಸಿಗುವ ನಗದು, ಚಿನ್ನ ಅಥವಾ ಯಾವುದೇ ಬೆಲೆಬಾಳುವ ಉಡುಗೊರೆಗಳ ಮೇಲೆ ಸರ್ಕಾರ ತೆರಿಗೆ ವಿಧಿಸುವುದಿಲ್ಲ. ಆದರೆ, ಈ ಉಡುಗೊರೆಗಳನ್ನು ಮದುವೆ ದಿನಾಂಕದ ಆಸುಪಾಸಿನಲ್ಲೇ ಪಡೆದಿರಬೇಕು.
5. ಜೀವ ವಿಮಾ ಪಾಲಿಸಿಯ ಮೊತ್ತ
ನಿಮ್ಮ ಜೀವ ವಿಮಾ ಪಾಲಿಸಿ ಅವಧಿ ಮುಗಿದ ನಂತರ ಸಿಗುವ ಕ್ಲೈಮ್ ಮೊತ್ತ ಅಥವಾ ಮೆಚ್ಯೂರಿಟಿ ಮೊತ್ತಕ್ಕೆ ಸೆಕ್ಷನ್ 10(10ಡಿ) ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಇಲ್ಲಿ ಒಂದು ಸಣ್ಣ ನಿಯಮವಿದೆ. ನಿಮ್ಮ ವಾರ್ಷಿಕ ಪ್ರೀಮಿಯಂ ಮೊತ್ತವು ಪಾಲಿಸಿಯ ಒಟ್ಟು ವಿಮಾ ಮೊತ್ತದ ಶೇಕಡಾ 10 ಕ್ಕಿಂತ ಹೆಚ್ಚಿರಬಾರದು.