ಕನ್ನಡಪ್ರಭವಾರ್ತೆ ಬೆಂಗಳೂರು
ಪ್ರಮುಖವಾಗಿ, ಪ್ರತಿಯೊಬ್ಬ ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಪೇ-ಇನ್-3 ಸೌಲಭ್ಯವನ್ನು ಪರಿಚಯಿಸಲಾಗಿದೆ. ₹1,500ಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಖರೀದಿಯನ್ನಾದರೂ ಮೂರು ಕಂತುಗಳಲ್ಲಿ ಬಡ್ಡಿ ಮತ್ತು ಪ್ರೊಸೆಸಿಂಗ್ ಶುಲ್ಕವಿಲ್ಲದೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆಗಸ್ಟ್ 7 ರಿಂದ 9ರವರೆಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಳ ಮೇಲೆ ಶೇ. 6 ರಷ್ಟು ರಿಯಾಯಿತಿ ಸಿಗಲಿದೆ. ಹೊಸ ಗ್ರಾಹಕರಿಗೆ ಹೆಚ್ಚುವರಿ ಶೇ. 10ರವರೆಗೆ ಉಳಿತಾಯದ ಅವಕಾಶವಿದೆ.ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಇದ್ದು, ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಶೇ. 5 ರಿಯಾಯಿತಿ ಲಭ್ಯ. ಒಟ್ಟಾರೆಯಾಗಿ ಶೇ. 60ರವರೆಗೆ ಉಳಿತಾಯ ಮಾಡಬಹುದು. ಬಸ್ ಟಿಕೆಟ್ ಬುಕಿಂಗ್‌ಗೆ ಶೇ. 17ರವರೆಗೆ ರಿಯಾಯಿತಿ ಹಾಗೂ ₹100 ಕ್ಯಾಶ್‌ಬ್ಯಾಕ್ ದೊರೆಯಲಿದೆ.
ಅಮೆಜಾನ್ ಪೇ ಯುಪಿಐ ಮೂಲಕ ಕನಿಷ್ಠ ₹1 ಪಾವತಿಸುವ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಬಳಕೆದಾರರು ಮುಂದಿನ ಆರ್ಡರ್‌ನಲ್ಲಿ ₹50 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಮೊಬೈಲ್ ರೀಚಾರ್ಜ್ ಮಾಡುವವರಿಗೂ ₹50 ರವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ.