ಏರ್‌ಟೆಲ್ ಕ್ಲೌಡ್ ಅಭಿವೃದ್ಧಿಗೆ ಐಬಿಎಂ ಜೊತೆಗೆ ಭಾರ್ತಿ ಏರ್‌ಟೆಲ್ ಸಹಭಾಗಿತ್ವ

KannadaprabhaNewsNetwork |  
Published : Oct 16, 2025, 02:00 AM IST
ಏರ್‌ಟೆಲ್ | Kannada Prabha

ಸಾರಾಂಶ

ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ಏರ್‌ಟೆಲ್ ಕ್ಲೌಡ್ ಅನ್ನು ಅಭಿವೃದ್ಧಿಪಡಿಸಲು ಐಬಿಎಂ ಜೊತೆ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದೆ.

 ಬೆಂಗಳೂರು :  ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ ತನ್ನ ಏರ್‌ಟೆಲ್ ಕ್ಲೌಡ್ ಅನ್ನು ಅಭಿವೃದ್ಧಿಪಡಿಸಲು ಐಬಿಎಂ ಜೊತೆ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದೆ.  

ಈ ಸಹಭಾಗಿತ್ವದ ಮೂಲಕ ಏರ್‌ಟೆಲ್ ಕ್ಲೌಡ್‌ನ ಟೆಲ್ಕೋ-ಗ್ರೇಡ್ ವಿಶ್ವಾಸಾರ್ಹತೆ, ಉನ್ನತ ಮಟ್ಟದಸುರಕ್ಷತೆ ಮತ್ತು ಡೇಟಾ ರೆಸಿಡೆನ್ಸಿ ಸಾಮರ್ಥ್ಯವನ್ನು ಐಬಿಎಂನ ಕ್ಲೌಡ್ ಉತ್ಪನ್ನಗಳಲ್ಲಿನ ಪರಿಣತಿ, ಸುಧಾರಿತ ಮೂಲಸೌಕರ್ಯ ಮತ್ತು ಎಐ ಇನ್‌ಫರೆನ್ಸಿಂಗ್‌ಗಾಗಿ ವಿನ್ಯಾಸಗೊಳಿಸಲಾದ ಸಾಫ್ಟ್‌ ವೇರ್ ತಂತ್ರಜ್ಞಾನಗಳೊಂದಿಗೆ ಸಂಯೋಜಿಸಲಾಗುತ್ತದೆ. ಏರ್‌ಟೆಲ್ ಮತ್ತು ಐಬಿಎಂ ಜೊತೆಯಾಗಿ ನಿಯಂತ್ರಿತ ಎಂಟರ್‌ಪ್ರೈಸ್ ಗಳಲ್ಲಿನ ಸಂಸ್ಥೆಗಳಿಗೆ ಆನ್-ಪ್ರಿಮೈಸ್, ಕ್ಲೌಡ್, ಮಲ್ಟಿಪಲ್ ಕ್ಲೌಡ್‌ ಮತ್ತು ಎಡ್ಜ್‌ ವಿಭಾಗಗಳಲ್ಲಿ ಇಂಟರ್‌ಆಪರೇಬಿಲಿಟಿಯನ್ನು ಒದಗಿಸುವ ಮೂಲಕ ಎಐ ವರ್ಕ್‌ಲೋಡ್‌ಗಳನ್ನು ಹೆಚ್ಚು ದಕ್ಷತೆಯಿಂದ ನಿರ್ವಹಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿವೆ. 

ಈ ಸಹಭಾಗಿತ್ವದ ಮೂಲಕ ಏರ್‌ಟೆಲ್ ಕ್ಲೌಡ್ ಗ್ರಾಹಕರು ಬ್ಯಾಂಕಿಂಗ್, ವೈದ್ಯಕೀಯ ಕ್ಷೇತ್ರ, ಸರ್ಕಾರ ಮತ್ತು ಇತರ ಕ್ಷೇತ್ರಗಳಿಗೆ ಅತ್ಯಗತ್ಯವಾದ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಐಬಿಎಂ ಪವರ್ 11ಅಟೋನಾಮಸ್, ಎಐ-ರೆಡಿ ಸರ್ವರ್‌ಗಳನ್ನು ಒಳಗೊಂಡಂತೆ ಐಬಿಎಂ ಪವರ್ ಸಿಸ್ಟಮ್ಸ್ ಪೋರ್ಟ್‌ಫೋಲಿಯೋವನ್ನು ಸರ್ವೀಸ್ ಆಗಿ ಬಳಸಿಕೊಳ್ಳಬಹುದು. ಪವರ್ 11 ಹೈಬ್ರಿಡ್ ಪ್ಲಾಟ್‌ಫಾರ್ಮ್, ಐಬಿಎಂ ಪವರ್ ಎಐಎಕ್ಸ್, ಐಬಿಎಂ ಐ, ಲಿನಕ್ಸ್ ಮತ್ತು ಸ್ಯಾಪ್ಕ್ಲೌಡ್ ಇ ಆರ್ ಪಿಸೇರಿದಂತೆ ಅತ್ಯಗತ್ಯ ಎಂಟರ್‌ಪ್ರೈಸ್ ವರ್ಕ್‌ಲೋಡ್‌ಗಳನ್ನು ಸಹ ಸಪೋರ್ಟ್ ಮಾಡುತ್ತದೆ. ಇದರ ಜೊತೆಗೆ, ಈ ಸಹಯೋಗವು ಐಬಿಎಂ ಪವರ್ ವರ್ಚುವಲ್ ಸರ್ವರ್‌ನಲ್ಲಿ ಸ್ಯಾಪ್ ಕ್ಲೌಡ್ ಇ ಆರ್ ಪಿಗೆ ಎಂಟರ್‌ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ರೂಪಾಂತರಕ್ಕೆ ಸ್ಯಾಪ್ ಗ್ರಾಹಕರಿಗೆ ಸಹಾಯ ಮಾಡುತ್ತದೆ.

ಈ ಕುರಿತು ಮಾತನಾಡಿದ ಭಾರ್ತಿ ಏರ್‌ಟೆಲ್‌ನ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಗೋಪಾಲ್ ವಿಟ್ಟಲ್ ಅವರು, ‘ಏರ್‌ಟೆಲ್ ಕ್ಲೌಡ್ ಅನ್ನುಅತ್ಯುನ್ನತ ಭದ್ರತೆ ಮತ್ತು ಅನುಕೂಲತೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದು, ಅತ್ಯುತ್ಕೃಷ್ಟ ಕ್ಲೌಡ್ ಪ್ಲಾಟ್‌ಫಾರ್ಮ್ ಆಗಿ ಎಂಟರ್‌ಪ್ರೈಸ್ ಗಳಲ್ಲಿ ಹೊಸ ಮಾನದಂಡಗಳನ್ನು ಹಾಕಿಕೊಟ್ಟಿದೆ. ಇಂದು ಐಬಿಎಂ ಜೊತೆಗೆ ಸಹಭಾಗಿತ್ವ ಮಾಡಿಕೊಳ್ಳುವ ಮೂಲಕ ಐಬಿಎಂ ಪವರ್ ಸಿಸ್ಟಮ್ಸ್‌ನಿಂದ ಸ್ಥಳಾಂತರಗೊಳ್ಳುವ ಅಗತ್ಯವಿರುವ ಮತ್ತು ಎಐ ಸಿದ್ಧತೆ ಹೊಂದಲು ಅನುವಾಗಿರುವ ಹಲವಾರು ಎಂಟರ್‌ಪ್ರೈಸ್ ಗಳ ವಿವಿಧ ಅಗತ್ಯಗಳನ್ನು ಪೂರೈಸಲು ನಮ್ಮ ಕ್ಲೌಡ್ ಪ್ಲಾಟ್‌ಫಾರ್ಮ್‌ಗೆ ಅತ್ಯುನ್ನತ ಸಾಮರ್ಥ್ಯಗಳನ್ನು ಸೇರಿಸುತ್ತಿದ್ದೇವೆ. ನಾವು ಜೊತೆಯಾಗಿ ಶೀಘ್ರದಲ್ಲೇ ಮುಂಬೈ ಮತ್ತು ಚೆನ್ನೈನಲ್ಲಿ ಎರಡು ಹೊಸ ಮಲ್ಟಿಜೋನ್ ರೀಜನ್‌ಗಳನ್ನು (ಎಂಝಡ್ಆರ್) ಸ್ಥಾಪಿಸುತ್ತೇವೆ” ಎಂದು ಹೇಳಿದರು.

ಐಬಿಎಂನ ಎಸ್‌ವಿಪಿ ಮತ್ತು ಚೀಫ್ ಕಮರ್ಷಿಯಲ್ ಆಫೀಸರ್ ರಾಬ್ ಥಾಮಸ್ ಅವರು ಮಾತನಾಡಿ , ‘ಇಂದಿನ ಎಂಟರ್‌ಪ್ರೈಸ್ ಗಳು ವಿಕಾಸ ಹೊಂದುತ್ತಿರುವ ನಿಯಂತ್ರಿತ ತಂತ್ರಜ್ಞಾನಗಳ ಜೊತೆಗಿನ ಆಧುನೀಕರಣ ಮತ್ತು ಎಐ ಅಗತ್ಯಗಳ ಜೊತೆ ಸಮತೋಲನದಿಂದ ಮುನ್ನಡೆಯುವ ಅವಶ್ಯಕತೆ ಇದೆ. ಭಾರ್ತಿ ಏರ್‌ಟೆಲ್‌ ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕಭಾರತದಾದ್ಯಂತ ಇರುವ ಗ್ರಾಹಕರು ತಮ್ಮ ಎಂಟರ್‌ಪ್ರೈಸ್ ಆದ್ಯತೆಗಳನ್ನು ಪೂರೈಸುವ ವರ್ಕ್‌ಲೋಡ್‌ಗಳಿಗಾಗಿ ವಿನ್ಯಾಸಗೊಳಿಸಲಾದ ಐಬಿಎಂನ ಕ್ಲೌಡ್ ಕೊಡುಗೆಗಳನ್ನು ಬಳಸಿಕೊಳ್ಳಬಹುದು. ಒಟ್ಟಾಗಿ, ನಾವು ಗ್ರಾಹಕರಿಗೆ ಎಐಯುಗದಲ್ಲಿ ಬದಲಾವಣೆ ಹೊಂದಲು ಎಂಟರ್‌ಪ್ರೈಸ್ ಗಳಿಗೆ ಸಹಾಯ ಮಾಡುತ್ತೇವೆ’ ಎಂದು ಹೇಳಿದರು.

ಏರ್‌ಟೆಲ್ ಮಲ್ಟಿ ಜೋನ್ ರೀಜನ್‌ಗಳು ಭಾರತೀಯ ಉದ್ದಿಮೆಗಳಿಗೆ ತಮ್ಮ ಧೃಡತೆಯನ್ನು ಬಲಪಡಿಸಲು ಅಗತ್ಯವಿರುವ ಡೇಟಾ ರೆಸಿಡೆನ್ಸಿ ಅಗತ್ಯಗಳನ್ನು ಪೂರೈಸಲು ಮತ್ತು ಅತ್ಯಗತ್ಯ ವರ್ಕ್‌ಲೋಡ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಯಾವಾಗಲೂ ಕಾರ್ಯನಿರ್ವಹಿಸುವಂತೆ ಮಾಡಲು ಸಹಾಯ ಮಾಡುತ್ತವೆ. ಏರ್‌ಟೆಲ್ ಮತ್ತು ಐಬಿಎಂ ಪಾಲುದಾರಿಕೆಯು ಭಾರತೀಯ ಉದ್ದಿಮೆಗಳಿಗೆ ವೇಗವಾಗಿ ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.ಐಬಿಎಂನ ಭವಿಷ್ಯದ ಯೋಜನೆ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಹೇಳಿಕೆಗಳು ಸೂಚನೆಯಿಲ್ಲದೆ ಬದಲಾವಣೆಗೆ ಒಳಗಾಗಬಹುದು ಅಥವಾ ಹಿಂಪಡೆಯಲ್ಪಡಬಹುದು ಹಾಗೂ ಕೇವಲ ಗುರಿಗಳು ಮತ್ತು ಉದ್ದೇಶಗಳನ್ನು ಮಾತ್ರ ಪ್ರತಿನಿಧಿಸುತ್ತವೆ.

PREV
Read more Articles on

Recommended Stories

ನಾನು ಮೂಲಭೂತವಾದಿ ವಿರೋಧಿ : ಪ್ರಿಯಾಂಕ್
ಒಂಟಿ ತೋಳಗಳ ಬೆನ್ನು ಹತ್ತಿದವರು: ವಿಜ್ಞಾನ ಲೋಕದ ವಿಸ್ಮಯಕಾರಿ ಸಂಗತಿಗಳ ಹೂರಣ