ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಒಂದೇ ದಿನ 9.2 ಲಕ್ಷ ಜನರು ಸಂಚಾರ - ನೂತನ ದಾಖಲೆ

KannadaprabhaNewsNetwork |  
Published : Dec 08, 2024, 01:15 AM ISTUpdated : Dec 08, 2024, 06:10 AM IST
ಮೆಟ್ರೋ | Kannada Prabha

ಸಾರಾಂಶ

ನಮ್ಮ ಮೆಟ್ರೋದಲ್ಲಿ ಶುಕ್ರವಾರ (ಡಿ.6) ಬರೋಬ್ಬರಿ 9.20 ಲಕ್ಷ ಜನ ಸಂಚಾರ ಮಾಡಿದ್ದು, ಇದು 1 ದಿನದ ಪ್ರಯಾಣಿಕರ ಸಂಖ್ಯೆಯಲ್ಲಿ ನೂತನ ದಾಖಲೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

 ಬೆಂಗಳೂರು :  ನಮ್ಮ ಮೆಟ್ರೋದಲ್ಲಿ ಶುಕ್ರವಾರ (ಡಿ.6) ಬರೋಬ್ಬರಿ 9.20 ಲಕ್ಷ ಜನ ಸಂಚಾರ ಮಾಡಿದ್ದು, ಇದು 1 ದಿನದ ಪ್ರಯಾಣಿಕರ ಸಂಖ್ಯೆಯಲ್ಲಿ ನೂತನ ದಾಖಲೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

ಈ ಹಿಂದೆ ಆಗಷ್ಟ್‌ 14ರಂದು 9.17 ಲಕ್ಷ ಜನ ಸಂಚರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅಂದು ಸ್ವಾತಂತ್ರ್ಯ ದಿನಾಚರಣೆ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಹಾಗೂ ಸಾಲು ಸಾಲು ರಜೆಯಿದ್ದ ಕಾರಣ ಊರಿಗೆ ತೆರಳುವವರು ಹೆಚ್ಚಿನ ಜನ ಸಂಚಾರ ಮಾಡಿದ್ದರು. ಆದರೆ, ಶುಕ್ರವಾರ ಅಂಬೇಡ್ಕರ್‌ ಪರಿನಿರ್ವಾಣ ದಿನಾಚರಣೆ ಬಿಟ್ಟು ಹೆಚ್ಚಿನ ಕಾರ್ಯಕ್ರಮ ಇಲ್ಲದಿದ್ದರೂ ಹೆಚ್ಚಿನ ಪ್ರಯಾಣಿಕರು ಮೆಟ್ರೋವನ್ನು ಬಳಸಿದ್ದಾರೆ.

ಶುಕ್ರವಾರ ನೇರಳೆ ಮಾರ್ಗದಲ್ಲಿ 4.39,616 ಹಾಗೂ ಹಸಿರು ಮಾರ್ಗದಲ್ಲಿ 3,12,248 ಸೇರಿ 9,20,562 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇಂಟರ್‌ಚೇಂಜ್‌ ಕೆಂಪೇಗೌಡ ನಿಲ್ದಾಣದಲ್ಲಿ 1,67,617 ಪ್ರಯಾಣಿಕರು ಸಂಚಾರ ಮಾಡಿದ್ದಾರೆ. 1081 ಜನ ಪೇಪರ್ ಟಿಕೇಟ್‌ ಬಳಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಆದಾಗ್ಯೂ, ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ಮಾರ್ಗ ವಿಸ್ತರಣೆಯಿಂದಾಗಿ ಇನ್ನೂ ಹೆಚ್ಚಿನ ಪ್ರಯಾಣಿಕರು ಮೆಟ್ರೋವನ್ನು ಬಳಸುವ ನಿರೀಕ್ಷೆಯಿತ್ತು. ಹಸಿರು ಹಾಗೂ ನೇರಳೆ ಮಾರ್ಗಗಳೆರಡೂ ಪೂರ್ಣಗೊಂಡಿದ್ದರೂ ಇನ್ನೂವರೆಗೆ ಬಿಎಂಆರ್‌ಸಿಎಲ್‌ ನಿರೀಕ್ಷಿತ ಗುರಿಯಷ್ಟು ಪ್ರಯಾಣಿಕರು ಮೆಟ್ರೋವನ್ನು ಬಳಸುತ್ತಿಲ್ಲ. ಇದಕ್ಕೆ ಕೊನೆ ಮೈಲಿ ಸಂಪರ್ಕ ಸಮಸ್ಯೆ ಸೇರಿ ಇತರೆ ಕಾರಣಗಳಿವೆ ಎಂದು ಮೆಟ್ರೋ ಸಾರಿಗೆ ತಜ್ಞರು ಹೇಳಿದ್ದಾರೆ.

PREV

Recommended Stories

ಇಂದ್ರಿಯಗಳ ನಿಗ್ರಹಿಸುವುದೇ ನೈಜ ಜ್ಞಾನ: ವಿಧುಶೇಖರಭಾರತೀ ಸ್ವಾಮೀಜಿ
ಜಾಗತಿಕ ಸವಾಲುಗಳ ನಡುವೆ ಅಭಿವೃದ್ಧಿ ಬಜೆಟ್‌ ನಿರೀಕ್ಷೆ