ಕನ್ನಡಪ್ರಭ ವಾರ್ತೆ ಮೈಸೂರು
ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆಯಲ್ಲಿ ಇದ್ದಾಗ ಅನುಭವಿಸಿದ ರಸನಿಮಿಷಗಳು, ಹಾಸ್ಯ ಪ್ರಸಂಗಗಳು, ಪೇಚಿನ ಸನ್ನಿವೇಶಗಳನ್ನು ಅವರಿಲ್ಲಿ ದಾಖಲಿಸಿದ್ದಾರೆ. ಬಾಲ್ಯದ ಕೆಲವು ವಿಶೇಷ ನೆನಪುಗಳು ಇವೆ.
ಉತ್ತರ ಕರ್ನಾಟಕದಲ್ಲಿ ಖಾನಾವಳಿಗಳೇ ಹೆಚ್ಚು. ಸ್ವಲ್ಪ ಖಾರ ಹೆಚ್ಚು. ದಕ್ಷಿಣ ಕನ್ನಡಕ್ಕೆ ಸೇರಿದ ತಾಮ್ಹನ್ಕರ್‌ಗೆ ಅದು ಹೊಂದಾಣಿಕೆ ಆಗುತ್ತಿರಲಿಲ್ಲ. ಮೊದಲ ದಿನದ ಖಾರ ಅನುಭವದಿಂದ ಹೋಟೆಲ್‌ನವರ ಬಳಿ ಮನವಿ ಮಾಡಿಕೊಂಡು ಹೀಗಾಗಿ ಎರಡು ಕಪ್ ಅನ್ನ, ಎರಡು ಕಪ್ ಮೊಸರು, ಸ್ವಲ್ಪ ಉಪ್ಪು ಹಾಗೂ ಉಪ್ಪಿನಕಾಯಿ ಮಾತ್ರ ತೆಗೆದುಕೊಳ್ಳುತ್ತಿದ್ದರು. ಮುಂದೆ ಇದೇ ಬ್ಯಾಂಕ್ ಸ್ಪೆಷಲ್ ಊಟ ಎಂದು ಆ ಹೋಟೆಲ್‌ನಲ್ಲಿ ಫೇಮಸ್ ಆಯ್ತು. ಅದೇ ಶೀರ್ಷಿಕೆಯನ್ನು ಈ ಹಾಸ್ಯ ಸಂಕಲನಕ್ಕೆ ಇಟ್ಟಿದ್ದಾರೆ.ಇಲ್ಲಿ ಒಟ್ಟು 72 ಪ್ರಸಂಗಗಳಿವೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಓದಿದಾಗ ಮುಖದಲ್ಲಿ ನಗೆ ಮೂಡಿಸುತ್ತವೆ.
ಅನಂತ ಎಮ್. ತಾಮ್ಹನ್ಕರ್ ‘ಮುಕ್ತಕ ಮಂಜರಿ’ ಎಂಬ ಮುಕ್ತಕಗಳ ಸಂಕಲನವನ್ನು ಸಹ ಹೊರತಂದಿದ್ದಾರೆ. ಇದರಲ್ಲಿ 660ಕ್ಕೂ ಹೆಚ್ಚು ಮುಕ್ತಕಗಳು ಅರ್ಥಸಹಿತ ಇವೆ.
ಇದನ್ನು ಸಂಸ್ಕೃತಿ ಬುಕ್ ಏಜನ್ಸೀಸ್ ಪ್ರಕಟಿಸಿದೆ. ಕೆ.ಟಿ.ಶ್ರೀಮತಿ ಮುನ್ನುಡಿ, ಮಹೇಶಕುಮಾರ ಹನಕೆರೆ ಬೆನ್ನುಡಿ, ಶೋಭಾ ಭಟ್ಟ, ಪಿ.ಸಿ. ದಾಕ್ಷಾಯಿಣಿ, ಕೃಷ್ಣ ದತ್ತಾತ್ರೇಯ ಪದಕಿ, ಡಿ. ಹೃಷಿಕೇಶ ಹೆಬ್ಬಾರ್ ಆಶಯ ನುಡಿ ಬರೆದಿದ್ದಾರೆ. ಆಸಕ್ತರು ಅನಂತ ಎಮ್. ತಾಮನ್ಕರ್, ಮೊ. 94488 99321, ಸಂಸ್ಕೃತಿ ಬುಕ್ ಏಜೆನ್ಸೀಸ್, ಮೊ. 99459 66979