;Resize=(412,232))
ಹಳ್ಳಿಗಳಿಂದ 20 ಅಥವಾ 30ರ ಹರೆಯದಲ್ಲಿ ಕೆಲಸಕ್ಕಾಗಿ ಮಹಾನಗರಕ್ಕೆ ಬಂದಿರುವವರಿಗೆ ಕೆಲವು ಪ್ರಮುಖ ಆರ್ಥಿಕ ಪಾಠಗಳು ಇಲ್ಲಿವೆ.
ಹಳ್ಳಿಗೆ ಹೋಲಿಸಿದರೆ ಸಿಟಿಯಲ್ಲಿ ಸಿಗುವ ಸಂಬಳ ದೊಡ್ಡ ಮೊತ್ತದ್ದು ಅನಿಸಬಹುದು. ಆದರೆ ನಗರದಲ್ಲಿ ಕರಿಬೇವಿನ ಸೊಪ್ಪನ್ನೂ ದುಡ್ಡುಕೊಟ್ಟೇ ಖರೀದಿಸಬೇಕಾಗುತ್ತದೆ. ಹೀಗಾಗಿ ಸಂಬಳವನ್ನು ಬೇಕಾಬಿಟ್ಟಿ ಖರ್ಚು ಮಾಡದೇ ಕ್ರಮಬದ್ಧವಾಗಿ ಬಳಸುವುದು ಉತ್ತಮ. ಬಾಡಿಗೆ, ರೇಷನ್ನು, ಉಳಿತಾಯ, ಕೌಟುಂಬಿಕ ಖರ್ಚು ಮತ್ತು ಭವಿಷ್ಯದ ಗುರಿಗೆ ಅಂತ ವಿಭಾಗಿಸಿದರೆ ಇಂದೂ ಮುಂದೂ ಜೀವನದಲ್ಲಿ ಚೆನ್ನಾಗಿರಬಹುದು.
ತಿಂಗಳ ಸಂಬಳ ಮತ್ತು ಖರ್ಚುಗಳನ್ನು ಬರೆದಿಡಿ. ಜೇಬಿಗೆ ತೂತು ಕೊರೆಯುವ ನಿತ್ಯ ಹೊರಗೆ ತಿನ್ನುವ ಅಭ್ಯಾಸ, ನೋಡದ ಓಟಿಟಿ, ಅನಾವಶ್ಯಕ ಶಾಪಿಂಗ್ ಇತ್ಯಾದಿಗಳ ಬಗ್ಗೆ ಗೊತ್ತಾಗುತ್ತದೆ. ಖರ್ಚಿನಲ್ಲಿ ಹತೋಟಿ ಬರುತ್ತದೆ. ಅಷ್ಟು ಹಣ ಇತ್ತಲ್ಲಾ ಎಲ್ ಹೋಯ್ತು ಅಂತ ಉದ್ಗಾರ ತೆಗೆಯೋದಕ್ಕೂ ಬ್ರೇಕ್ ಬೀಳುತ್ತದೆ.
3. ಸಂಬಳದ ಅಷ್ಟೂ ಹಣ ಖಾಲಿ ಮಾಡಬೇಕಾ, ಯೋಚಿಸಿ.
ಬರುವ ವೇತನವನ್ನೆಲ್ಲ ಆ ತಿಂಗಳೇ ಖಾಲಿ ಮಾಡುವ ಖಯಾಲಿ ಒಳ್ಳೆಯದಲ್ಲ. ಉಳಿತಾಯ ಮಾಡಬೇಕು. ತುರ್ತು ಸಂದರ್ಭಕ್ಕೆ ಬೇಕಾಗುತ್ತದೆ. ತಕ್ಷಣಕ್ಕೆ ಶೇ.10ರಷ್ಟಾದರೂ ಸೇವಿಂಗ್ಸ್ ಮಾಡಲು ಶುರು ಮಾಡಿ. ಕ್ರಮೇಣ ನಿಮ್ಮ ಸಂಬಳದ ಶೇ.70 ಅಥವಾ 80 ಭಾಗವನ್ನಷ್ಟೇ ಬಳಸಿ ಜೀವನ ನಿರ್ವಹಿಸಲು ಕಲಿಯಿರಿ.
4. ಗುರಿಯ ಬಗ್ಗೆ ಸ್ಪಷ್ಟತೆ ತಂದುಕೊಳ್ಳಿ
ಇಲ್ಲೊಂದು ಮನೆ ಕಟ್ಟಬೇಕು ಅಂತಲೋ ಅಥವಾ ಪೋಷಕರಿಗೆ ಸಹಾಯ ಮಾಡಬೇಕು ಅಂತಲೋ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಿ. ಇನ್ನು ಹತ್ತು ವರ್ಷದಲ್ಲಿ 20 ಲಕ್ಷ ರು. ಹಣ ಉಳಿತಾಯ ಮಾಡಿ ಮನೆ ಕೊಳ್ಳುತ್ತೇನೆ ಅಂತ ನಿರ್ಧರಿಸಿ. ಉಳಿತಾಯ ಮಾಡುತ್ತಾ ಬನ್ನಿ. ಪೋಷಕರಿಗೆ ಪ್ರತೀ ತಿಂಗಳು ಒಂದಿಷ್ಟು ಮೊತ್ತ ಕಳಿಸುವುದನ್ನು ರೂಢಿಸಿಕೊಳ್ಳಿ. ಆಗ ಉಳಿತಾಯ ಅರ್ಥಪೂರ್ಣವಾಗುತ್ತದೆ.
5. ಸಾಲದ ಬಗ್ಗೆ ಅರಿವಿರಲಿ.
ಬೈಕ್‌ಗೋ, ಮದುವೆ ಖರ್ಚಿಗೋ ಪರ್ಸನಲ್ ಲೋನ್ ಮಾಡುವುದು ಸಾಮಾನ್ಯ. ಹೀಗೆ ಸಾಲ ತೆಗೆದುಕೊಂಡಿದ್ದರೆ ನಿಯಮಿತ ಮೊತ್ತವನ್ನು ಇಇಎಂಐ ಕಟ್ಟುವ ಜೊತೆಗೆ ಜಾಸ್ತಿ ದುಡ್ಡನ್ನು ಕಟ್ಟಲು ಪ್ರಯತ್ನಿಸಿ. ಆಗ ದೀರ್ಘಕಾಲ ಜಾಸ್ತಿ ಬಡ್ಡಿ ಕಟ್ಟುವ ತಲೆನೋವು ಇರೋದಿಲ್ಲ. ಸಾಧ್ಯವಾದಷ್ಟು ಬೇಗ ಸಾಲ ಮುಗಿಸಿ.
6. ತುರ್ತು ನಿಧಿ ಸಂಗ್ರಹಿಸಲು ಶುರು ಮಾಡಿ
ಹೂಡಿಕೆಗಳಲ್ಲಿ ಹಣ ತೊಡಗಿಸಿಕೊಳ್ಳುವ ಮೊದಲು ತುರ್ತು ನಿಧಿಗಾಗಿ 10,000 ರು.ನಿಂದ 50,000 ರು.ತನಕ ಹಣ ಉಳಿತಾಯ ಮಾಡಲು ಶುರುಮಾಡಿ. ಕ್ರಮೇಣ ಮೂರು ನಾಲ್ಕು ತಿಂಗಳ ಖರ್ಚಿಗಾಗುವಷ್ಟು ಮೊತ್ತ ಉಳಿಸಿ. ತುರ್ತು ಸಂದರ್ಭಗಳಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ.
7. ನಿವೃತ್ತಿಗೆ ಉಳಿತಾಯ ಶುರು ಮಾಡಿ
ಎಸ್‌ಐಪಿ, ಪಿಎಫ್ ಅಥವಾ ಎನ್‌ಪಿಎಸ್ ಮೊದಲಾದೆಡೆ ಪೆನ್ಶನ್ ಸ್ಕೀಮ್‌ಗಳಲ್ಲಿ ಹಣವನ್ನು ನಿಯಮಿತವಾಗಿ ಹಾಕಲು ಆರಂಭಿಸಿ. ಚಿಕ್ಕ ವಯಸ್ಸಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡುತ್ತ ಬಂದರೆ ಕೊನೆಯಲ್ಲಿ ಒಂದೊಳ್ಳೆ ಅಮೌಂಟ್ ಆಗಿ ಹಣ ನಿಮ್ಮ ಕೈ ಸೇರುತ್ತದೆ.
8. ಶಿಸ್ತು ಪಾಲಿಸಿದರೆ ಸ್ವಾತಂತ್ರ್ಯ
30ರ ಹರೆಯಲ್ಲಿ ಹಣದ ಮೇಲೆ ಹತೋಟಿ ಬಂದರೆ ಮುಂದಿನ ಮೂವತ್ತು ವರ್ಷದಲ್ಲಿ ಬದುಕು ನೆಕ್ಸ್ಟ್ ಲೆವೆಲ್‌ಗೆ ಹೋಗಬಹುದು.