ಪ್ರೀಪೇಯ್ಡ್ ಗ್ರಾಹಕರಿಗೆ ಯೂಟ್ಯೂಬ್ ಪ್ರೀಮಿಯಂ: ಏರ್‌ಟೆಲ್ ಜೊತೆ ಮಹತ್ವದ ಒಪ್ಪಂದ

KannadaprabhaNewsNetwork |  
Published : Oct 24, 2026, 01:15 AM IST
ಏರ್‌ಟೆಲ್‌ | Kannada Prabha

ಸಾರಾಂಶ

ಏರ್‌ಟೆಲ್‌ ಇದೀಗ ಯೂಟ್ಯೂಬ್‌ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು:

ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಅತ್ಯುತ್ತಮ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ದೂರಸಂಪರ್ಕ ಸೇವಾ ಸಂಸ್ಥೆಯಾದ ಏರ್‌ಟೆಲ್, ಜನಪ್ರಿಯ ವಿಡಿಯೋ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಜತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ. ಈ ಒಪ್ಪಂದದ ಮುಖಾಂತರ ಪ್ರೀಪೇಯ್ಡ್ ಬಳಕೆದಾರರಿಗೆ ಯೂಟ್ಯೂಬ್ ಪ್ರೀಮಿಯಂ ಸೇವೆಯನ್ನು ಸಂಸ್ಥೆ ಲಭ್ಯವಾಗಿಸಿದೆ.

ಇಂದಿನ ಗ್ರಾಹಕರಿಗೆ ಮೊಬೈಲ್ ಡೇಟಾ ಕೇವಲ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿಲ್ಲ, ಸಿನಿಮಾ-ಧಾರಾವಾಹಿಗಳ ವೀಕ್ಷಣೆ, ಕಂಟೆಂಟ್ ಕ್ರಿಯೇಟರ್‌ಗಳ ಫಾಲೋ, ಸಂಗೀತ ಆಲಿಸುವಿಕೆ ಸೇರಿದಂತೆ ಡಿಜಿಟಲ್ ಮನರಂಜನೆಗೆ ಮುಖ್ಯ ಮಾಧ್ಯಮವಾಗಿದೆ. ಗ್ರಾಹಕರ ಈ ಬದಲಾದ ಅಗತ್ಯಕ್ಕೆ ಪೂರಕವಾಗಿ ಏರ್‌ಟೆಲ್ ಈ ಹೊಸ ಕೊಡುಗೆ ತಂದಿದೆ. ಇದರ ಅಡಿಯಲ್ಲಿ ಗ್ರಾಹಕರು ಶಾರ್ಟ್ಸ್ ಸೇರಿದಂತೆ ಯಾವುದೇ ಜಾಹೀರಾತುಗಳ ತಡೆ ಇಲ್ಲದೆ ಯೂಟ್ಯೂಬ್ ವೀಕ್ಷಿಸಬಹುದು. ಜತೆಗೆ ಹಿನ್ನೆಲೆ ಪ್ಲೇಬ್ಯಾಕ್, ಆಫ್‌ಲೈನ್ ಡೌನ್‌ಲೋಡ್ ಹಾಗೂ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಸೌಲಭ್ಯಗಳು ದೊರೆಯಲಿವೆ.

ಈಗಾಗಲೇ ಚಾಲ್ತಿಯಲ್ಲಿರುವ ಏರ್‌ಟೆಲ್‌ನ ₹200 ಒಟಿಟಿ ಟಾಪ್-ಅಪ್ (30 ಜಿಬಿ ಹೆಚ್ಚುವರಿ ಡೇಟಾ ಜತೆಗೆ) ಪ್ಯಾಕ್‌ಗೆ ಯೂಟ್ಯೂಬ್ ಪ್ರೀಮಿಯಂ ಸೇರ್ಪಡೆಯಾಗಿದೆ. ಈ ಪ್ಯಾಕ್‌ನಲ್ಲಿ ಪ್ರೈಮ್ ವಿಡಿಯೋ, ಜಿಯೋಹಾಟ್‌ಸ್ಟಾರ್, ಜೀ5 ಪ್ರೀಮಿಯಂ, ಸೋನಿಲೀವ್ ಸೇರಿದಂತೆ ಒಟ್ಟು 18ಕ್ಕೂ ಅಧಿಕ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗಳು ದೊರೆಯುತ್ತಿವೆ.

ಯಾವುದೇ ಸಕ್ರಿಯ ಪ್ರೀಪೇಯ್ಡ್ ಯೋಜನೆ ಹೊಂದಿರುವ ಏರ್‌ಟೆಲ್ ಬಳಕೆದಾರರು ಈ ಟಾಪ್-ಅಪ್ ಪಡೆಯಬಹುದಾಗಿದೆ. ರೀಚಾರ್ಜ್ ಮಾಡಿದ ಬಳಿಕ ಏರ್‌ಟೆಲ್ ಆ್ಯಪ್‌ನ ರಿವಾರ್ಡ್ಸ್ ಆ್ಯಂಡ್ ಒಟಿಟಿಸ್ ವಿಭಾಗದ ಮೂಲಕ ಯೂಟ್ಯೂಬ್ ಪ್ರೀಮಿಯಂ ಸೌಲಭ್ಯವನ್ನು ಸಕ್ರಿಯಗೊಳಿಸಿಕೊಳ್ಳಬಹುದು. 28 ದಿನಗಳ ಮಾನ್ಯತೆ ಹೊಂದಿರುವ ಈ ಯೋಜನೆಯ ಅವಧಿ ಮುಗಿದ ನಂತರ, ಗ್ರಾಹಕರು ಪುನಃ ಟಾಪ್-ಅಪ್ ಖರೀದಿಸಿ ಸೇವೆಯನ್ನು ಮುಂದುವರಿಸಬಹುದಾಗಿದೆ.

PREV

Recommended Stories

ರೈತರ ಆರ್ಥಿಕತೆಗೆ ಅಗ್ರಿವೋಲ್ಟಾಯಿಕ್ಸ್‌ ಹೊಸ ಮಾರ್ಗ
ವನವೈಭವ-ವಿಶಿಷ್ಟ, ಜೀವವೈವಿಧ್ಯತೆಯ ಅರಣ್ಯಕ್ಕೆ ಹೆಸರುವಾಸಿ ಕರ್ನಾಟಕ