ಬದುಕು ಯಾರನ್ನು ಯಾವ ಹಾದಿಯಲ್ಲಿ ಕರೆದೊಯ್ಯುವುದೋ ಯಾರಿಗೂ ತಿಳಿಯುವುದಿಲ್ಲ. ಆದರೆ ತಾವು ಹೋಗುವ ಎಲ್ಲಾ ದಾರಿಗಳನ್ನೂ ತಮ್ಮ ಕೌಶಲದಿಂದ, ಸ್ವ ಸಾಮರ್ಥ್ಯದಿಂದ ಸುಂದರವಾಗಿಸುವ ಕಲೆ ಕೆಲವರಿಗಷ್ಟೇ ತಿಳಿದಿರುತ್ತದೆ. ಅಂಥಾ ಒಬ್ಬರು ಪ್ರತಿಭಾವಂತೆ ಕವಿತಾ ರಾಮಕೃಷ್ಣ.ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಕವಿತಾ ರಾಮಕೃಷ್ಣ ಪ್ರಸ್ತುತ ಒಮಾನ್ ದೇಶದ ಮಸ್ಕಟ್‌ನಲ್ಲಿದ್ದಾರೆ. ನಮ್ಮ ದೇಶದಿಂದ ದೂರ ಇದ್ದರೂ ಅವರು ನಮ್ಮತನ ಬಿಟ್ಟಿಲ್ಲ. ನಮ್ಮ ಸಂಸ್ಕೃತಿಯನ್ನು ಪಸರಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಿದ್ದಾರೆ.ಯೋಗ ಸಾಧನೆಮೂಲತಃ ಬರಹಗಾರ್ತಿಯಾಗಿರುವ ಅವರು ಅಪ್ರತಿಮ ಯೋಗಪಟು. ಅವರು ಎಂಥಾ ಅದ್ಭುತ ಯೋಗ ಪಟು ಎಂದರೆ ಒಂದೇ ಸಲ ನಿರಂತರವಾಗಿ 648 ಸೂರ್ಯ ನಮಸ್ಕಾರ ಮಾಡಿದ ಹೆಗ್ಗಳಿಕೆ ಅವರಿಗಿದೆ. ಅವರು ತಾವಷ್ಟೇ ಯೋಗದಿಂದ ಉಪಯೋಗ ಪಡೆದುಕೊಳ್ಳಲಿಲ್ಲ. ಜೊತೆಗೆ ವಿದೇಶದಲ್ಲಿ ಯೋಗ ಮಹತ್ವ ತಿಳಿಸುವ ಮನಸ್ಸು ಮಾಡಿದರು. ಯೋಗದ ಉಪಯೋಗವನ್ನು ಅವರಿಗೂ ಕಲಿಸಿಕೊಟ್ಟರು.ಒಮಾನ್‌ನ ರಾಜವಂಶಸ್ಥರೂ ಸೇರಿದಂತೆ ಒಮಾನ್‌ನ ಹಲವಾರು ಪ್ರತಿಷ್ಠಿತ ವ್ಯಕ್ತಿಗಳಿಗೆ ಅವರು ಯೋಗ ಕಲಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಜಗತ್ತಿನಲ್ಲಿ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಕವಿತಾ ಅವರು ಸೂರ್ಯ ನಮಸ್ಕಾರ ಮತ್ತು ವಿವಿಧ ಯೋಗಾಸನಗಳ ಮೂಲಕ ಶ್ವಾಸಕೋಶದ ಆರೋಗ್ಯ ವೃದ್ಧಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟು ಅವರೆಲ್ಲರ ಗೌರವಾದರಕ್ಕೆ ಪಾತ್ರರಾಗಿದ್ದರು.ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಮಾನ್‌ಗೆ ಭೇಟಿ ಕೊಟ್ಟಾಗ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕ ಏಕೈಕ ಮಹಿಳೆ ಕವಿತಾ ರಾಮಕೃಷ್ಣ. ಮೋದಿಯವರು ಇವರ ಯೋಗ ಸಾಧನೆ ಬಗ್ಗೆ ತಿಳಿದು ಯೋಗದ ಕುರಿತು ಪುಸ್ತಕ ಬರೆಯಿರಿ ಎಂದು ತಿಳಿಸಿದ್ದರು. ಹಾಗೆ ಮೋದಿಯಿಂದ ಸ್ಫೂರ್ತಿ ಪಡೆದು ಯೋಗದ ಕುರಿತು ಅವರು ರಚಿಸಿದ ಪುಸ್ತಕದ ಹೆಸರು ‘ತಮೋಘ್ನ’. ಇಂಗ್ಲಿಷಿನಲ್ಲಿ ಯೋಗದ ಇತಿಹಾಸ, ಮಾಹಿತಿ, ಸೂರ್ಯ ನಮಸ್ಕಾರದ ವಿವರ ಸೇರಿದಂತೆ ಎಲ್ಲಾ ವಿವರಗಳಿರುವ ಈ ಕೃತಿ ಅಪಾರ ಮನ್ನಣೆಗೆ ಪಾತ್ರವಾಗಿದೆ. ಕವಿತಾ ರಾಮಕೃಷ್ಣ ಅವರು ಯೋಗದಲ್ಲಿ ಸಾಧಿಸಿರುವ ಪರಿಣತಿ ಮತ್ತು ಯೋಗದಿಂದ ಅವರು ಸಮಾಜಕ್ಕೆ ನೀಡಿರುವ ನೆರವಿಗಾಗಿ ಅಮೆರಿಕಾದ ಫ್ಲೋರಿಡಾದ ಯೋಗ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ಇವರು ಸಮಾಜದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದರೆ ತಮ್ಮ ‘ತಮೋಘ್ನ’ ಪುಸ್ತಕ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಅವರು ಒಮಾನ್ ಕ್ಯಾನ್ಸರ್ ಅಸೋಸಿಯೇಷನ್‌ಗೆ ನೀಡಿದ್ದಾರೆ.ತಂಜಾವೂರು ಚಿತ್ರಕಲೆ ಪರಿಣತಿ