ಮೊಬೈಲ್ ಬಳಕೆಯಿಂದ ಮಕ್ಕಳ ಕಲಿಕಾಸಕ್ತಿ ಕ್ಷೀಣ

KannadaprabhaNewsNetwork | Published : Nov 27, 2023 1:15 AM

ಸಾರಾಂಶ

ಕಲಿಕೆ ಮಾನವನ ಮೂಲ ಅನ್ವೇಷಣೆಗಳಲ್ಲಿ ಒಂದು. ಆದರೆ ಸಮೂಹ ಮಾಧ್ಯಮವಾದ ಮೊಬೈಲ್ ನ ದುರುಪಯೋಗ ಹಾಗೂ ಮಕ್ಕಳಿಗೆ ಕೊರತೆ ಇಲ್ಲದಂತಹ ಸೌಲಭ್ಯಗಳ ಪೂರೈಕೆಯಿಂದಾಗಿ ಇಂದು ಬಹುತೇಕ ಮಕ್ಕಳಿಗೆ ಕಲಿಯುವ ಆಸಕ್ತಿ ಕಡಿಮೆಯಾಗಿದೆ ಎಂದು ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪೂರ್ವಿಕ ಅಭಿಪ್ರಾಯಪಟ್ಟರು.

ವಿದ್ಯಾನಗರದ ಸರಕಾರಿ ಪ್ರೌಢಶಾಲೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಹಾಸನ

ಕಲಿಕೆ ಮಾನವನ ಮೂಲ ಅನ್ವೇಷಣೆಗಳಲ್ಲಿ ಒಂದು. ಆದರೆ ಸಮೂಹ ಮಾಧ್ಯಮವಾದ ಮೊಬೈಲ್ ನ ದುರುಪಯೋಗ ಹಾಗೂ ಮಕ್ಕಳಿಗೆ ಕೊರತೆ ಇಲ್ಲದಂತಹ ಸೌಲಭ್ಯಗಳ ಪೂರೈಕೆಯಿಂದಾಗಿ ಇಂದು ಬಹುತೇಕ ಮಕ್ಕಳಿಗೆ ಕಲಿಯುವ ಆಸಕ್ತಿ ಕಡಿಮೆಯಾಗಿದೆ ಎಂದು ಹತ್ತನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪೂರ್ವಿಕ ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರೌಢಶಾಲೆ ವಿದ್ಯಾನಗರ ಇಲ್ಲಿಯ ’ಪೂರ್ಣಚಂದ್ರ ತೇಜಸ್ವಿ’ ಕನ್ನಡ ಸಂಘವು ಸಂಭ್ರಮ ಶನಿವಾರವನ್ನು ಕನ್ನಡ ಪಠ್ಯ ವಿಷಯ ಆಧಾರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಹಾಗೂ ಕಲಿಕೆಯು ಮನಸ್ಸಿನಲ್ಲಿ ದೃಢವಾಗಿ ನಿಲ್ಲಲು ಸಹಕಾರಿಯಾಗುವಂತೆ ನಮ್ಮ ಶಿಕ್ಷಕರು ಇಂತಹ ಹಲವು ಕಾರ್ಯಕ್ರಮಗಳನ್ನು ನಮಗಾಗಿ ಆಯೋಜಿಸುತ್ತಿದ್ದಾರೆ. ನಾವು ಇದೆಲ್ಲವುದರ ಸದುಪಯೋಗಪಡಿಸಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನು ಕುವೆಂಪು ತಂಡ, ಡಿವಿಜಿ ತಂಡ, ಮಾಸ್ತಿ, ಬೇಂದ್ರೆ, ಚಂದ್ರಶೇಖರ್ ಕಂಬಾರ್ ತಂಡವಾಗಿ ೫ ಗುಂಪುಗಳನ್ನಾಗಿ ಮಾಡಲಾಗಿತ್ತು.

ಇಡೀ ರಸಪ್ರಶ್ನೆ ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿಗಳಾದ ಗೌತಮ್ ಮತ್ತು ನವ್ಯ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅತ್ಯುತ್ತಮವಾಗಿ ನಿರ್ವಹಿಸಿದರು. ಶಿಕ್ಷಕಿ ಗಾಯಿತ್ರಿಯವರು ಅಂಕ ನಿರ್ವಹಣೆ ಮಾಡಿದರು. ಕನ್ನಡ ಭಾಷಾ ಶಿಕ್ಷಕಿ ಬಿ.ಎಸ್. ವನಜಾಕ್ಷಿ ಕಾರ್ಯಕ್ರಮವನ್ನು ಸಂಯೋಜಿಸಿ ಮಾರ್ಗದರ್ಶನ ನೀಡಿದರು.

ಶಾಲೆಗೆ ಅತಿಥಿಯಾಗಿ ಆಗಮಿಸಿದ್ದ ಲೇಖಕಿ ಸುಮಾ ವೀಣಾರವರು ಸುಮಾರು ೩೦೦೦ ರೂಪಾಯಿಗಳ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ ಜಿ ಶಶಿಧರ್ ಮುಖ್ಯಶಿಕ್ಷಕರು ವಹಿಸಿದ್ದರು ಶಿಕ್ಷಕರಾದ ಚಕ್ರಪಾಣಿ, ಕಮಲಾಕ್ಷ ದೇವಿರಮ್ಮ, ರಂಜಿನಿ, ಗಾಯತ್ರಿ, ವನಜಾಕ್ಷಿ ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರೆ ಪ್ರಾರ್ಥನೆಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿ ಅನುರಾಧ ಮತ್ತು ಸ್ವಾತಿ ಭಾಗವಹಿಸಿದ್ದರು. ಕುಮಾರಿ ಸಂಧ್ಯಾ ಸ್ವಾಗತಿಸಿದರೆ ಶಾಂತಕುಮಾರ ಎಲ್ಲರಿಗೂ ವಂದಿಸಿದರು. ಇಡೀ ಕಾರ್ಯಕ್ರಮವನ್ನು ಶಿಕ್ಷಕರ ಮಾರ್ಗದರ್ಶನದಂತೆ ಮಕ್ಕಳೇ ನಿರ್ವಹಿಸಿದುದು ವಿಶೇಷವಾಗಿತ್ತು.

Share this article