ಆಗಸ್ಟ್ 7 ರಿಂದ 12ರವಗೆ ನಡೆಯಲಿರುವ ಅಮೆಜಾನ್‌ನ ಗ್ರೇಟ್‌ ಫ್ರೀಡಂ ಸೇಲ್‌ ಭಾಗವಾಗಿ ಅಮೆಜಾನ್ ಪೇ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ಪ್ರಕಟಿಸಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಅಮೆಜಾನ್‌ನ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವಗೆ ನಡೆಯಲಿದ್ದು, ಅದರ ಭಾಗವಾಗಿ ಅಮೆಜಾನ್ ಪೇ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ಪ್ರಕಟಿಸಿದೆ. ಪ್ರವಾಸ, ಶಾಪಿಂಗ್ ಮತ್ತು ದೈನಂದಿನ ಡಿಜಿಟಲ್ ಪಾವತಿಗಳ ಮೇಲೆ ಗ್ರಾಹಕರು ಭಾರಿ ಆಫರ್‌ಗಳನ್ನು ಪಡೆಯಬಹುದಾಗಿದೆ.

ಪ್ರಮುಖವಾಗಿ, ಪ್ರತಿಯೊಬ್ಬ ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಪೇ-ಇನ್-3 ಸೌಲಭ್ಯವನ್ನು ಪರಿಚಯಿಸಲಾಗಿದೆ. ₹1,500ಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಖರೀದಿಯನ್ನಾದರೂ ಮೂರು ಕಂತುಗಳಲ್ಲಿ ಬಡ್ಡಿ ಮತ್ತು ಪ್ರೊಸೆಸಿಂಗ್ ಶುಲ್ಕವಿಲ್ಲದೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಆಗಸ್ಟ್ 7 ರಿಂದ 9ರವರೆಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನ ಬುಕಿಂಗ್‌ಗಳ ಮೇಲೆ ಶೇ. 6 ರಷ್ಟು ರಿಯಾಯಿತಿ ಸಿಗಲಿದೆ. ಹೊಸ ಗ್ರಾಹಕರಿಗೆ ಹೆಚ್ಚುವರಿ ಶೇ. 10ರವರೆಗೆ ಉಳಿತಾಯದ ಅವಕಾಶವಿದೆ.

ಹೋಟೆಲ್ ಬುಕಿಂಗ್‌ಗಳ ಮೇಲೆ ಶೇ. 40ರವರೆಗೆ ರಿಯಾಯಿತಿ ಇದ್ದು, ಪ್ರೈಮ್ ಸದಸ್ಯರಿಗೆ ಹೆಚ್ಚುವರಿ ಶೇ. 5 ರಿಯಾಯಿತಿ ಲಭ್ಯ. ಒಟ್ಟಾರೆಯಾಗಿ ಶೇ. 60ರವರೆಗೆ ಉಳಿತಾಯ ಮಾಡಬಹುದು. ಬಸ್ ಟಿಕೆಟ್ ಬುಕಿಂಗ್‌ಗೆ ಶೇ. 17ರವರೆಗೆ ರಿಯಾಯಿತಿ ಹಾಗೂ ₹100 ಕ್ಯಾಶ್‌ಬ್ಯಾಕ್ ದೊರೆಯಲಿದೆ.

ಈ ಮೊದಲು ಕೇವಲ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಮಾತ್ರ ಸೀಮಿತವಾಗಿದ್ದ ನೋ-ಕಾಸ್ಟ್ ಇಎಮ್‌ಐ ಆಯ್ಕೆಯನ್ನು, ಈಗ ಪೇ-ಇನ್-3 ಮೂಲಕ ಗ್ರೋಸರಿ, ಫ್ಯಾಷನ್, ಗೃಹಬಳಕೆಯ ವಸ್ತುಗಳು ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ವಿಸ್ತರಿಸಲಾಗಿದೆ. ನಿರ್ದಿಷ್ಟ ವಸ್ತುವಿಗೆ ಮಾತ್ರವಲ್ಲದೆ, ಇಡೀ ಕಾರ್ಟ್ ಮೌಲ್ಯಕ್ಕೆ ಈ ಸೌಲಭ್ಯ ಅನ್ವಯವಾಗಲಿದೆ. ಯಾವುದೇ ವಾರ್ಷಿಕ ಶುಲ್ಕವಿಲ್ಲದ ಈ ಕಾರ್ಡ್ ಬಳಕೆದಾರರಿಗೆ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಮಾಡುವ ಪ್ರತಿ ಖರೀದಿಯ ಮೇಲೆಯೂ ಶೇ. 5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಸಿಗಲಿದೆ.

ಅಮೆಜಾನ್ ಪೇ ಯುಪಿಐ ಮೂಲಕ ಕನಿಷ್ಠ ₹1 ಪಾವತಿಸುವ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಬಳಕೆದಾರರು ಮುಂದಿನ ಆರ್ಡರ್‌ನಲ್ಲಿ ₹50 ರವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಮೊಬೈಲ್ ರೀಚಾರ್ಜ್ ಮಾಡುವವರಿಗೂ ₹50 ರವರೆಗೆ ಕ್ಯಾಶ್‌ಬ್ಯಾಕ್ ಸೌಲಭ್ಯವಿದೆ.